Psalm
Chapter 67
ಕನ್ನಡ ಬೈಬಲ್1ದೇವರು ನಮಗೆ ಕರುಣೆಯುಳ್ಳವನಾಗಿದ್ದು ನಮ್ಮನ್ನು ಆಶೀರ್ವದಿಸಲಿ; ಆತನು ತನ್ನ ಮುಖವನ್ನು ನಮ್ಮ ಮೇಲೆ ಪ್ರಕಾಶಿಸಮಾಡಲಿ. ಸೆಲಾ.
2ಆಗ ನಿನ್ನ ಮಾರ್ಗವೂ ನಿನ್ನ ರಕ್ಷಣೆಯ ಸ್ವಸ್ಥತೆಯೂ, ಭೂಮಿಯಲ್ಲಿ, ಎಲ್ಲಾ ಜನಾಂಗಗಳಿಗೆ ತಿಳಿಯಲ್ಪಡು ವದು.
3ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ. ಜನರೆಲ್ಲಾ ನಿನ್ನನ್ನು ಕೊಂಡಾಡಲಿ.
4ಜನಾಂಗಗಳು ಸಂತೋಷಪಟ್ಟು ಉತ್ಸಾಹಕ್ಕಾಗಿ ಹಾಡಲಿ; ನೀನು ಜನರನ್ನು ನೀತಿಯಿಂದ ನ್ಯಾಯತೀರಿಸಿ ಜನಾಂಗಗಳನ್ನು ಭೂಮಿಯಲ್ಲಿ ಪರಿಪಾಲಿಸುತ್ತೀ. ಸೆಲಾ.
5ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ; ಜನರೆಲ್ಲಾ ನಿನ್ನನ್ನು ಕೊಂಡಾಡಲಿ.
6ಆಗ ಭೂಮಿಯು ತನ್ನ ಸಮೃದ್ಧಿಯಾದ ಬೆಳೆಯನ್ನು ಕೊಡುವದು; ದೇವರೇ, ಹೌದು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು.ದೇವರು ನಮ್ಮನ್ನು ಆಶೀರ್ವದಿಸುವನು; ಭೂಮಿಯ ಕೊನೆಯ ಭಾಗಗಳು ಆತನಿಗೆ ಭಯಪಡುವವು.
7ದೇವರು ನಮ್ಮನ್ನು ಆಶೀರ್ವದಿಸುವನು; ಭೂಮಿಯ ಕೊನೆಯ ಭಾಗಗಳು ಆತನಿಗೆ ಭಯಪಡುವವು.
Bible Study with Steffi App
Download Free ↗
Memorize verses with spaced repetition. Free, no ads, 15+ languages.