Home Bibles ☰ Books ಅಂಕೆಗಳ ಪುಸ್ತಕ 10:32 · ಕನ್ನಡ ಬೈಬಲ್
ಅಂಕೆಗಳ ಪುಸ್ತಕ 10:32 · ಕನ್ನಡ ಬೈಬಲ್

ನೀನು ನಮ್ಮ ಸಂಗಡ ಬಂದರೆ ಹೌದು, ಕರ್ತನು ನಮಗೆ ಮಾಡಲಿಕ್ಕಿರುವ ಒಳ್ಳೇದನ್ನು ನಾವು ನಿನಗೆ ಮಾಡುವೆವು ಅಂದನು.

Cross references

ದ್ವಿತೀಯೋಪದೇಶಕಾಂಡ 10:18

ಆತನು ತಂದೆ ಇಲ್ಲದವರಿಗೂ ವಿಧವೆ ಯರಿಗೂ ನ್ಯಾಯತೀರಿಸುತ್ತಾನೆ; ಪರದೇಶಿಯನ್ನು ಪ್ರೀತಿಮಾಡಿ ಅನ್ನ ವಸ್ತ್ರ ಕೊಡುತ್ತಾನೆ.

ನ್ಯಾಯಾಧಿಪತಿಗಳು 1:16

ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.

ನ್ಯಾಯಾಧಿಪತಿಗಳು 4:11

ಮೋಶೆಯ ಮಾವ ನಾದ ಹೋಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರೆಂಬವನು ಕೇನ್ಯರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿ ತನ್ನ ಗುಡಾರವನ್ನು ಕೆದೆಷಿನ ಬಳಿಯಲ್ಲಿರುವ ಚಾನನ್ನೀಮೆಂಬ ಬೈಲಿನಲ್ಲಿ ಹಾಕಿಕೊಂಡಿದ್ದನು.

1 ಸಮುವೇಲ 14:6

ಆಗ ಯೋನಾತಾನನು ತನ್ನ ಆಯುಧಗಳನ್ನು ಹಿಡಿಯುವ ಯೌವನಸ್ಥನಿಗೆ--ನಾವು ಈ ಸುನ್ನತಿ ಇಲ್ಲದವರ ಠಾಣಕ್ಕೆ ದಾಟಿಹೋಗೋಣ ಬಾ; ಒಂದು ವೇಳೆ ದೇವರು ನಮಗೋಸ್ಕರ ಕಾರ್ಯ ನಡಿಸುವನು. ಯಾಕಂದರೆ ಅನೇಕ ಜನರಿಂದಾದರೂ ಸ್ವಲ್ಪ ಜನರಿಂದಾದರೂ ರಕ್ಷಿಸುವದಕ್ಕೆ ಕರ್ತನಿಗೆ ಯಾವ ಆಟಂಕವಿಲ್ಲ ಅಂದನು.

ಕೀರ್ತನೆಗಳು 22:27

ಲೋಕದಂತ್ಯದಲ್ಲಿರುವ ಎಲ್ಲಾ ಜನರು ಜ್ಞಾಪಕ ಮಾಡಿ ಕರ್ತನ ಕಡೆಗೆ ತಿರಿಗಿಕೊಳ್ಳುವರು; ಜನಾಂಗ ಗಳ ಗೋತ್ರಗಳೆಲ್ಲರೂ ನಿನ್ನ ಮುಂದೆ ಆರಾಧಿಸುವರು.

ಕೀರ್ತನೆಗಳು 67:5

ಓ ದೇವರೇ, ಜನರು ನಿನ್ನನ್ನು ಕೊಂಡಾಡಲಿ; ಜನರೆಲ್ಲಾ ನಿನ್ನನ್ನು ಕೊಂಡಾಡಲಿ.

1 ಯೋಹಾನ 1:3

ನಮಗಿರುವ ಅನ್ಯೋನ್ಯತೆಯಲ್ಲಿ ನೀವೂ ಇರ ಬೇಕೆಂದು ನಾವು ಕಂಡು ಕೇಳಿದ್ದನ್ನು ನಿಮಗೆ ಪ್ರಸಿದ್ಧಿ ಪಡಿಸುತ್ತೇವೆ. ನಿಜವಾಗಿಯೂ ನಮಗಿರುವ ಅನ್ಯೋನ್ಯತೆಯು ತಂದೆಯ ಸಂಗಡಲೂ ಆತನ ಮಗನಾದ ಯೇಸು ಕ್ರಿಸ್ತನ ಸಂಗಡಲೂ ಇರು ವಂಥದ್ದು.

Interlinear

Choose Theme