Psalm
Chapter 127
ಕನ್ನಡ ಬೈಬಲ್1ಕರ್ತನು ಮನೆಯನ್ನು ಕಟ್ಟದಿದ್ದರೆ, ಅದನ್ನು ಕಟ್ಟುವವರು ವ್ಯರ್ಥವಾಗಿ ಕಷ್ಟಪಡುತ್ತಾರೆ; ಕರ್ತನು ಪಟ್ಟಣವನ್ನು ಕಾಪಾಡದೆ ಇದ್ದರೆ ಅದನ್ನು ಕಾಪಾಡುವವನು ವ್ಯರ್ಥವಾಗಿ ಎಚ್ಚರ ವಾಗಿರುತ್ತಾನೆ.
2ರೊಟ್ಟಿಗಾಗಿ ವ್ಯಥೆಪಟ್ಟು ಬೆಳಿಗ್ಗೆ ಬೇಗ ಏಳುವದೂ ರಾತ್ರಿ ತಡವಾಗಿ ಮಲಗುವದೂ ವ್ಯರ್ಥವೇ. ಆತನು ತನ್ನ ಪ್ರಿಯರಿಗೆ ನಿದ್ರೆಯಲ್ಲಿಯೂ ಅದನ್ನು ಕೊಡುತ್ತಾನೆ.
3ಇಗೋ, ಮಕ್ಕಳು ಕರ್ತನಿಂದ ಸಿಕ್ಕಿದ ಸ್ವಾಸ್ಥ್ಯವಾಗಿ ದ್ದಾರೆ; ಗರ್ಭಫಲವು ಆತನ ಬಹುಮಾನವಾಗಿದೆ.
4ಯೌವನದ ಮಕ್ಕಳು ಪರಾಕ್ರಮಶಾಲಿಯ ಕೈಯಲ್ಲಿ ಬಾಣಗಳು ಹೇಗೋ ಹಾಗೆಯೇ.ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.
5ತನ್ನ ಬತ್ತಳಿಕೆ ಯನ್ನು ಅವರಿಂದ ತುಂಬಿಸಿದ ಪುರುಷನು ಧನ್ಯನು; ಶತ್ರುಗಳ ಸಂಗಡ ಬಾಗಲಲ್ಲಿ ಮಾತನಾಡುವಾಗ ಅವರು ನಾಚಿಕೆಪಡರು.
Bible Study with Steffi App
Download Free ↗
Memorize verses with spaced repetition. Free, no ads, 15+ languages.