Home Psalm 63 · ಕನ್ನಡ ಬೈಬಲ್

Psalm

Chapter 63

ಕನ್ನಡ ಬೈಬಲ್
1ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.
2ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.
3ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು.
4ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು.
5ನಾನು ರಾತ್ರಿ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುವಾಗ
6ಸಾರದಿಂದಲೂ ಕೊಬ್ಬಿನಿಂದಲೂ ನನ್ನ ಪ್ರಾಣವು ತೃಪ್ತಿಯಾಗುವದು; ಆಗ ನನ್ನ ಬಾಯಿಯು ಉತ್ಸಾಹದ ತುಟಿಗಳಿಂದ ನಿನ್ನನ್ನು ಸ್ತುತಿಸುವದು.
7ನೀನು ನನ್ನ ಸಹಾಯಕನಾಗಿರುವದರಿಂದ ನಿನ್ನ ರೆಕ್ಕೆಗಳ ನೆರಳಿನಲ್ಲಿ ನಾನು ಉತ್ಸಾಹಪಡುವೆನು.
8ನನ್ನ ಪ್ರಾಣವು ನಿನ್ನನ್ನು ಹಿಂಬಾಲಿಸಿ ಬರುತ್ತದೆ; ನಿನ್ನ ಬಲಗೈ ನನ್ನನ್ನು ಗಟ್ಟಿ ಯಾಗಿ ಎತ್ತಿಹಿಡಿಯುತ್ತದೆ.
9ಆದರೆ ನನ್ನ ಪ್ರಾಣವನ್ನು ನಾಶಮಾಡುವದಕ್ಕೆ ಹುಡುಕುವವರು ಭೂಮಿಯ ಕೆಳಭಾಗಗಳಿಗೆ ಹೋಗು ವರು.
10ಕತ್ತಿಯಿಂದ ಅವರು ಬೀಳುವರು; ನರಿಗಳ ಪಾಲಾಗುವರು.ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು.
11ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme