Home Bibles ಕೀರ್ತನೆಗಳು 111 · ಕನ್ನಡ ಬೈಬಲ್ ||

ಕೀರ್ತನೆಗಳು

Chapter 111

ಕನ್ನಡ ಬೈಬಲ್
1ಕರ್ತನನ್ನು ಸ್ತುತಿಸಿರಿ; ನಾನು ಕರ್ತನನ್ನು ಪೂರ್ಣಹೃದಯದಿಂದ ಯಥಾರ್ಥರ ಕೂಟದಲ್ಲಿಯೂ ಸಭೆಯಲ್ಲಿಯೂ ಕೊಂಡಾಡುವೆನು. 2ಕರ್ತನ ಕೆಲಸಗಳು ದೊಡ್ಡವು; ಅವುಗಳಲ್ಲಿ ಸಂತೋಷಪಡುವವರೆಲ್ಲರು ಅವುಗಳನ್ನು ಶೋಧಿಸುತ್ತಾರೆ. 3ಆತನ ಕೆಲಸವು ಪ್ರಭೆಯೂ ಮಹಿಮೆಯೂ ಉಳ್ಳದ್ದು; ಆತನ ನೀತಿಯು ಎಂದೆಂದಿಗೂ ನಿಲ್ಲುತ್ತದೆ. 4ಆತನು ತನ್ನ ಅದ್ಭುತಗಳನ್ನು ಕುರಿತು ಜ್ಞಾಪಕಮಾಡಿದ್ದಾನೆ; ಕರ್ತನು ಕೃಪಾಳುವೂ ಅಂತಃ ಕರಣವೂ ಉಳ್ಳಾತನೇ. 5ಆತನು ತನಗೆ ಭಯಪಡುವ ವರಿಗೆ ಆಹಾರ ಕೊಟ್ಟಿದ್ದಾನೆ; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವನು. 6ಅನ್ಯ ಜನರ ಬಾಧ್ಯತೆಯನ್ನು ಅವರಿಗೆ ಕೊಡುವ ಹಾಗೆ ತನ್ನ ಕೆಲಸಗಳ ಬಲವನ್ನು ಜನರಿಗೆ ತೋರಿಸಿದ್ದಾನೆ. 7ಆತನ ಕೈ ಕೆಲಸಗಳು ಸತ್ಯವೂ ನ್ಯಾಯವೂ ಆಗಿವೆ; ಆತನ ಕಟ್ಟಳೆಗಳೆಲ್ಲಾ ನಿಶ್ಚಯವಾದವುಗಳು. 8ಅವು ಯುಗಯುಗಾಂತರಗಳಿಗೂ ನೆಲೆಯಾಗಿ ನಿಲ್ಲುತ್ತವೆ. ಅವು ಸತ್ಯದಲ್ಲಿಯೂ ಯಥಾರ್ಥತೆಯಲ್ಲಿಯೂ ವಿಧಿಸ ಲ್ಪಟ್ಟಿವೆ. 9ತನ್ನ ಜನರಿಗೆ ವಿಮೋಚನೆಯನ್ನು ಕಳುಹಿ ಸಿದನು; ಯುಗಯುಗಕ್ಕೂ ತನ್ನ ಒಡಂಬಡಿಕೆಯನ್ನು ಆಜ್ಞಾಪಿಸಿದನು; ಆತನ ಹೆಸರು ಪರಿಶುದ್ಧವೂ ಘನವೂ ಆಗಿದೆ.ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ. 10ಕರ್ತನ ಭಯವು ಜ್ಞಾನದ ಮೂಲವು; ಆತನ ಆಜ್ಞೆಗಳನ್ನು ಕೈಕೊಳ್ಳುವವರಿಗೆ ತಿಳುವಳಿಕೆಯಿದೆ; ಆತನ ಸ್ತೋತ್ರವು ಎಂದೆಂದಿಗೂ ನಿಲ್ಲುತ್ತದೆ.

Choose Theme