Home Psalm 135 · ಕನ್ನಡ ಬೈಬಲ್

Psalm

Chapter 135

ಕನ್ನಡ ಬೈಬಲ್
1ಕರ್ತನನ್ನು ಸ್ತುತಿಸಿರಿ. ಕರ್ತನ ಹೆಸರನ್ನು ಸ್ತುತಿಸಿರಿ; ಕರ್ತನ ಆಲಯ ದಲ್ಲಿಯೂ
2ನಮ್ಮ ದೇವರ ಆಲಯದ ಅಂಗಳ ಗಳಲ್ಲಿಯೂ ನಿಲ್ಲುವ ಕರ್ತನ ಸೇವಕರೇ, ಸ್ತುತಿಸಿರಿ.
3ಕರ್ತನನ್ನು ಸ್ತುತಿಸಿರಿ; ಕರ್ತನು ಒಳ್ಳೆಯವನು; ಆತನ ಹೆಸರಿಗೆ ಸ್ತುತಿಗಳನ್ನು ಹಾಡಿರಿ; ಅದು ರಮ್ಯ ವಾದದ್ದು.
4ಕರ್ತನು ಯಾಕೋಬನನ್ನು ತನಗೋ ಸ್ಕರವೂ ಇಸ್ರಾಯೇಲನ್ನು ತನ್ನ ಅಸಾಮಾನ್ಯವಾದ ಸಂಪತ್ತಾಗಿಯೂ ಆದುಕೊಂಡಿದ್ದಾನೆ.
5ಕರ್ತನು ದೊಡ್ಡವನು; ನಮ್ಮ ಕರ್ತನು ಎಲ್ಲಾ ದೇವರುಗಳಿ ಗಿಂತ ದೊಡ್ಡವನೆಂದು ನಾನು ತಿಳಿದಿದ್ದೇನೆ.
6ಕರ್ತನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ಸಮುದ್ರದ ಲ್ಲಿಯೂ ಎಲ್ಲಾ ಅಗಾಧಗಳಲ್ಲಿಯೂ ತಾನು ಅಪೇಕ್ಷಿಸು ವದನ್ನೆಲ್ಲಾ ಮಾಡುತ್ತಾನೆ.
7ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.
8ಆತನು ಐಗುಪ್ತದ ಚೊಚ್ಚಲಾದವುಗಳನ್ನು, ಮನು ಷ್ಯರು ಮೊದಲುಗೊಂಡು ಪಶುಗಳ ವರೆಗೂ ಹೊಡೆ ದನು.
9ಐಗುಪ್ತವೇ, ನಿನ್ನ ಮಧ್ಯದಲ್ಲಿ ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಫರೋಹನಿಗೂ ಅವನ ಸಕಲ ಸೇವಕರಿಗೂ ವಿರೋಧವಾಗಿ ಕಳುಹಿಸಿದನು.
10ಆತನು ದೊಡ್ಡ ಜನಾಂಗಗಳನ್ನೂ ಬಲವಾದ ಅರಸುಗಳನ್ನೂ ಕೊಂದುಹಾಕಿದನು.
11ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.
12ಅವರ ದೇಶವನ್ನು ಬಾಧ್ಯತೆ ಯಾಗಿ ಅಂದರೆ ತನ್ನ ಜನರಾದ ಇಸ್ರಾಯೇಲಿಗೆ ಬಾಧ್ಯತೆಯಾಗಿ ಕೊಟ್ಟನು.
13ಓ ಕರ್ತನೇ, ನಿನ್ನ ಹೆಸರು ಶಾಶ್ವತವಾದದ್ದು, ಓ ಕರ್ತನೇ, ನಿನ್ನ ಜ್ಞಾಪಕವು ತಲತಲಾಂತರಕ್ಕೂ ಇರುವದು.
14ಕರ್ತನು ತನ್ನ ಜನರಿಗೆ ನ್ಯಾಯತೀರಿಸಿ ತನ್ನ ಸೇವಕರನ್ನು ಕನಿಕರಿಸುವನು.
15ಅನ್ಯಜನಾಂಗಗಳ ವಿಗ್ರಹಗಳು ಬೆಳ್ಳಿ ಬಂಗಾರ ದಿಂದ ಮಾಡಿದ ಮನುಷ್ಯನ ಕೈ ಕೆಲಸವಾಗಿವೆ.
16ಅವು ಗಳಿಗೆ ಬಾಯಿ ಉಂಟು, ಮಾತನಾಡುವದಿಲ್ಲ. ಕಣ್ಣುಗ ಳುಂಟು, ನೋಡುವುದಿಲ್ಲ.
17ಕಿವಿಗಳುಂಟು, ಕೇಳುವ ದಿಲ್ಲ. ಅವುಗಳ ಬಾಯಿಯಲ್ಲಿ ಶ್ವಾಸವೇನೂ ಇಲ್ಲ.
18ಅವುಗಳನ್ನು ಮಾಡುವವರೂ ಅವುಗಳಲ್ಲಿ ಭರವಸ ವಿಡುವವರೆಲ್ಲರೂ ಅವುಗಳ ಹಾಗೆಯೇ ಇದ್ದಾರೆ.
19ಇಸ್ರಾಯೇಲಿನ ಮನೆಯವರೇ, ಕರ್ತನನ್ನು ಸ್ತುತಿ ಸಿರಿ. ಆರೋನನ ಮನೆಯವರೇ, ಕರ್ತನನ್ನು ಸ್ತುತಿಸಿರಿ.
20ಲೇವಿಯ ಮನೆಯವರೇ, ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಭಯಪಡುವವರೇ, ಕರ್ತನನ್ನು ಸ್ತುತಿಸಿರಿ.ಯೆರೂಸಲೇಮಿನಲ್ಲಿ ವಾಸಿಸುವ ಕರ್ತನಿಗೆ ಚೀಯೋನಿನೊಳಗಿಂದ ಸ್ತುತಿಯುಂಟಾಗಲಿ. ಕರ್ತನನ್ನು ಸ್ತುತಿಸಿರಿ.
21ಯೆರೂಸಲೇಮಿನಲ್ಲಿ ವಾಸಿಸುವ ಕರ್ತನಿಗೆ ಚೀಯೋನಿನೊಳಗಿಂದ ಸ್ತುತಿಯುಂಟಾಗಲಿ. ಕರ್ತನನ್ನು ಸ್ತುತಿಸಿರಿ.
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme