Home Psalm 58 · ಕನ್ನಡ ಬೈಬಲ್

Psalm

Chapter 58

ಕನ್ನಡ ಬೈಬಲ್
1ಓ ಸಭೆಯೇ, ನೀವು ನಿಜವಾಗಿ ನೀತಿಯನ್ನು ನುಡಿಯುವಿರೋ? ಓ ಮನುಷ್ಯರ ಮಕ್ಕಳೇ, ನೀವು ಯಥಾರ್ಥವಾಗಿ ನ್ಯಾಯತೀರಿಸು ವಿರೋ?
2ಹೌದು, ನಿಮ್ಮ ಹೃದಯದಲ್ಲಿ ದುಷ್ಟತ್ವ ವನ್ನು ಮಾಡುತ್ತೀರಲ್ಲಾ, ಲೋಕದಲ್ಲಿ ನಿಮ್ಮ ಕೈಗಳ ಬಲಾತ್ಕಾರವನ್ನು ತೂಗುತ್ತೀರಲ್ಲಾ.
3ದುಷ್ಟರು ಗರ್ಭದಿಂದಲೇ ದೂರವಾಗುತ್ತಾರೆ; ಹುಟ್ಟಿದಾಗಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.
4ಹಾವಿನ ವಿಷದ ಹಾಗೆ ಅವರ ವಿಷವುಂಟು; ಅವರು ಕಿವಿಯನ್ನು ಮುಚ್ಚಿಕೊಳ್ಳುವ ಕಿವುಡ ಸರ್ಪದ ಹಾಗಿ ದ್ದಾರೆ.
5ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದೆ ಕಿವಿಗೊಡದ ಕಳ್ಳಹಾವಿ ನಂತೆ ಇರುತ್ತಾರೆ.
6ಓ ದೇವರೇ, ಅವರ ಬಾಯಿ ಯಲ್ಲಿರುವ ಹಲ್ಲುಗಳನ್ನು ಮುರಿದುಬಿಡು; ಓ ಕರ್ತನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಒಡೆದು ಬಿಡು;
7ಬಿಡದೆ ಹರಿಯುವ ನೀರಿನಂತೆ ಅವರು ಕರಗಿ ಹೋಗಲಿ; ಅವನು ತನ್ನ ಬಾಣಗಳನ್ನು ಗುರಿಯಿಟ್ಟಾಗ ಅವರು ಕಡಿಯಲ್ಪಟ್ಟ ತುಂಡುಗಳಂತಿರಲಿ.
8ಬಸವನ ಹುಳವು ಕರಗಿಹೋಗುವಂತೆ ಅವರಲ್ಲಿ ಪ್ರತಿಯೊಬ್ಬನು ಗತಿಸಿಹೋಗಲಿ; ದಿನ ತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ದೃಷ್ಟಿಸರು.
9ನಿಮ್ಮ ಗಡಿಗೆಗಳಿಗೆ ಮುಳ್ಳಿನಕಾವು ತಾಗುವದಕ್ಕಿಂತ ಮುಂಚೆ ಅದು ಹಸಿ ಇರುವಾಗಲೇ ದೇವರು ಕೋಪದಿಂದ ಬಿರುಗಾಳಿಯಿಂ ದಲೋ ಎಂಬಂತೆ ಅವರನ್ನು ಹಾರಿಸಿಬಿಡುವನು.
10ಮುಯ್ಯಿಗೆಮುಯ್ಯಿ ಆಗುವದನ್ನು ನೀತಿವಂತನು ದೃಷ್ಟಿಸುವಾಗ ಅವನು ಸಂತೋಷ ಪಡುವನು; ಅವನು ತನ್ನ ಪಾದಗಳನ್ನು ದುಷ್ಟರ ರಕ್ತ ದಲ್ಲಿ ತೊಳೆಯುವನು.ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು.
11ನಿಶ್ಚಯವಾಗಿ ನೀತಿವಂತನಿಗೆ ಪ್ರತಿಫಲವಿದೆ; ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯ ತೀರಿಸುವ ದೇವರು ಆತನೇ ಎಂದು ಮನುಷ್ಯನು ಹೇಳುವನು.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme