Home Bibles ನ್ಯಾಯಾಧಿಪತಿಗಳು 1:16 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 1:16 · ಕನ್ನಡ ಬೈಬಲ್

ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.

Cross references

ನಿರ್ಗಮಕಾಂಡ 3:1

ಮೋಶೆಯು ತನ್ನ ಮಾವನಾಗಿರುವ ಮಿದ್ಯಾನಿನ ವೈದಿಕನಾದ ಇತ್ರೋವನ ಮಂದೆಯನ್ನು ಮೇಯಿಸುತ್ತಿರಲಾಗಿ ಅರಣ್ಯದ ಹಿಂಭಾ ಗಕ್ಕೆ ನಡಿಸಿಕೊಂಡುಹೋಗಿ ಹೋರೇಬ್‌ ಎಂಬ ದೇವರ ಬೆಟ್ಟಕ್ಕೆ ಬಂದನು.

ನಿರ್ಗಮಕಾಂಡ 4:18

ಆಗ ಮೋಶೆಯು ಹೋಗಿ ತನ್ನ ಮಾವನಾದ ಇತ್ರೋನನ ಬಳಿಗೆ ಬಂದು ಅವನಿಗೆ--ಐಗುಪ್ತ ದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಇನ್ನೂ ಜೀವದಿಂದಿರುವರೋ ಎಂದು ನೋಡುವೆನು ಅಂದನು. ಇತ್ರೋನನು ಮೋಶೆಗೆ--ಸಮಾಧಾನದಿಂದ ಹೋಗು ಅಂದನು.

ನಿರ್ಗಮಕಾಂಡ 18:1

ದೇವರು ಮೋಶೆಗೆ ಮಾಡಿದವುಗಳೆಲ್ಲವನ್ನೂ ಕರ್ತನು ಇಸ್ರಾಯೇಲ್ಯರನ್ನು ಐಗುಪ್ತದೊಳಗಿಂದ ಹೊರಗೆ ತಂದದ್ದನ್ನೂ ಮಿದ್ಯಾ ನಿನ ವೈದಿಕನೂ ಮೋಶೆಯ ಮಾವನೂ ಆಗಿದ್ದ ಇತ್ರೋವನು ಕೇಳಿ

ನಿರ್ಗಮಕಾಂಡ 18:7

ಮೋಶೆಯು ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮ ಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.

ನಿರ್ಗಮಕಾಂಡ 18:12

ಮೋಶೆಯ ಮಾವನಾದ ಇತ್ರೋವನು ದಹನಬಲಿಯನ್ನೂ ಯಜ್ಞ ಗಳನ್ನೂ ತೆಗೆದುಕೊಂಡು ದೇವರಿಗೆ ಅರ್ಪಿಸಿದನು. ಆಗ ಆರೋನನೂ ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನ ಮಾಡುವದಕ್ಕಾಗಿ ಬಂದರು.

ನಿರ್ಗಮಕಾಂಡ 18:14

ಮೋಶೆಯು ಜನರಿಗೆ ಮಾಡುವದನ್ನೆಲ್ಲಾ ಮೋಶೆಯ ಮಾವನು ನೋಡಿ ಮೋಶೆಗೆ--ಇದೇನು ಜನರಿಗೆ ನೀನು ಮಾಡುವದು? ಯಾಕೆ ನೀನೊಬ್ಬನೇ ಕೂತಿರಲಾಗಿ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ನಿನ್ನ ಬಳಿಯಲ್ಲಿ ನಿಂತಿದ್ದಾರೆ ಅಂದನು.

ನಿರ್ಗಮಕಾಂಡ 18:27

ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು.

ಅಂಕೆಗಳ ಪುಸ್ತಕ 10:29

ಮೋಶೆ ತನ್ನ ಮಾವನಾದ ಮಿದ್ಯಾನಿನ ರೆಗೂ ವೇಲನ ಮಗನಾದ ಹೋಬಾಬನಿಗೆ--ನಿಮಗೆ ಕೊಡು ತ್ತೇನೆಂದು ಕರ್ತನು ಹೇಳಿದ ದೇಶಕ್ಕೆ ಪ್ರಯಾಣ ಮಾಡುತ್ತಿದ್ದೇವೆ; ನಮ್ಮ ಸಂಗಡ ನೀನು ಬಾ; ನಾವು ನಿನಗೆ ಒಳ್ಳೇದನ್ನು ಮಾಡುವೆವು; ಕರ್ತನು ಇಸ್ರಾಯೇ ಲ್ಯರನ್ನು ಕುರಿತು ಒಳ್ಳೇದನ್ನು ಹೇಳಿದ್ದಾನೆ ಎಂದು ಹೇಳಿದನು.

ಅಂಕೆಗಳ ಪುಸ್ತಕ 10:32

ನೀನು ನಮ್ಮ ಸಂಗಡ ಬಂದರೆ ಹೌದು, ಕರ್ತನು ನಮಗೆ ಮಾಡಲಿಕ್ಕಿರುವ ಒಳ್ಳೇದನ್ನು ನಾವು ನಿನಗೆ ಮಾಡುವೆವು ಅಂದನು.

ಅಂಕೆಗಳ ಪುಸ್ತಕ 21:1

ಇದಲ್ಲದೆ ಇಸ್ರಾಯೇಲ್ಯರು ಪಾಳತಿ ನೋಡುವ ಮಾರ್ಗದಿಂದ ಬರುತ್ತಾ ರೆಂದು ದಕ್ಷಿಣದಲ್ಲಿ ವಾಸಿಸುವ ಕಾನಾನ್ಯನಾದ ಅರಾದ್‌ ಪಟ್ಟಣದ ಅರಸನು ಕೇಳಿ ಅವರ ಸಂಗಡ ಯುದ್ಧಮಾಡಿ ಅವರಲ್ಲಿ ಕೆಲವರನ್ನು ಸೆರೆಯಾಗಿ ಒಯ್ದನು.

ಅಂಕೆಗಳ ಪುಸ್ತಕ 24:21

ಬಳಿಕ ಕೇನ್ಯರನ್ನು ಅವನು ನೋಡಿ ಸಾಮ್ಯರೂಪವಾಗಿ--ನಿನ್ನ ನಿವಾಸವು ಬಲವಾಗಿದೆ. ನಿನ್ನ ಗೂಡನ್ನು ಬಂಡೆಯಲ್ಲಿ ಹಾಕಿದಿ.

ದ್ವಿತೀಯೋಪದೇಶಕಾಂಡ 34:3

ದಕ್ಷಿಣವನ್ನೂ ಖರ್ಜೂರಗಳ ಪಟ್ಟಣ ವಾದ ಯೆರಿಕೋವಿನ ತಗ್ಗೆಂಬ ಬೈಲನ್ನೂ ಚೋಗ ರೂರಿನ ಪರ್ಯಂತರಕ್ಕೆ ತೋರಿಸಿದನು.

ದ್ವಿತೀಯೋಪದೇಶಕಾಂಡ 34:4

ಕರ್ತನು ಅವನಿಗೆ--ನಾನು ನಿನ್ನ ಸಂತತಿಗೆ ಕೊಡುತ್ತೇನೆಂದು ಅಬ್ರಹಾಮನಿಗೂ ಇಸಾಕನಿಗೂ ಯಾಕೋಬನಿಗೂ ಪ್ರಮಾಣಮಾಡಿದ ದೇಶವು ಇದೇ. ಅದನ್ನು ನಿನಗೆ ತೋರಿಸಿದೆನು; ಆದರೆ ನೀನು ಅಲ್ಲಿಗೆ ದಾಟಿ ಸೇರುವದಿಲ್ಲ ಎಂದು ಹೇಳಿದನು.

ಯೆಹೋಶುವ 12:14

ಹೊರ್ಮದ ಅರಸನು ಒಬ್ಬನು; ಅರಾದಿನ ಅರಸನು ಒಬ್ಬನು;

ಯೆಹೋಶುವ 18:21

ಬೆನ್ಯಾವಿಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಇರುವ ಪಟ್ಟಣಗಳು ಯಾವವಂದರೆ: ಯೆರಿಕೋ, ಬೇತ್‌ಹೋಗ್ಲಾ, ಕೆಚ್ಚೀಚ್‌ ತಗ್ಗು

ನ್ಯಾಯಾಧಿಪತಿಗಳು 3:13

ಅವನು ಅಮ್ಮೋನನ ಮತ್ತು ಅಮಾಲೇ ಕ್ಯನ ಮಕ್ಕಳನ್ನು ಕೂಡಿಸಿಕೊಂಡು ಬಂದು ಇಸ್ರಾಯೇಲ್ಯ ರನ್ನು ಹೊಡೆದು ಖರ್ಜೂರ ಗಿಡದ ಪಟ್ಟಣವನ್ನು ಸ್ವಾಧೀನಮಾಡಿಕೊಂಡನು.

ನ್ಯಾಯಾಧಿಪತಿಗಳು 4:11

ಮೋಶೆಯ ಮಾವ ನಾದ ಹೋಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರೆಂಬವನು ಕೇನ್ಯರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿ ತನ್ನ ಗುಡಾರವನ್ನು ಕೆದೆಷಿನ ಬಳಿಯಲ್ಲಿರುವ ಚಾನನ್ನೀಮೆಂಬ ಬೈಲಿನಲ್ಲಿ ಹಾಕಿಕೊಂಡಿದ್ದನು.

ನ್ಯಾಯಾಧಿಪತಿಗಳು 4:17

ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಯಾಬೀನನೆಂಬ ಹಾಚೋರಿನ ಅರಸ ನಿಗೂ ಕೇನ್ಯನಾದ ಹೆಬೆರನ ಮನೆಗೂ ನಡುವೆ ಸಮಾ ಧಾನ ಇತ್ತು.

1 ಸಮುವೇಲ 15:6

ಕೇನ್ಯರಿಗೆ ಅವನು ಹೇಳಿದ್ದೇನಂದರೆ--ಇಸ್ರಾಯೇ ಲ್ಯರು ಐಗುಪ್ತದಿಂದ ಬಂದಾಗ ನೀವು ಅವರೆಲ್ಲರಿಗೆ ದಯೆ ತೋರಿಸಿದ್ದರಿಂದ ನಾನು ನಿಮ್ಮನ್ನು ಅಮಾಲೇಕ್ಯರ ಸಂಗಡ ನಾಶಮಾಡದ ಹಾಗೆ ನೀವು ಅವರ ಮಧ್ಯ ದಲ್ಲಿಂದ ಹೊರಟು ಹೋಗಿರಿ ಅಂದನು. ಹಾಗೆಯೇ ಕೇನ್ಯರು ಅಮಾಲೇಕ್ಯರ ಮಧ್ಯದಿಂದ ಹೊರಟು ಹೋದರು.

1 ದಿನವೃತ್ತಾಂತ 2:15

ಐದನೆಯವನಾದ ರದ್ದೈಯನನ್ನೂ ಆರನೆಯವನಾದ ಓಚೇಮನನ್ನೂ ಏಳನೆಯವನಾದ ದಾವೀದನನ್ನೂ ಪಡೆದನು.

1 ದಿನವೃತ್ತಾಂತ 2:55

ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.

2 ದಿನವೃತ್ತಾಂತ 28:16

ಅದೇ ಕಾಲದಲ್ಲಿ ಅರಸನಾದ ಆಹಾಜನು ಅಶ್ಶೂ ರಿನ ಅರಸುಗಳ ಬಳಿಗೆ ಕಳುಹಿಸಿ ಸಹಾಯ ಬೇಡಿ ಕೊಂಡನು.

ಯೆರೆಮಿಯ 35:2

ಪುಸ್ತಕದ ಸುರಳಿಯನ್ನು ತಕ್ಕೊಂಡು ನಾನು ಇಸ್ರಾಯೇಲಿಗೂ ಯೆಹೂದಕ್ಕೂ ಎಲ್ಲಾ ಜನಾಂಗ ಗಳಿಗೂ ವಿರೋಧವಾಗಿ ನಿನ್ನ ಸಂಗಡ ಮಾತಾಡಿ ದಂದಿನಿಂದ ಯೋಷೀಯನ ದಿನಗಳು ಮೊದಲು ಗೊಂಡು ಈ ದಿನದ ವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.

Interlinear

Interlinear data is unavailable for this verse.

Choose Theme