Home Psalm 113 · ಕನ್ನಡ ಬೈಬಲ್

Psalm

Chapter 113

ಕನ್ನಡ ಬೈಬಲ್
1ಕರ್ತನನ್ನು ಸ್ತುತಿಸಿರಿ; ಕರ್ತನ ಸೇವಕರೇ; ಸ್ತುತಿಸಿರಿ; ಕರ್ತನ ಹೆಸರನ್ನು ಸ್ತುತಿಸಿರಿ;
2ಇಂದಿನಿಂದ ಯುಗಯುಗಕ್ಕೂ ಕರ್ತನ ಹೆಸರಿಗೆ ಸ್ತುತಿಯುಂಟಾಗಲಿ.
3ಸೂರ್ಯೋದಯ ದಿಂದ ಅದರ ಅಸ್ತಮಾನದ ವರೆಗೂ ಕರ್ತನ ಹೆಸರು ಸ್ತುತಿಸಲ್ಪಡತಕ್ಕದ್ದು.
4ಕರ್ತನು ಎಲ್ಲಾ ಜನಾಂಗಗಳ ಮೇಲೆ ಉನ್ನತವಾದವನು; ಆತನ ಮಹಿಮೆಯು ಆಕಾ ಶಗಳ ಮೇಲೆ ಇದೆ.
5ನಮ್ಮ ದೇವರಾದ ಕರ್ತನ ಹಾಗೆ ಯಾರಿದ್ದಾರೆ? ಉನ್ನತದಲ್ಲಿ ಆತನು ವಾಸಿಸುತ್ತಾನೆ.
6ಆಕಾಶದ ಮೇಲೆಯೂ ಭೂಮಿಯ ಮೇಲೆಯೂ ದೃಷ್ಟಿ ಇಡುವದಕ್ಕೆ ಆತನು ತನ್ನನ್ನು ತಗ್ಗಿಸಿಕೊಳ್ಳುತ್ತಾನೆ.
7ಅಧಿಪತಿಗಳ ಸಂಗಡವೂ ತನ್ನ ಜನರ ಅಧಿಪತಿಗಳ ಸಂಗಡವೂ ಕುಳ್ಳಿರಿಸುವದಕ್ಕೆ,
8ಧೂಳಿನೊಳಗಿಂದ ದರಿದ್ರನನ್ನು ಏಳಮಾಡಿ ತಿಪ್ಪೆಯೊಳಗಿಂದ ಬಡವನನ್ನು ಎತ್ತುತ್ತಾನೆ.ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
9ಬಂಜೆಯಾದವಳನ್ನು ಮಕ್ಕಳ ಸಂತೋಷ ವುಳ್ಳ ತಾಯಿಯಾಗಿ ಮನೆಯಲ್ಲಿ ನಿವಾಸಿಸುವಂತೆ ಮಾಡುತ್ತಾನೆ ಕರ್ತನನ್ನು ಸ್ತುತಿಸಿರಿ.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme