Home Psalm 90 · ಕನ್ನಡ ಬೈಬಲ್

Psalm

Chapter 90

ಕನ್ನಡ ಬೈಬಲ್
1ಕರ್ತನೇ, ತಲತಲಾಂತರಗಳಲ್ಲಿ ನೀನು ನಮ್ಮ ವಾಸಸ್ಥಾನವಾಗಿದ್ದೀ.
2ಬೆಟ್ಟಗಳು ಹುಟ್ಟುವದಕ್ಕಿಂತ ಮುಂಚೆಯೂ ನೀನು ಭೂಮಿಯನ್ನೂ ಲೋಕವನ್ನೂ ನಿರ್ಮಿಸುವದಕ್ಕಿಂತ ಮುಂಚೆಯೂ ನಿತ್ಯತ್ವದಿಂದ ನಿತ್ಯತ್ವಕ್ಕೂ ನೀನು ದೇವರಾಗಿದ್ದೀ.
3ನೀನು ಮನುಷ್ಯನನ್ನು ನಾಶನಕ್ಕೆ ತಿರುಗಿಸಿ-- ಮನುಷ್ಯರ ಮಕ್ಕಳೇ, ಹಿಂತಿರುಗಿರಿ ಎಂದು ಹೇಳುತ್ತೀ;
4ಸಾವಿರ ವರುಷಗಳು ನಿನ್ನ ದೃಷ್ಟಿಗೆ ಕಳೆದು ಹೋದನಿನ್ನೆಯ ದಿವಸದ ಹಾಗೆಯೂ ರಾತ್ರಿ ಜಾವದ ಹಾಗೆಯೂ ಅವೆ.
5ಅವರನ್ನು ಪ್ರವಾಹದಂತೆ ಬಡು ಕೊಂಡು ಹೋಗುತ್ತೀ; ಅವರು ನಿದ್ರೆಯಲ್ಲಿದ್ದಂತೆಯೂ ಬೆಳಿಗ್ಗೆ ಚಿಗುರುವ ಹುಲ್ಲಿನ ಹಾಗೆಯೂ ಇದ್ದಾರೆ.
6ಅದು ಬೆಳಿಗ್ಗೆ ಅರಳಿ ಬೆಳೆಯುತ್ತದೆ. ಸಂಜೆಯಲ್ಲಿ ಕೊಯ್ಯಲ್ಪಟ್ಟು ಒಣಗುತ್ತದೆ.
7ನಾವು ನಿನ್ನ ಕೋಪದಿಂದ ತೀರಿಹೋಗಿ, ನಿನ್ನ ರೌದ್ರದಿಂದ ತಲ್ಲಣಿಸುತ್ತೇವೆ.
8ನಮ್ಮ ಅಕ್ರಮಗಳನ್ನು ನಿನ್ನ ಮುಂದೆಯೂ ನಮ್ಮ ಮರೆಯಾದ ಪಾಪಗಳನ್ನು ನಿನ್ನ ಮುಖದ ಬೆಳಕಿನಲ್ಲಿಯೂ ಇಟ್ಟಿದ್ದೀ.
9ನಮ್ಮ ದಿವಸಗಳೆಲ್ಲಾ ನಿನ್ನ ಕೋಪದಿಂದ ದಾಟಿಹೋದವು. ನಮ್ಮ ವರುಷಗಳನ್ನು ಕೇಳಿದ ಕಥೆಯ ಹಾಗೆ ಕಳೆ ಯುತ್ತೇವೆ.
10ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ, ಬಲದಿಂದಿದ್ದರೆ ಎಂಭತ್ತು ವರುಷ; ಆದಾಗ್ಯೂ ಅವು ಗಳ ಬಲವು ಪ್ರಯಾಸವೂ ದುಃಖವೂ ಆಗಿವೆ; ಅದು ಬೇಗ ಕೊಯಿದು ಹಾಕಲ್ಪಡುತ್ತದೆ; ನಾವು ಹಾರಿ ಹೋಗುತ್ತೇವೆ.
11ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.
12ನಾವು ಜ್ಞಾನವುಳ್ಳ ಹೃದಯವನ್ನು ಹೊಂದುವ ಹಾಗೆ, ನಮ್ಮ ದಿವಸಗಳನ್ನು ಲೆಕ್ಕಿಸುವದಕ್ಕೆ ನಮಗೆ ಕಲಿಸು.
13ಕರ್ತನೇ, ಎಷ್ಟರವರೆಗೆ ಹಿಂತಿರುಗದಿರುವಿ? ನಿನ್ನ ಸೇವಕರ ವಿಷಯದಲ್ಲಿ ಅಂತಃಕರಣವಿರಲಿ.
14ಬೆಳಿಗ್ಗೆ ನಿನ್ನ ಕರುಣೆಯಿಂದ ನಮಗೆ ತೃಪ್ತಿಪಡಿಸು; ಆಗ ನಮ್ಮ ದಿವಸಗಳಲ್ಲೆಲ್ಲಾ ಉತ್ಸಾಹಧ್ವನಿಗೈದು ಸಂತೋಷ ಪಡುವೆವು.
15ನೀನು ನಮ್ಮನ್ನು ಕುಂದಿಸಿದ ದಿವಸಗಳ ಪ್ರಕಾರವೂ ನಾವು ಕೇಡನ್ನು ನೋಡಿದ ವರುಷಗಳ ಪ್ರಕಾರವೂ ನಮ್ಮನ್ನು ಸಂತೋಷಪಡಿಸು.
16ನಿನ್ನ ಸೇವಕರಿಗೆ ನಿನ್ನ ಕೆಲಸವೂ ಅವರ ಮಕ್ಕಳಿಗೆ ನಿನ್ನ ಪ್ರಭೆಯೂ ತೋರಿಬರಲಿ.ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
17ನಮ್ಮ ದೇವರಾದ ಕರ್ತನ ರಮ್ಯತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೈಲಸವನ್ನು ನಮಗೆ ಸ್ಥಿರಪಡಿಸು; ಹೌದು, ನಮ್ಮ ಕೆಲಸವನ್ನು ಸ್ಥಿರಪಡಿಸು;
Bible Study with Steffi App

Memorize verses with spaced repetition. Free, no ads, 15+ languages.

Download Free ↗

Choose Theme