Home
Bibles
☰ Books
Bible Study with Steffi
ಕೀರ್ತನೆಗಳು 121 · ಕನ್ನಡ ಬೈಬಲ್
||
Aa
ಕೀರ್ತನೆಗಳು
Chapter 121
ಕನ್ನಡ ಬೈಬಲ್
1
ನಾನು ಕಣ್ಣೆತ್ತಿ ಬೆಟ್ಟಗಳ ಕಡೆಗೆ ನೋಡುತ್ತೇನೆ; ನನ್ನ ಸಹಾಯವು ಎಲ್ಲಿಂದ ಬರುವದು?
2
ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದ ಕರ್ತನ ಬಳಿಯಿಂದಲೇ ನನ್ನ ಸಹಾ ಯವು ಬರುತ್ತದೆ.
3
ಆತನು ನಿನ್ನ ಪಾದವನ್ನು ಕದಲಿ ಸದಿರಲಿ; ನಿನ್ನನ್ನು ಕಾಪಾಡುವಾತನು ತೂಕಡಿಸುವ ದಿಲ್ಲ.
4
ಇಗೋ, ಇಸ್ರಾಯೇಲನ್ನು ಕಾಪಾಡುವಾತನು ತೂಕಡಿಸುವದಿಲ್ಲ, ನಿದ್ರಿಸುವದಿಲ್ಲ.
5
ಕರ್ತನು ನಿನ್ನನ್ನು ಕಾಪಾಡುವಾತನಾಗಿದ್ದಾನೆ; ಕರ್ತನು ನಿನ್ನ ಬಲ ಗಡೆಯಲ್ಲಿ ನಿನ್ನ ನೆರಳಿನಂತೆ ಇದ್ದಾನೆ.
6
ಹಗಲಲ್ಲಿ ಸೂರ್ಯನೂ ರಾತ್ರಿಯಲ್ಲಿ ಚಂದ್ರನೂ ನಿನ್ನನ್ನು ಬಾಧಿಸುವದಿಲ್ಲ.
7
ಕರ್ತನು ಎಲ್ಲಾ ಕೇಡಿನಿಂದ ನಿನ್ನನೂ ನಿನ್ನ ಪ್ರಾಣವನ್ನೂ ಕಾಪಾಡುವನು.ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು.
8
ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು.
Back to language index
Choose Theme