Home Bibles ಕೀರ್ತನೆಗಳು 29 · ಕನ್ನಡ ಬೈಬಲ್ ||

ಕೀರ್ತನೆಗಳು

Chapter 29

ಕನ್ನಡ ಬೈಬಲ್
1ಓ ಪರಾಕ್ರಮಶಾಲಿಗಳೇ, ಕರ್ತನಿಗೆ ಘನವನ್ನೂ ಬಲವನ್ನೂ ಸಲ್ಲಿಸಿರಿ; 2ಕರ್ತನ ಹೆಸರಿಗೆ ಸಲ್ಲತಕ್ಕ ಘನವನ್ನು ಸಲ್ಲಿಸಿರಿ; ಕರ್ತನಿಗೆ ಪರಿಶುದ್ಧತ್ವದ ಸೌಂದರ್ಯದಲ್ಲಿ ಆರಾಧಿಸಿರಿ. 3ಕರ್ತನ ಧ್ವನಿಯು ನೀರುಗಳ ಮೇಲೆ ಅದೆ. ಮಹಿ ಮೆಯ ದೇವರು ಗುಡುಗುತ್ತಾನೆ. ಕರ್ತನು ಬಹಳ ನೀರುಗಳ ಮೇಲೆ ಇದ್ದಾನೆ. 4ಕರ್ತನ ಧನ್ವಿಯು ಶಕ್ತಿ ಯುಳ್ಳದ್ದು; ಪ್ರಭೆಯುಳ್ಳದ್ದು. 5ಕರ್ತನ ಸ್ವರವು ದೇವ ದಾರುಗಳನ್ನು ಮುರಿಯುತ್ತದೆ; ಹೌದು, ಕರ್ತನು ಲೆಬನೋನಿನ ದೇವದಾರುಗಳನ್ನು ಮುರಿಯುತ್ತಾನೆ. 6ಅವುಗಳನ್ನು ಕರುವಿನ ಹಾಗೆಯೂ ಲೆಬನೋನನ್ನೂ ಶಿರಿಯೋನನ್ನೂ ಎಳೇಕಾಡುಕೋಣದ ಹಾಗೆಯೂ ಹಾರಾಡುವಂತೆ ಮಾಡುತ್ತಾನೆ. 7ಕರ್ತನ ಸ್ವರವು ಅಗ್ನಿ ಜ್ವಾಲೆಗಳನ್ನು ಭೇದಿಸುತ್ತದೆ. 8ಕರ್ತನ ಸ್ವರವು ಅರಣ್ಯ ವನ್ನು ಕದಲಿಸುತ್ತದೆ; ಕರ್ತನು ಕಾದೇಶ್‌ ಅರಣ್ಯವನ್ನು ಕದಲಿಸುತ್ತಾನೆ. 9ಕರ್ತನ ಸ್ವರವು ಜಿಂಕೆಗಳನ್ನು ಈಯ ಮಾಡಿ ಅಡವಿಗಳನ್ನು ಬಯಲು ಮಾಡುತ್ತದೆ; ಆತನ ಮಂದಿರದಲ್ಲಿ ಪ್ರತಿಯೊಬ್ಬನು ಆತನ ಮಹಿಮೆಯ ವಿಷಯವಾಗಿ ಮಾತನಾಡುತ್ತಾನೆ. 10ಕರ್ತನು ಪ್ರಳಯದ ಮೇಲೆ ಕೂತುಕೊಳ್ಳುತ್ತಾನೆ; ಹೌದು, ಯುಗಯುಗಕ್ಕೂ ಕರ್ತನು ಅರಸನಾಗಿ ಕೂತು ಕೊಂಡಿದ್ದಾನೆ.ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು. 11ಕರ್ತನು ತನ್ನ ಜನರಿಗೆ ಬಲವನ್ನು ಕೊಡುವನು; ಕರ್ತನು ತನ್ನ ಜನರನ್ನು ಸಮಾಧಾನ ದಿಂದ ಆಶೀರ್ವದಿಸುವನು.

Choose Theme