Home Bibles ಯೆರೆಮಿಯ 35:2 · ಕನ್ನಡ ಬೈಬಲ್
ಯೆರೆಮಿಯ 35:2 · ಕನ್ನಡ ಬೈಬಲ್

ಪುಸ್ತಕದ ಸುರಳಿಯನ್ನು ತಕ್ಕೊಂಡು ನಾನು ಇಸ್ರಾಯೇಲಿಗೂ ಯೆಹೂದಕ್ಕೂ ಎಲ್ಲಾ ಜನಾಂಗ ಗಳಿಗೂ ವಿರೋಧವಾಗಿ ನಿನ್ನ ಸಂಗಡ ಮಾತಾಡಿ ದಂದಿನಿಂದ ಯೋಷೀಯನ ದಿನಗಳು ಮೊದಲು ಗೊಂಡು ಈ ದಿನದ ವರೆಗೂ ನಿನಗೆ ಹೇಳಿದ ವಾಕ್ಯಗಳನ್ನೆಲ್ಲಾ ಅದರಲ್ಲಿ ಬರೆ.

Cross references

1 ಅರಸುಗಳು 6:5

ಮಂದಿರದ ಸುತ್ತಲೂ ದೈವೋಕ್ತಿಯ ಸುತ್ತಲೂ ಗೋಡೆಗಳಿಗೆ ಸವಿಾಪವಾಗಿ ಕೊಠಡಿಗಳನ್ನು ಕಟ್ಟಿಸಿದನು.

1 ಅರಸುಗಳು 6:10

ಅವನು ಐದು ಮೊಳ ಎತ್ತರವಾದ ಕೊಠಡಿಗಳನ್ನು ಮನೆಯ ಬಳಿಯಲ್ಲಿ ಸುತ್ತಲೂ ಕಟ್ಟಿಸಿದನು; ಅವು ಮನೆಯ ಮೇಲೆ ಇರಿ ಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.

2 ಅರಸುಗಳು 10:15

ಯೇಹುವು ಅಲ್ಲಿಂದ ಹೋಗಿ ತನ್ನನ್ನು ಎದುರು ಗೊಳ್ಳಲು ರೇಕಾಬನ ಮಗನಾದ ಯೆಹೋನಾದಾ ಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ--ನನ್ನ ಹೃದಯವು ನಿನ್ನ ಹೃದಯದೊಂದಿಗೆ ಇರುವಂತೆ ನಿನ್ನ ಹೃದಯವು ನನ್ನೊಂದಿಗೆ ಸರಿಯಾಗಿದೆಯೋ ಅಂದನು. ಯೆಹೋನಾದಾಬನು--ಅದೆ ಅಂದನು. ಹಾಗಾದರೆ ನಿನ್ನ ಕೈಕೊಡು ಅಂದನು. ಇವನು ತನ್ನ ಕೈಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಏರಿಸಿಕೊಂಡು ಅವ ನಿಗೆ--

1 ದಿನವೃತ್ತಾಂತ 2:55

ಯಾಬೇಚಿನಲ್ಲಿ ವಾಸವಾಗಿದ್ದ ಸಂತತಿಗಳು ಯಾರಂದರೆ, ತಿರ್ರಾತ್ಯರು, ಶಿಮ್ಗಾತ್ಯರು, ಸೂಕಾತ್ಯರು; ಇವರೇ ರೇಕಾಬನ ಮನೆಗೆ ತಂದೆಯಾದ ಹಮತನಿಂದ ಹುಟ್ಟಿದ ಕೇನ್ಯರು.

1 ದಿನವೃತ್ತಾಂತ 9:26

ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು.

1 ದಿನವೃತ್ತಾಂತ 9:33

ಇದಲ್ಲದೆ ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು ಸ್ವತಂತ್ರವಾಗಿ ಕೊಠಡಿ ಗಳಲ್ಲಿ ವಾಸವಾಗಿದ್ದರು; ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು.

1 ದಿನವೃತ್ತಾಂತ 23:28

ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ

1 ದಿನವೃತ್ತಾಂತ 28:12

ಕರ್ತನ ಮನೆಯ ಅಂಗಳಗಳು, ಸುತ್ತಲಿ ರುವ ಕೊಠಡಿಗಳಾದ ಕರ್ತನ ಮನೆಯ ಉಗ್ರಾಣ ಗಳು, ಪ್ರತಿಷ್ಠೆ ಮಾಡಿದವುಗಳ ಉಗ್ರಾಣಗಳು, ಆತ್ಮ ದಿಂದ ತನಗುಂಟಾದ ಇವುಗಳ ಸಮಸ್ತ ಮಾದರಿ ಯನ್ನೂ ಕೊಟ್ಟನು.

2 ದಿನವೃತ್ತಾಂತ 3:9

ಅದರ ಮೊಳೆ ಗಳು ಐವತ್ತು ಶೇಕೆಲುಗಳ ತೂಕ ಬಂಗಾರದ್ದಾಗಿದ್ದವು. ಹಾಗೆಯೇ ಮೇಲಿನ ಕೊಠಡಿಗಳನ್ನು ಬಂಗಾರದಿಂದ ಹೊದಿಸಿದನು.

2 ದಿನವೃತ್ತಾಂತ 31:11

ಆಗ ಹಿಜ್ಕೀಯನು ಕರ್ತನ ಮನೆಯಲ್ಲಿ ಉಗ್ರಾಣಗಳನ್ನು ಸಿದ್ಧಮಾಡಲು ಹೇಳಿದನು.

ಎಜ್ರಾ 8:29

ನೀವು ಯೆರೂಸಲೇಮಿ ನಲ್ಲಿ ಕರ್ತನ ಆಲಯದ ಕೊಠಡಿಗಳೊಳಗೆ ಯಾಜಕರ ಲೇವಿಯರ ಪ್ರಧಾನರ ಮುಂದೆಯೂ ಇಸ್ರಾಯೇಲ್‌ ಪಿತೃಗಳ ಪ್ರಧಾನರ ಮುಂದೆಯೂ ತೂಗುವ ವರೆಗೆ ಜಾಗ್ರತೆಯಾಗಿ ಕಾಪಾಡಿರಿ ಅಂದನು.

ನೆಹೆಮ್ಯ 13:5

ಲೇವಿಯರಿಗೂ ಹಾಡುಗಾರರಿಗೂ ದ್ವಾರ ಪಾಲಕರಿಗೂ ನೇಮಿಸಲ್ಪಟ್ಟ ಕಾಣಿಕೆಗಳನ್ನೂ ಧೂಪ ವನ್ನೂ ಪಾತ್ರೆಗಳನ್ನೂ ಧಾನ್ಯದ ಹತ್ತನೇ ಪಾಲುಗ ಳನ್ನೂ ದ್ರಾಕ್ಷಾರಸವನ್ನೂ ಎಣ್ಣೆಯನ್ನೂ ಯಾಜಕರ ಕಾಣಿಕೆಗಳನ್ನೂ ಪೂರ್ವಕಾಲದಲ್ಲಿ ಇರಿಸುತ್ತಿದ್ದ ದೊಡ್ಡ ಕೊಠಡಿಯನ್ನು ಅವನಿಗೋಸ್ಕರ ಸಿದ್ಧಮಾಡಿದ್ದನು.

ನೆಹೆಮ್ಯ 13:8

ಆದಕಾರಣ ಆ ಕೊಠಡಿಯೊಳಗಿಂದ ಟೋಬೀಯನ ಪಾತ್ರೆಗಳ ನ್ನೆಲ್ಲಾ ಹೊರಗೆ ಹಾಕಿಸಿದೆನು.

ಯೆರೆಮಿಯ 35:4

ಆಗ ಯೆರೆವಿಾಯನು ನೇರೀಯನ ಮಗನಾದ ಬಾರೂಕನನ್ನು ಕರೆದನು; ಬಾರೂಕನು ಯೆರೆವಿಾಯನ ಬಾಯಿಂದ ಕರ್ತನು ಅವನಿಗೆ ಹೇಳಿದ್ದ ಮಾತು ಗಳನ್ನೆಲ್ಲಾ ಕೇಳಿ ಪುಸ್ತಕದ ಸುರಳಿಯಲ್ಲಿ ಬರೆ ದನು.

ಯೆರೆಮಿಯ 35:8

ಆಗ ಪ್ರವಾದಿ ಯಾದ ಯೆರೆವಿಾಯನು ತನಗೆ ಆಜ್ಞಾಪಿಸಿದ್ದನ್ನೆಲ್ಲಾ ಬಾರೂಕನು ಮಾಡಿ ಕರ್ತನ ವಾಕ್ಯಗಳನ್ನು ಪುಸ್ತಕ ದಿಂದ ಕರ್ತನ ಆಲಯದಲ್ಲಿ ಓದಿದನು.

ಯೆಹೆಜ್ಕೇಲ 40:7

ಪ್ರತಿಯೊಂದು ಚಿಕ್ಕ ಕೋಣೆಯು ಒಂದು ಕೋಲು ಉದ್ದವಾಗಿ ಒಂದು ಕೋಲು ಅಗಲವಾಗಿ ಇತ್ತು; ಕೊಠಡಿಗಳ ನಡುವೆ ಐದು ಮೊಳ ಒಳಬಾಗಲಿನ ಪಡಸಾಲೆಯ ಬಳಿಯಲ್ಲಿ ರುವ ಬಾಗಲಿನ ಹೊಸ್ತಿಲು ಒಂದು ಕೋಲಿನ ಅಳತೆ ಯಷ್ಟಿತ್ತು.

ಯೆಹೆಜ್ಕೇಲ 40:16

ಚಿಕ್ಕ ಕೊಠಡಿಗಳಲ್ಲಿಯೂ ಬಾಗಲಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು; ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು; ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿದ್ದವು.

ಯೆಹೆಜ್ಕೇಲ 41:5

ಅನಂತರ ಅವನು ಆಲಯದ ಗೋಡೆಯನ್ನು ಆರು ಮೊಳವೆಂದೂ ಮನೆಯ ಸುತ್ತಲೂ ಎಲ್ಲಾ ಕಡೆಗಳಲ್ಲೂ ಇದ್ದ ಪಾರ್ಶ್ವದ ಕೊಠಡಿಗಳ ಅಗಲ ನಾಲ್ಕು ಮೊಳವೆಂದೂ ಅಳೆದನು.

ಯೆಹೆಜ್ಕೇಲ 42:4

ಕೊಠಡಿಗಳ ಮುಂದೆ ಒಳಗೆ ಹೋಗುವಂತೆ ಮತ್ತು ಹತ್ತು ಮೊಳಗಳು ಅಗಲವಾದಂತ ಒಂದು ಮೊಳದ ಹಾದಿ ಇತ್ತು; ಅವುಗಳ ಬಾಗಲುಗಳು ಉತ್ತರದ ಕಡೆಗಿದ್ದವು.

Interlinear

Choose Theme