Psalm
Chapter 53
ಕನ್ನಡ ಬೈಬಲ್1ದೇವರಿಲ್ಲವೆಂದು ಮೂರ್ಖನು ತನ್ನ ಹೃದಯದಲ್ಲಿ ಅಂದುಕೊಂಡಿದ್ದಾನೆ. ಅವರು ಕೆಟ್ಟುಹೋಗಿ ಅಸಹ್ಯವಾದ ಅಪರಾಧವನ್ನು ಮಾಡಿದ್ದಾರೆ; ಒಳ್ಳೇದನ್ನು ಮಾಡುವವನು ಯಾವನೂ ಇಲ್ಲ.
2ದೇವರನ್ನು ಹುಡುಕುವ ಬುದ್ಧಿವಂತನು ಇದ್ದಾನೋ ಎಂದು ನೋಡುವದಕ್ಕೆ ದೇವರು ಆಕಾ ಶದಿಂದ ಮನುಷ್ಯರೆಲ್ಲರನ್ನು ದೃಷ್ಟಿಸಿ ನೋಡಿದಾಗ
3ಎಲ್ಲರು ಹಿಂದಿರುಗಿದ್ದಾರೆ; ಒಟ್ಟಾಗಿ ಹೊಲೆಯಾಗಿ ದ್ದಾರೆ. ಒಳ್ಳೇದನ್ನು ಮಾಡುವವನು ಇಲ್ಲ, ಒಬ್ಬನಾ ದರೂ ಇಲ್ಲ.
4ರೊಟ್ಟಿತಿನ್ನುವ ಪ್ರಕಾರ ನನ್ನ ಜನರನ್ನು ತಿಂದು ದೇವರನ್ನು ಸ್ಮರಿಸದೆ ಅಪರಾಧಮಾಡುವವರು ಅರಿ ಯರೋ?
5ಭಯವಿಲ್ಲದಿರುವಲ್ಲಿ ಅವರು ಭಯ ಭ್ರಾಂತರಾದರು; ನಿನಗೆ ವಿರೋಧವಾಗಿ ದಂಡು ಇಳಿ ಸುವವನ ಎಲುಬುಗಳನ್ನು ದೇವರು ಚದರಿಸಿ ಬಿಟ್ಟಿ ದ್ದಾನೆ. ನೀನು ಅವರನ್ನು ನಾಚಿಕೆಪಡಿಸಿದ್ದೀ; ದೇವರು ಅವರನ್ನು ತಿರಸ್ಕರಿಸಿದ್ದಾನೆ.ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬಂದರೆ ಎಷ್ಟೋ ಒಳ್ಳೇದು. ದೇವರು ತನ್ನ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬನು ಉಲ್ಲಾಸಿಸುವನು, ಇಸ್ರಾಯೇಲನು ಸಂತೋಷಿ ಸುವನು.
6ಚೀಯೋನಿನಿಂದ ಇಸ್ರಾಯೇಲಿನ ರಕ್ಷಣೆಯು ಬಂದರೆ ಎಷ್ಟೋ ಒಳ್ಳೇದು. ದೇವರು ತನ್ನ ಜನರನ್ನು ಸೆರೆಯಿಂದ ತಿರುಗಿ ಬರಮಾಡುವಾಗ ಯಾಕೋಬನು ಉಲ್ಲಾಸಿಸುವನು, ಇಸ್ರಾಯೇಲನು ಸಂತೋಷಿ ಸುವನು.
Bible Study with Steffi App
Download Free ↗
Memorize verses with spaced repetition. Free, no ads, 15+ languages.