Psalm
Chapter 94
ಕನ್ನಡ ಬೈಬಲ್1ಓ ಕರ್ತನೇ, ದೇವರೇ ಮುಯ್ಯಿ ತೀರಿಸುವದು ನಿನ್ನದು; ಓ ದೇವರೇ, ಮುಯ್ಯಿ ತೀರಿಸುವದು ನಿನಗೆ ಸೇರಿದ್ದು. ನಿನ್ನನ್ನು ಪ್ರಕಟಿಸಿಕೋ.
2ಭೂಮಿಯ ನ್ಯಾಯಾಧಿಪತಿಯೇ, ನೀನು ಎದ್ದೇಳು; ಗರ್ವಿಷ್ಠರಿಗೆ ಪ್ರತೀಕಾರವನ್ನು ಕೊಡು.
3ಕರ್ತನೇ, ದುಷ್ಟರು ಎಷ್ಟರ ವರೆಗೆ ದುಷ್ಟರು ಎಷ್ಟರ ವರೆಗೆ ಜಯಿಸುವರು?
4ಎಷ್ಟುಕಾಲ ಕಠಿಣ ವಾದವುಗಳನ್ನು ನುಡಿದು ಮಾತಾಡುತ್ತಾರೆ? ದುಷ್ಟತನ ಮಾಡುವವರೆಲ್ಲರು ಹೆಚ್ಚಿಸಿಕೊಳ್ಳುತ್ತಾರೆ;
5ಓ ಕರ್ತನೇ, ನಿನ್ನ ಜನರನ್ನು ತುಂಡುತುಂಡು ಮಾಡುತ್ತಾರೆ; ನಿನ್ನ ಸ್ವಾಸ್ಥ್ಯವನ್ನು ಬಾಧಿಸುತ್ತಾರೆ.
6ವಿಧವೆಯನ್ನೂ ಪರ ದೇಶಸ್ಥನನ್ನೂ ಅವರು ಕೊಲ್ಲುತ್ತಾರೆ; ದಿಕ್ಕಿಲ್ಲದವರನ್ನು ಹತಮಾಡುತ್ತಾರೆ.
7ಕರ್ತನು ನೋಡುವದಿಲ್ಲ; ಇಲ್ಲವೆ ಯಾಕೋಬನ ದೇವರು ಲಕ್ಷಿಸುವದಿಲ್ಲ ಅನ್ನುತ್ತಾರೆ.
8ಜನರಲ್ಲಿ ಪಶುಪ್ರಾಯದವರೇ, ನೀವು ಗ್ರಹಿಸಿರಿ; ಹುಚ್ಚರೇ, ಯಾವಾಗ ಬುದ್ಧಿವಂತರಾಗುವಿರಿ?
9ಕಿವಿ ಯನ್ನು ಕೊಟ್ಟವನು ಕೇಳನೋ? ಕಣ್ಣನ್ನು ರೂಪಿಸಿದವನು ತಿಳಿಯನೋ?
10ಜನಾಂಗಗಳನ್ನು ಶಿಕ್ಷಿಸುವ ವನೂ ಮನುಷ್ಯನಿಗೆ ತಿಳುವಳಿಕೆಯನ್ನು ಕಲಿಸುವವನೂ ಗದರಿಸನೋ?
11ಕರ್ತನು ಮನುಷ್ಯನ ಯೋಚನೆ ಗಳನ್ನು ವ್ಯರ್ಥವೆಂದು ತಿಳುಕೊಳ್ಳುತ್ತಾನೆ.
12ಓ ಕರ್ತನೇ, ನೀನು ಶಿಕ್ಷಿಸುವವನೂ ನಿನ್ನ ನ್ಯಾಯ ಪ್ರಮಾಣದಿಂದ ಯಾರಿಗೆ ಕಲಿಸುವಿಯೋ ಅವನು ಧನ್ಯನು.
13ದುಷ್ಟನಿಗಾಗಿ ಕುಣಿಯು ಅಗಿಯಲ್ಪಡುವ ವರೆಗೆ ಕಷ್ಟದ ದಿವಸಗಳಲ್ಲಿ ಅಂಥವನಿಗೆ ವಿಶ್ರಾಂತಿ ಯನ್ನು ಕೊಡುವನು.
14ಕರ್ತನು ತನ್ನ ಜನರನ್ನು ತೊರೆಯನು; ಇಲ್ಲವೆ ತನ್ನ ಸ್ವಾಸ್ಥ್ಯವನ್ನು ಬಿಟ್ಟುಬಿಡನು.
15ನ್ಯಾಯವು ನೀತಿಗೆ ತಿರುಗಿಕೊಳ್ಳುವದು; ಯಥಾರ್ಥ ಹೃದಯದವರೆಲ್ಲರು ಅದನ್ನು ಹಿಂಬಾಲಿಸುವರು.
16ನನಗೋಸ್ಕರ ದುರ್ಮಾರ್ಗಿಗಳಿಗೆ ವಿರೋಧ ವಾಗಿ ಏಳುವವನ್ಯಾರು? ಇಲ್ಲವೆ ಅಪರಾಧ ಮಾಡು ವವರಿಗೆ ವಿರೋಧವಾಗಿ ನನಗೋಸ್ಕರ ನಿಂತು ಕೊಳ್ಳುವವನಾರು?
17ಕರ್ತನು ನನಗೆ ಸಹಾಯಕ ನಾಗಿರದಿದ್ದರೆ ನನ್ನ ಪ್ರಾಣವು ಮೌನದಲ್ಲಿ ವಾಸಿಸ ಬೇಕಾಗಿತ್ತು.
18ನನ್ನ ಕಾಲುಜಾರಿತೋ ಎಂದು ನಾನು ಅಂದಾಗಲೇ ಓ ಕರ್ತನೇ, ನಿನ್ನ ಕರುಣೆಯು ನನ್ನನ್ನು ಎತ್ತಿಹಿಡಿಯಿತು.
19ನನ್ನ ಚಿಂತೆಗಳು ಅಂತರಂಗದಲ್ಲಿ ಹೆಚ್ಚುವಾಗ ನಿನ್ನ ಆದರಣೆಗಳು ನನ್ನ ಪ್ರಾಣವನ್ನು ಆನಂದಪಡಿಸುತ್ತವೆ.
20ವಿಧಿಯಿಂದ ಕೇಡನ್ನು ಕಲ್ಪಿಸುವ ಅಪರಾಧದ ಸಿಂಹಾಸನವು ನಿನ್ನ ಸಂಗಡ ಅನ್ಯೋನ್ಯವಾಗಿರು ವದೋ?
21ನೀತಿವಂತನ ಪ್ರಾಣಕ್ಕೆ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ನಿರಪರಾಧಿಯ ರಕ್ತವನ್ನು ಖಂಡಿಸುತ್ತಾರೆ.
22ಆದರೆ ಕರ್ತನು ನನಗೆ ದುರ್ಗವೂ ನನ್ನ ದೇವರು ನನ್ನ ಆಶ್ರಯದ ಬಂಡೆಯೂ ಆಗಿದ್ದಾನೆ.ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.
23ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.
Bible Study with Steffi App
Download Free ↗
Memorize verses with spaced repetition. Free, no ads, 15+ languages.