Psalm
Chapter 99
ಕನ್ನಡ ಬೈಬಲ್1ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.
2ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.
3ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.
4ಅರಸನ ಬಲವು ನ್ಯಾಯವನ್ನು ಪ್ರೀತಿ ಮಾಡುತ್ತದೆ; ನೀನು ನೀತಿಯನ್ನು ಸ್ಥಿರಪಡಿಸುತ್ತೀ; ನ್ಯಾಯವನ್ನೂ ನೀತಿಯನ್ನೂ ಯಾಕೋ ಬಿನಲ್ಲಿ ನೀನು ಮಾಡಿದ್ದೀ.
5ನಮ್ಮ ದೇವರಾದ ಕರ್ತ ನನ್ನು ಉನ್ನತಪಡಿಸಿರಿ; ಆತನ ಪಾದ ಪೀಠದಲ್ಲಿ ಆರಾ ಧಿಸಿರಿ; ಆತನು ಪರಿಶುದ್ಧನೇ.
6ಆತನ ಯಾಜಕರಲ್ಲಿ ಮೋಶೆಯೂ ಆರೋನನೂ ಆತನ ಹೆಸರನ್ನು ಕರೆಯುವವರಲ್ಲಿ ಸಮುವೇಲನೂ; ಅವರು ಕರ್ತನನ್ನು ಕರೆದಾಗ ಆತನು ಅವರಿಗೆ ಉತ್ತರ ಕೊಟ್ಟನು.
7ಆತನು ಮೇಘಸ್ತಂಭದಲ್ಲಿಂದ ಅವರ ಸಂಗಡ ಮಾತನಾಡಿದನು; ಆತನ ಸಾಕ್ಷಿಗಳನ್ನೂ ಆತನು ಅವರಿಗೆ ಕೊಟ್ಟ ನಿಯಮಗಳನ್ನೂ ಅವರು ಕೈಕೊಂಡರು.
8ನಮ್ಮ ದೇವರಾದ ಓ ಕರ್ತನೇ, ನೀನು ಅವರಿಗೆ ಉತ್ತರಕೊಟ್ಟೆ; ಅವರ ಕೃತ್ಯಗಳಿಗೋಸ್ಕರ ನೀನು ಅವ ರಿಗೆ ಮುಯ್ಯಿಗೆ ಮುಯ್ಯಿ ಕೊಡುವಾತನಾಗಿದ್ದರೂ ಅವರನ್ನು ಕ್ಷಮಿಸುವ ದೇವರು ನೀನಾಗಿದ್ದೀ.ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.
9ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.
Bible Study with Steffi App
Download Free ↗
Memorize verses with spaced repetition. Free, no ads, 15+ languages.