Home Bibles ☰ Books ಕೀರ್ತನೆಗಳು 75 · ಕನ್ನಡ ಬೈಬಲ್ ||

ಕೀರ್ತನೆಗಳು

Chapter 75

ಕನ್ನಡ ಬೈಬಲ್
1ನಿನ್ನನ್ನು ಕೊಂಡಾಡುತ್ತೇವೆ; ಓ ದೇವರೇ, ನಿನ್ನನ್ನು ಕೊಂಡಾಡುತ್ತೇವೆ; ಪ್ರಕಟ ವಾಗುವ ನಿನ್ನ ಅದ್ಭುತ ಕಾರ್ಯಗಳಿಗೆ ನಿನ್ನ ನಾಮವು ಸವಿಾಪವಾಗಿದೆ. 2ನಾನು ಸಭೆಯನ್ನು ಅಂಗೀಕರಿಸು ವಾಗ ಸರಿಯಾಗಿ ನ್ಯಾಯತೀರಿಸುವೆನು; 3ಭೂಮಿಯೂ ಅದರ ನಿವಾಸಿಗಳೆಲ್ಲರೂ ಕರಗಿದ್ದಾರೆ; ನಾನು ಅದರ ಸ್ಥಂಭಗಳನ್ನು ನಿಲ್ಲಿಸುತ್ತೇನೆ ಸೆಲಾ. 4ಮೂರ್ಖತನದಿಂದ ವರ್ತಿಸಬೇಡಿರಿ ಎಂದು ಮೂರ್ಖರಿಗೆ ಹೇಳುತ್ತೇನೆ. ಕೊಂಬು ಎತ್ತಬೇಡಿರಿ ಎಂದು ದುಷ್ಟರಿಗೆ ಹೇಳಿದೆನು. 5ನಿಮ್ಮ ಕೊಂಬನ್ನು ಉನ್ನತಕ್ಕೆ ಎತ್ತಬೇಡಿರಿ; ಬೊಗ್ಗದ ಕುತ್ತಿಗೆಯಿಂದ ಮಾತಾಡಬೇಡಿರಿ. 6ಉದ್ಧಾರವು ಮೂಡಣದಿಂದಲೂ ಪಡುವಣದಿಂದಲೂ ಅಲ್ಲ; ಇಲ್ಲವೆ ದಕ್ಷಿಣದಿಂದಲೂ ಬರುವದಿಲ್ಲ. 7ಆದರೆ ದೇವರು ನ್ಯಾಯತೀರಿಸುವಾ ತನಾಗಿದ್ದಾನೆ; ಒಬ್ಬನನ್ನು ತಗ್ಗಿಸುತ್ತಾನೆ; ಇನ್ನೊಬ್ಬನನ್ನು ಎತ್ತುತ್ತಾನೆ. 8ಕರ್ತನ ಕೈಯಲ್ಲಿ ಪಾತ್ರೆಯು ಉಂಟು; ದ್ರಾಕ್ಷಾರಸವು ಕೆಂಪಾಗಿದೆ. ಕಲಬೆರಿಕೆಯಿಂದ ತುಂಬಿ ಅದೆ; ಅದರಿಂದ ಆತನು ಹೊಯ್ಯುತ್ತಾನೆ; ಅದರ ಮಡ್ಡಿಯನ್ನು ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು. 9ಆದರೆ ನಾನು ಎಂದೆಂದಿಗೂ ಪ್ರಕಟಿಸುವೆನು, ಯಾಕೋಬನ ದೇವರ ಸ್ತುತಿಗಳನ್ನು ಹಾಡುವೆನು;ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು. 10ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಬಿಡುವೆನು; ಆದರೆ ನೀತಿವಂತರ ಕೊಂಬುಗಳು ಎತ್ತಲ್ಪಡುವವು.

Choose Theme