Home Psalm 108 · ಕನ್ನಡ ಬೈಬಲ್

Psalm

Chapter 108

ಕನ್ನಡ ಬೈಬಲ್
1ಓ ದೇವರೇ, ನನ್ನ ಹೃದಯವು ಸಿದ್ಧವಾಗಿದೆ; ನಾನು ನನ್ನ ಹೆಚ್ಚಳ ದೊಂದಿಗೆ ಹಾಡಿ ಕೀರ್ತಿಸುವೆನು.
2ವೀಣೆಯೇ, ಕಿನ್ನರಿಯೇ, ಎಚ್ಚರವಾಗು; ನಾನು ಉದಯದಲ್ಲಿ ಎಚ್ಚರಗೊಳ್ಳುವೆನು.
3ಕರ್ತನೇ, ಜನರಲ್ಲಿ ನಿನ್ನನ್ನು ಕೊಂಡಾಡುವೆನು; ಜನಾಂಗಗಳಲ್ಲಿ ನಿನ್ನನ್ನು ಕೀರ್ತಿಸು ವೆನು.
4ಆಕಾಶಕ್ಕಿಂತ ನಿನ್ನ ಕರುಣೆಯೂ ಮೇಘಗಳನ್ನು ನಿಲುಕುವಂಥ ನಿನ್ನ ಸತ್ಯವೂ ದೊಡ್ಡದು.
5ದೇವರೇ, ಆಕಾಶಗಳ ಮೇಲೆ ನೀನು ಘನಹೊಂದು; ಭೂಮಿಯ ಮೇಲೆ ನಿನ್ನ ಮಹಿಮೆಯು ಇರಲಿ.
6ನಿನ್ನ ಪ್ರಿಯರು ಬಿಡುಗಡೆಯಾಗುವ ಹಾಗೆ ನಿನ್ನ ಬಲಗೈಯಿಂದ ರಕ್ಷಿಸಿ ನನಗೆ ಉತ್ತರ ಕೊಡು.
7ದೇವರು ತನ್ನ ಪರಿಶುದ್ಧತ್ವದಲ್ಲಿ ನುಡಿದಿದ್ದಾನೆ; ನಾನು ಉತ್ಸಾಹ ಪಡುವೆನು. ಶೆಕೆಮನ್ನು ಹಂಚುವೆನು, ಸುಕ್ಕೋತಿನ ತಗ್ಗನ್ನು ಅಳತೆ ಮಾಡುವೆನು.
8ಗಿಲ್ಯಾದ್‌ ನನ್ನದು; ಮನಸ್ಸೆ ನನ್ನದು; ಎಫ್ರಾಯಾಮ್‌ ನನ್ನ ತಲೆಯ ಬಲಸ್ಥಾನವು; ಯೆಹೂದವು ನನ್ನ ರಾಜ ದಂಡವಾಗಿದೆ
9ಮೋವಾಬ್‌ ನನ್ನನ್ನು ತೊಳೆಯುವ ಪಾತ್ರೆಯು; ಏದೋಮಿನ ಮೇಲೆ ನನ್ನ ಕೆರವನ್ನು ಎಸೆಯುವೆನು; ಫಿಲಿಷ್ಟಿಯದ ಮೇಲೆ ಜಯಧ್ವನಿಗೈಯುವೆನು.
10ಬಲ ವುಳ್ಳ ಪಟ್ಟಣಕ್ಕೆ ನನ್ನನ್ನು ಕರೆತರುವವನಾರು? ಏದೋಮಿನ ವರೆಗೆ ನನ್ನನ್ನು ನಡಿಸುವವನಾರು?
11ದೇವರೇ, ನಮ್ಮನ್ನು ತೊರೆದು ಬಿಟ್ಟವನು ನೀನೇ ಅಲ್ಲವೋ? ನಮ್ಮ ಸೈನ್ಯಗಳ ಸಂಗಡ ಹೊರಟು ಹೋಗದೆ ಇದ್ದ ದೇವರು ನೀನಲ್ಲವೋ?
12ಇಕ್ಕಟ್ಟಿ ನಲ್ಲಿರುವ ನಮಗೆ ಸಹಾಯಕೊಡು; ಮನುಷ್ಯನ ಸಹಾಯವು ವ್ಯರ್ಥವಾಗಿದೆ.ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
13ದೇವರಿಂದ ಪರಾ ಕ್ರಮ ಕಾರ್ಯಗಳನ್ನು ಮಾಡುವೆವು; ಆತನೇ ನಮ್ಮ ವೈರಿಗಳನ್ನು ತುಳಿದುಬಿಡುವನು.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme