Psalm
Chapter 70
ಕನ್ನಡ ಬೈಬಲ್1ಓ ದೇವರೇ, ನನ್ನನ್ನು ಬಿಡಿಸುವದಕ್ಕೂ ಕರ್ತನೇ, ನನ್ನ ಸಹಾಯಕ್ಕೂ ತ್ವರೆಪಡು.
2ನನ್ನ ಪ್ರಾಣವನ್ನು ಹುಡುಕುವವರು ನಾಚಿಕೊಂಡು ಲಜ್ಜೆಪಡಲಿ; ನನ್ನ ಕೇಡಿನಲ್ಲಿ ಸಂತೋಷಿಸುವವರು ಹಿಂದಿರುಗಿ ಗಲಿಬಿಲಿಯಾಗಲಿ.
3ಆಹಾ, ಆಹಾ ಎಂದು ಹೇಳುವವರು ತಮ್ಮ ನಾಚಿಕೆಯ ಫಲಕ್ಕಾಗಿ ತಿರುಗಲಿ.
4ನಿನ್ನನ್ನು ಹುಡುಕುವವರೆಲ್ಲರು ನಿನ್ನಲ್ಲಿ ಆನಂದಪಟ್ಟು ಸಂತೋಷಿಸಲಿ; ನಿನ್ನ ರಕ್ಷಣೆಯನ್ನು ಪ್ರೀತಿಮಾಡು ವವರು--ದೇವರು ಮಹಿಮೆಪಡಲಿ ಎಂದು ಯಾವಾ ಗಲೂ ಹೇಳಲಿ.ಆದರೆ ನಾನು ದೀನನೂ ಬಡವನೂ ಆಗಿದ್ದೇನೆ; ಓ ದೇವರೇ ನನಗೋಸ್ಕರ ತ್ವರೆಪಡು; ನನ್ನ ಸಹಾಯವೂ ನನ್ನನ್ನು ತಪ್ಪಿಸುವವನೂ ನೀನೇ. ಓ ಕರ್ತನೇ, ತಡ ಮಾಡಬೇಡ.
5ಆದರೆ ನಾನು ದೀನನೂ ಬಡವನೂ ಆಗಿದ್ದೇನೆ; ಓ ದೇವರೇ ನನಗೋಸ್ಕರ ತ್ವರೆಪಡು; ನನ್ನ ಸಹಾಯವೂ ನನ್ನನ್ನು ತಪ್ಪಿಸುವವನೂ ನೀನೇ. ಓ ಕರ್ತನೇ, ತಡ ಮಾಡಬೇಡ.
Bible Study with Steffi App
Download Free ↗
Memorize verses with spaced repetition. Free, no ads, 15+ languages.