Psalm
Chapter 118
ಕನ್ನಡ ಬೈಬಲ್1ಕರ್ತನಿಗೆ ಉಪಕಾರಸ್ತುತಿ ಮಾಡಿರಿ; ಆತನು ಒಳ್ಳೆಯವನು; ಆತನ ಕರು ಣೆಯು ಯುಗಯುಗಕ್ಕೂ ಇದೆ.
2ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಇಸ್ರಾಯೇಲ್ ಹೇಳಲಿ.
3ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಆರೋನನ ಮನೆಯವರು ಹೇಳಲಿ.
4ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಕರ್ತನಿಗೆ ಭಯಪಡುವವರು ಹೇಳಲಿ.
5ಇಕ್ಕಟ್ಟಿನೊಳಗಿಂದ ಕರ್ತನಿಗೆ ಕೂಗಿದೆನು; ಕರ್ತನು ಉತ್ತರ ಕೊಟ್ಟು ನನ್ನನ್ನು ವಿಶಾಲ ಸ್ಥಳದಲ್ಲಿ ನಿಲ್ಲಿಸಿ ದನು.
6ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
7ನನಗೆ ಸಹಾಯ ಮಾಡುವವರೊಂದಿಗೆ ಕರ್ತನು ನನ್ನ ಪಕ್ಷವನ್ನು ಹಿಡಿಯುತ್ತಾನೆ. ಆದದರಿಂದ ನಾನು ನನ್ನ ಹಗೆಯವರ ಮೇಲೆ ನನ್ನಾಶೆಯನ್ನು ತೀರಿಸು ವದನ್ನು ನಾನು ನೋಡುವೆನು.
8ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು.
9ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.
10ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು.
11ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.
12ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
13ನಾನು ಬೀಳುವ ಹಾಗೆ ನೀನು ನನ್ನನ್ನು ಕಠಿಣವಾಗಿ ನೂಕಿದ್ದೀ; ಆದರೆ ಕರ್ತನು ನನಗೆ ಸಹಾಯ ಮಾಡಿ ದನು.
14ನನ್ನ ಬಲವೂ ಕೀರ್ತನೆಯೂ ಕರ್ತನೇ; ಆತನೇ ನನಗೆ ರಕ್ಷಣೆಯಾದನು.
15ರಕ್ಷಣೆಯ ಉತ್ಸಾಹದ ಧ್ವನಿಯು ನೀತಿವಂತರ ಗುಡಾರಗಳಲ್ಲಿ ಅದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
16ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
17ನಾನು ಸಾಯದೆ ಬದುಕಿ, ಕರ್ತನ ಕಾರ್ಯಗಳನ್ನು ಪ್ರಕಟಿಸುವೆನು.
18ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
19ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
20ಇದೇ ಕರ್ತನ ಬಾಗಲು, ನೀತಿವಂತರು ಅದರಲ್ಲಿ ಪ್ರವೇಶಿಸುವರು.
21ನಿನ್ನನ್ನು ಕೊಂಡಾಡು ವೆನು; ನನಗೆ ನೀನು ಉತ್ತರಕೊಟ್ಟು, ನನ್ನ ರಕ್ಷಣೆಯಾದಿ.
22ಮನೆ ಕಟ್ಟುವವರು ತಳ್ಳಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
23ಇದು ಕರ್ತನಿಂದುಂಟಾಗಿ ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ.
24ಕರ್ತನು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡುವೆವು.
25ಓ ಕರ್ತನೇ, ರಕ್ಷಿಸಬೇಕು ಎಂದು ನಾನು ನಿನ್ನನ್ನು ಬೇಡುತ್ತೇನೆ. ಓ ಕರ್ತನೇ, ಅಭಿವೃದ್ಧಿಯನ್ನು ಕೊಡು ಎಂದು ನಿನ್ನನ್ನು ಬೇಡುತ್ತೇನೆ.
26ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದವಾಗಲಿ; ಕರ್ತನ ಆಲಯ ದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸಿದೆವು.
27ದೇವರು ಕರ್ತನಾಗಿದ್ದಾನೆ. ಆತನು ನಮಗೆ ಬೆಳಕನ್ನು ತೋರಿಸಿದ್ದಾನೆ. ಬಲಿ (ಪಶುವನ್ನು) ಹಗ್ಗಗಳಿಂದ ಕಟ್ಟಿ ಬಲಿಪೀಠದ ಕೊಂಬುಗಳಿಗೆ ಕಟ್ಟಿರಿ,
28ನೀನು ನನ್ನ ದೇವರಾಗಿದ್ದೀ; ನಿನ್ನನ್ನು ಕೊಂಡಾಡುವೆನು; ನನ್ನ ದೇವರೇ, ನಿನ್ನನ್ನು ಘನಪಡಿಸುವೆನು.ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು. ಆತನ ಕರು ಣೆಯು ಯುಗಯುಗಕ್ಕೂ ಅದೆ.
29ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು. ಆತನ ಕರು ಣೆಯು ಯುಗಯುಗಕ್ಕೂ ಅದೆ.
Bible Study with Steffi App
Download Free ↗
Memorize verses with spaced repetition. Free, no ads, 15+ languages.