ನಿರ್ಗಮಕಾಂಡ 18:14 · ಕನ್ನಡ ಬೈಬಲ್
ಮೋಶೆಯು ಜನರಿಗೆ ಮಾಡುವದನ್ನೆಲ್ಲಾ ಮೋಶೆಯ ಮಾವನು ನೋಡಿ ಮೋಶೆಗೆ--ಇದೇನು ಜನರಿಗೆ ನೀನು ಮಾಡುವದು? ಯಾಕೆ ನೀನೊಬ್ಬನೇ ಕೂತಿರಲಾಗಿ ಜನರು ಬೆಳಗಿನಿಂದ ಸಾಯಂಕಾಲದ ವರೆಗೆ ನಿನ್ನ ಬಳಿಯಲ್ಲಿ ನಿಂತಿದ್ದಾರೆ ಅಂದನು.
Cross references
ನಿರ್ಗಮಕಾಂಡ 18:26
ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ ಕಠಿಣ ವ್ಯಾಜ್ಯ ಗಳನ್ನು ಮೋಶೆಯ ಬಳಿಗೆ ತಂದು ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.ತರುವಾಯ ಮೋಶೆಯು ತನ್ನ ಮಾವನನ್ನು ಕಳುಹಿಸಲು ಅವನು ಸ್ವದೇಶಕ್ಕೆ ಹೋದನು.
ಅಂಕೆಗಳ ಪುಸ್ತಕ 15:34
ಅವ ನಿಗೆ ಏನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಯದ ಕಾರಣ ಅವನನ್ನು ಕಾವಲಲ್ಲಿ ಹಾಕಿದರು.
ನ್ಯಾಯಾಧಿಪತಿಗಳು 1:16
ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.
2 ಸಮುವೇಲ 15:2
ಇದಲ್ಲದೆ ಅಬ್ಷಾಲೋಮನು ಬೆಳಿಗ್ಗೆ ಎದ್ದು ಬಾಗಲ ಬಳಿಯಲ್ಲಿ ನಿಂತುಕೊಂಡು ವ್ಯಾಜ್ಯ ಉಂಟಾದವನು ಯಾವನಾದರೂ ನ್ಯಾಯ ಕ್ಕೋಸ್ಕರ ಅರಸನ ಬಳಿಗೆ ಬರುವವನಾಗಿದ್ದರೆ ಅವನನ್ನು ಕರೆದು--ನೀನು ಯಾವ ಪಟ್ಟಣದವನೆಂದು ಕೇಳು ವನು.