Home Psalm 21 · ಕನ್ನಡ ಬೈಬಲ್

Psalm

Chapter 21

ಕನ್ನಡ ಬೈಬಲ್
1ಓ ಕರ್ತನೇ, ನಿನ್ನ ಬಲದಲ್ಲಿ ಅರಸನು ಸಂತೋಷಪಡುವನು; ನಿನ್ನ ರಕ್ಷಣೆಯಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುವನು.
2ಅವನ ಹೃದಯದ ಆಶೆಯನ್ನು ನೀನು ಅವನಿಗೆ ಪೂರೈಸಿ ಅವನ ತುಟಿಗಳ ಬಿನ್ನಹವನ್ನು ತಡೆಯಲಿಲ್ಲ. ಸೆಲಾ.
3ಒಳ್ಳೇತನದ ಆಶೀರ್ವಾದಗಳೊಂದಿಗೆ ಅವನನ್ನು ಎದುರುಗೊಂಡು ಅಪರಂಜಿಯ ಕಿರೀಟವನ್ನು ಅವನ ತಲೆಗೆ ಇಡುತ್ತೀ.
4ಜೀವವನ್ನು ಅವನು ನಿನ್ನಿಂದ ಬೇಡಲು ನೀನು ಅವನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟೆ.
5ನ್ನ ರಕ್ಷಣೆಯಲ್ಲಿ ಅವನ ಹೆಚ್ಚಳವು ದೊಡ್ಡದಾಗಿದೆ, ಗೌರವವನ್ನೂ ಘನತೆಯನ್ನೂ ಅವನ ಮೇಲೆ ಇಡುತ್ತೀ.
6ನೀನು ಎಂದೆಂದಿಗೂ ಅವನನ್ನು ಅಧಿಕವಾಗಿ ಆಶೀರ್ವಾದ ಮಾಡಿದ್ದೀ. ನಿನ್ನ ಮುಖದ ಮುಂದೆ ಅವನನ್ನು ಅಧಿಕ ವಾಗಿ ಸಂತೋಷಪಡುವಂತೆ ಮಾಡಿದ್ದೀ.
7ಅರಸನು ಕರ್ತನಲ್ಲಿ ಭರವಸವಿಡುತ್ತಾನೆ; ಮಹೋನ್ನತನ ಕೃಪೆ ಯಿಂದ ಅವನು ಕದಲದೆ ಇರುವನು.
8ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು.
9ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.
10ನೀನು ಅವರ ಫಲವನ್ನು ಭೂಮಿಯೊಳ ಗಿಂದಲೂ ಅವರ ಸಂತತಿಯನ್ನು ಮನುಷ್ಯನ ಮಕ್ಕ ಳೊಳಗಿಂದಲೂ ನಾಶಮಾಡುವಿ.
11ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.
12ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ: ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿ.ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.
13ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme