Psalm
Chapter 89
ಕನ್ನಡ ಬೈಬಲ್1ಕರ್ತನ ಕರುಣೆಗಳನ್ನು ಯುಗಯುಗಕ್ಕೂ ಹಾಡುವೆನು; ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯನ್ನು ನನ್ನ ಬಾಯಿಂದ ತಿಳಿಯಪಡಿ ಸುವೆನು.
2ಎಂದೆಂದಿಗೂ ಕರುಣೆಯು ಸ್ಥಾಪಿಸಲ್ಪಡು ವದು; ಆಕಾಶಗಳಲ್ಲಿಯೂ ನಿನ್ನ ನಂಬಿಗಸ್ತಿಕೆಯನ್ನು ಸ್ಥಿರಪಡಿಸುವಿ ಎಂದು ಹೇಳಿದ್ದೇನೆ.
3ನಾನು ಆದು ಕೊಂಡವನೊಂದಿಗೆ ಒಡಂಬಡಿಕೆ ಮಾಡಿದ್ದೇನೆ; ನನ್ನ ಸೇವಕನಾದ ದಾವೀದನಿಗೆ ಆಣೆ ಇಟ್ಟು ಹೇಳಿದ್ದೇ ನಂದರೆ--
4ಎಂದೆಂದಿಗೂ ನಿನ್ನ ಸಂತತಿಯನ್ನು ಸ್ಥಿರ ಪಡಿಸುವೆನು; ತಲತಲಾಂತರಕ್ಕೂ ನಿನ್ನ ಸಿಂಹಾಸನವನ್ನು ಕಟ್ಟುವೆನು ಸೆಲಾ.
5ಇದಲ್ಲದೆ, ಆಕಾಶಗಳು ಓ ಕರ್ತನೇ, ನಿನ್ನ ಅದ್ಭುತಗಳನ್ನು ಪರಿಶುದ್ಧರ ಸಭೆಯಲ್ಲಿ ನಿನ್ನ ನಂಬಿಗಸ್ತಿಕೆಯನ್ನು ಸಹ ಕೊಂಡಾಡುವವು.
6ಪರ ಲೋಕದಲ್ಲಿ ಕರ್ತನಿಗೆ ಸಮಾನವಾದವನು ಯಾರು? ಪರಾಕ್ರಮಶಾಲಿಗಳ ಮಕ್ಕಳಲ್ಲಿ ಕರ್ತನಿಗೆ ಸಮಾನನಾದವನು ಯಾರು?
7ದೇವರು ಪರಿಶುದ್ಧರ ಸಭೆಯಲ್ಲಿ ಬಹಳ ಭೀಕರನೂ ತನ್ನ ಸುತ್ತಲಿರುವವರೆಲ್ಲರಿಗೆ ಭಯಂ ಕರನೂ ಆಗಿದ್ದಾನೆ.
8ಸೈನ್ಯಗಳ ದೇವರಾದ ಕರ್ತನೇ, ನಿನ್ನ ಹಾಗೆ ಶಕ್ತನಾದ ಕರ್ತನು ಯಾರು? ಇಲ್ಲವೆ ನಿನ್ನ ನಂಬಿಗಸ್ತಿಕೆಯು ನಿನ್ನ ಸುತ್ತಲೂ ಅದೆ.
9ನೀನು ಸಮುದ್ರದ ಉಬ್ಬರವನ್ನು ಆಳುತ್ತೀ; ಅದರ ತೆರೆಗಳು ಏಳುವಾಗ ಅವುಗಳನ್ನು ಸುಮ್ಮನಿರಿಸುತ್ತೀ.
10ಕೊಲ್ಲ ಲ್ಪಟ್ಟ ಒಬ್ಬನಂತೆ ನೀನು ರಾಹಬನ್ನು ತುಂಡಾಗುವಂತೆ ಒಡೆದಿದ್ದೀ. ನಿನ್ನ ಬಲದ ತೋಳಿನಿಂದ ನಿನ್ನ ಶತ್ರು ಗಳನ್ನು ಚದರಿಸಿ ಬಿಟ್ಟಿದ್ದೀ.
11ಆಕಾಶಗಳು ನಿನ್ನವು; ಭೂಮಿಯು ಸಹ ನಿನ್ನದು; ಲೋಕವನ್ನೂ ಅದರ ಪೂರ್ಣತೆಯನ್ನೂ ನೀನು ಉಂಟುಮಾಡಿದ್ದೀ.
12ಉತ್ತರವನ್ನೂ ದಕ್ಷಿಣವನ್ನೂ ನೀನೇ ನಿರ್ಮಿಸಿದ್ದೀ; ತಾಬೋರೂ ಹೆರ್ಮೋನೂ ನಿನ್ನ ಹೆಸರಿನಲ್ಲಿ ಉತ್ಸಾಹ ಧ್ವನಿಗೈಯುತ್ತವೆ.
13ನಿನಗೆ ಪರಾಕ್ರಮವುಳ್ಳ ತೋಳು ಉಂಟು; ಕೈ ಬಲವುಳ್ಳದ್ದು. ನಿನ್ನ ಬಲಗೈ ಉನ್ನತವಾ ದದ್ದು.
14ನೀತಿಯೂ ನ್ಯಾಯವೂ ನಿನ್ನ ಸಿಂಹಾಸನದ ಸ್ಥಳವಾಗಿದೆ ಕೃಪೆಯೂ ಸತ್ಯವೂ ನಿನ್ನ ಮುಂದೆ ಹೋಗುತ್ತವೆ;
15ಉತ್ಸಾಹ ಧ್ವನಿಯನ್ನು ತಿಳಿದ ಜನರು ಧನ್ಯರು; ಕರ್ತನೇ, ನಿನ್ನ ಮುಖದ ಬೆಳಕಿನಲ್ಲಿ ಅವರು ನಡೆದುಕೊಳ್ಳುವರು.
16ನಿನ್ನ ಹೆಸರಿನಿಂದ ದಿನವೆಲ್ಲಾ ಉಲ್ಲಾಸಪಟ್ಟು ನಿನ್ನ ನೀತಿಯಲ್ಲಿ ಅವರು ಉನ್ನತಕ್ಕೇರು ವರು.
17ಅವರ ಬಲದ ಮಹಿಮೆಯು ನೀನೇ ಮತ್ತು ನಿನ್ನ ಕಟಾಕ್ಷದಿಂದ ನಮ್ಮ ಕೊಂಬು ಉನ್ನತವಾಗುವದು.
18ನಮ್ಮ ಗುರಾಣಿಯು ಕರ್ತನೇ; ನಮ್ಮ ಅರಸನು ಇಸ್ರಾಯೇಲಿನ ಪರಿಶುದ್ಧನೇ.
19ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ.
20ನನ್ನ ಸೇವಕನಾದ ದಾವೀದನನ್ನು ಕಂಡು ಕೊಂಡಿದ್ದೇನೆ; ನನ್ನ ಪರಿಶುದ್ಧ ಎಣ್ಣೆಯಿಂದ ಅವನನ್ನು ಅಭಿಷೇಕಿಸಿದ್ದೇನೆ.
21ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು.
22ಶತ್ರುವು ಅವನನ್ನು ಬಲಾತ್ಕಾರ ಮಾಡನು; ಯಾವ ದುಷ್ಟನೂ ಅವನನ್ನು ಹಿಂಸೆ ಪಡಿಸನು.
23ಇದ ಲ್ಲದೆ ಅವನ ಮುಂದೆ ವೈರಿಗಳನ್ನು ಹೊಡೆದು ಬಿಡು ವೆನು; ಅವನ ಹಗೆಯವರನ್ನು ಸಂಕಟಪಡಿಸುವೆನು.
24ಆದರೆ ನನ್ನ ನಂಬಿಗಸ್ತಿಕೆಯೂ ಕರುಣೆಯೂ ಅವನ ಸಂಗಡ ಇರುವವು. ನನ್ನ ಹೆಸರಿನಲ್ಲಿ ಅವನ ಕೊಂಬು ಉನ್ನತವಾಗುವದು.
25ಸಮುದ್ರದಲ್ಲಿ ಅವನ ಕೈ ಯನ್ನೂ ನದಿಗಳಲ್ಲಿ ಅವನ ಬಲಗೈಯನ್ನೂ ಇರಿಸು ವೆನು.
26ಅವನು--ನೀನು ನನ್ನ ತಂದೆಯೂ ದೇವರೂ ರಕ್ಷಣೆಯ ಬಂಡೆಯೂ ಎಂದು ನನಗೆ ಮೊರೆಯಿಡು ವನು.
27ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು.
28ಎಂದೆಂದಿಗೂ ಅವನಿಗೋ ಸ್ಕರ ನನ್ನ ಕರುಣೆಯನ್ನು ಕಾದಿಡುವೆನು. ನನ್ನ ಒಡಂಬಡಿಕೆಯು ಅವನೊಂದಿಗೆ ದೃಢವಾಗಿರುವದು.
29ಅವನ ಸಂತತಿ ಯನ್ನು ಸಹ ಎಂದೆಂದಿಗೂ ಅವನ ಸಿಂಹಾಸನವನ್ನು ಆಕಾಶದ ದಿವಸಗಳ ಹಾಗೆಯೂ ಮಾಡುವೆನು.
30ಅವನ ಮಕ್ಕಳು ನನ್ನ ನ್ಯಾಯ ಪ್ರಮಾಣವನ್ನು ಬಿಟ್ಟು, ನನ್ನ ನ್ಯಾಯಗಳಲ್ಲಿ ನಡೆಯದೇ ಹೋದರೆ,
31ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ,
32ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.
33ಆದಾಗ್ಯೂ ನನ್ನ ಪ್ರೀತಿ ಕರುಣೆಯನ್ನು ಅವನಿಂದ ಸಂಪೂರ್ಣವಾಗಿ ತೊಲಗಿಸೆನು; ಇಲ್ಲವೇ ನನ್ನ ನಂಬಿಗಸ್ತಿಕೆಯನ್ನು ವ್ಯರ್ಥ ಮಾಡೆನು.
34ನನ್ನ ಒಡಂಬಡಿಕೆಯನ್ನು ನಾನು ಮುರಿ ಯೆನು; ಇಲ್ಲವೆ ನನ್ನ ತುಟಿಗಳಿಂದ ಹೊರಟದ್ದನ್ನು ಬದಲಾಯಿಸೆನು.
35ಒಂದು ಸಾರಿ ನನ್ನ ಪರಿಶುದ್ಧತ್ವ ದಿಂದ ಆಣೆಯಿಟ್ಟು ಹೇಳಿದ್ದೇನೆ; ದಾವೀದನಿಗೆ ಸುಳ್ಳಾ ಡೆನು.
36ಅವನ ಸಂತತಿಯು ಯುಗ ಯುಗಕ್ಕೂ ಅವನ ಸಿಂಹಾಸನವು ನನ್ನ ಮುಂದೆ ಸೂರ್ಯನ ಹಾಗೆಯೂ ಇರುವದು.
37ಚಂದ್ರನ ಹಾಗೆ ಅದು ಯುಗಯುಗಕ್ಕೂ, ಸ್ಥಿರವಾಗಿರುವದು; ಪರಲೋಕದಲ್ಲಿ ರುವ ಸಾಕ್ಷಿಯ ಹಾಗೆ ನಂಬಿಕೆ ಯುಳ್ಳದ್ದಾಗಿರುವದು ಸೆಲಾ.
38ಆದರೆ ನೀನು ಅಸಹ್ಯಿಸಿಬಿಟ್ಟು ತಿರಸ್ಕರಿಸಿ ನಿನ್ನ ಅಭಿಷಕ್ತನ ಮೇಲೆ ಉಗ್ರನಾದಿ;
39ನಿನ್ನ ಸೇವಕನ ಒಡಂಬಡಿಕೆಯನ್ನು ಅಸಡ್ಡೆಮಾಡಿ, ಅವನ ಕಿರೀಟವನ್ನು ನೆಲಕ್ಕೆ ಹಾಕಿ ಹೊಲೆ ಮಾಡಿದ್ದೀ.
40ಅವನ ಬೇಲಿಗಳ ನ್ನೆಲ್ಲಾ ಮುರಿದು ಅವನ ಕೋಟೆಗಳನ್ನು ಹಾಳು ಮಾಡಿದ್ದೀ.
41ಮಾರ್ಗಸ್ಥರೆಲ್ಲರು ಅವನನ್ನು ಕೊಳ್ಳೇ ಹೊಡೆಯುತ್ತಾರೆ; ತನ್ನ ನೆರೆಯವರಿಗೆ ಅವನು ನಿಂದೆ ಯಾಗಿದ್ದಾನೆ.
42ಅವನ ವೈರಿಗಳ ಬಲಗೈಯನ್ನು ಉನ್ನತ ಮಾಡಿದ್ದೀ; ಶತ್ರುಗಳೆಲ್ಲರನ್ನು ಸಂತೋಷಪಡಿಸಿದ್ದೀ.
43ಅವನ ಕತ್ತಿಯ ಬಾಯನ್ನು ಹಿಂದಿರುಗಿಸಿ, ಯುದ್ಧ ದಲ್ಲಿ ಅವನನ್ನು ನಿಲ್ಲುವಂತೆ ಮಾಡಲಿಲ್ಲ.
44ಅವನ ಪ್ರಭೆಯನ್ನು ತಡೆದಿ; ಅವನ ಸಿಂಹಾಸನವನ್ನು ನೆಲಕ್ಕೆ ಹಾಕಿದ್ದೀ.
45ಅವನ ಯೌವನದ ದಿವಸಗಳನ್ನು ಕಡಿಮೆಮಾಡಿ, ನಾಚಿಕೆಯಿಂದ ಅವನನ್ನು ಮುಚ್ಚಿದ್ದೀ ಸೆಲಾ.
46ಕರ್ತನೇ, ಎಷ್ಟರ ವರೆಗೆ? ಸದಾಕಾಲಕ್ಕೆ ನೀನು ಮರೆಯಾಗಿರುವಿ? ನಿನ್ನ ಸಿಟ್ಟು ಬೆಂಕಿಯ ಹಾಗೆ ಉರಿಯುವದೋ?
47ನನ್ನ ಆಯುಸ್ಸು ಎಷ್ಟು ಕಡಿಮೆ ಯೆಂದು ಜ್ಞಾಪಕಮಾಡಿಕೋ; ಎಲ್ಲಾ ಮನುಷ್ಯರನ್ನು ಯಾಕೆ ವ್ಯರ್ಥವಾಗಿ ನಿರ್ಮಿಸಿದ್ದೀ?
48ಮರಣವನ್ನು ನೋಡದೆ ಬದುಕುವಂಥ, ಸಮಾಧಿಯ ವಶದಿಂದ ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳುವಂಥ, ಪುರುಷನು ಯಾರು ಸೆಲಾ.
49ಕರ್ತನೇ, ನಿನ್ನ ಸತ್ಯದಲ್ಲಿ ನೀನು ದಾವೀದನಿಗೆ ಆಣೆ ಇಟ್ಟ ನಿನ್ನ ಮುಂಚಿನ ಪ್ರೀತಿ ಕರುಣೆಯು ಎಲ್ಲಿ?
50ಕರ್ತನೇ, ನಿನ್ನ ಸೇವಕರ ನಿಂದೆ ಯನ್ನು, ಎಲ್ಲಾ ಪರಾಕ್ರಮಿಗಳ ನಿಂದೆಯನ್ನು ನಾನು ಹೇಗೆ ನನ್ನ ಎದೆಯಲ್ಲಿ ಹೊತ್ತೆನೆಂದೂ ಜ್ಞಾಪಕ ಮಾಡಿಕೋ.
51ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ?ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
52ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
Bible Study with Steffi App
Download Free ↗
Memorize verses with spaced repetition. Free, no ads, 15+ languages.