ಬೆನ್ಯಾವಿಾನನ ಮಕ್ಕಳ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ಇರುವ ಪಟ್ಟಣಗಳು ಯಾವವಂದರೆ: ಯೆರಿಕೋ, ಬೇತ್‌ಹೋಗ್ಲಾ, ಕೆಚ್ಚೀಚ್ ತಗ್ಗು
Cross references
ನೂನನ ಮಗನಾದ ಯೆಹೋಶುವನು ಪಾಳತಿ ನೋಡುವವರಾದ ಇಬ್ಬರು ಮನುಷ್ಯರನ್ನು ಶಿಟ್ಟೀಮಿನಿಂದ ಗುಪ್ತ ಮಾರ್ಗವಾಗಿ ಕಳುಹಿಸಿ ಅವರಿಗೆ--ನೀವು ಹೋಗಿ ದೇಶವನ್ನು ಮತ್ತು ಯೆರಿಕೋವನ್ನು ನೋಡಿರಿ ಅಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ಸೂಳೆಯ ಮನೆಯಲ್ಲಿ ಇಳಿದುಕೊಂಡರು.
ಆಗ ಇಸ್ರಾಯೇಲ್ ಮಕ್ಕಳ ನಿಮಿತ್ತವಾಗಿ ಒಬ್ಬರೂ ಹೊರಗೆ ಬಾರದ ಹಾಗೆಯೂ ಒಳಗೆ ಹೋಗದ ಹಾಗೆಯೂ ಯೆರಿಕೋವು ಭದ್ರ ವಾಗಿ ಮುಚ್ಚಲ್ಪಟ್ಟಿತು.
ಅಲ್ಲಿಂದ ಬೇತ್‌ಹೊಗ್ಲಾಕ್ಕೂ ಅಲ್ಲಿಂದ ಉತ್ತರಕ್ಕಿರುವ ಬೇತ್‌ಅರಾಬನ್ನು ದಾಟಿರೂಬೇನನ ಮಗನಾದ ಬೋಹನನ ಕಲ್ಲಿಗೂ
ಅದರ ಉತ್ತರ ದಿಕ್ಕಿನ ಮೇರೆಯು ಯೊರ್ದನಿ ನಿಂದ ಹೊರಟು ಯೆರಿಕೋವಿನ ಉತ್ತರದ ಕಡೆಯಿಂದ ಬೆಟ್ಟಗಳಲ್ಲಿ ಪಶ್ಚಿಮದ ಕಡೆಗೆ ಏರಿ ಬೇತಾವೆ ನಿನ ಅರಣ್ಯಕ್ಕೆ ಮುಗಿಯುವದು.
ಅಲ್ಲಿಂದ ಆ ಮೇರೆ ಬೇತ್‌ಹೋಗ್ಲಾಕ್ಕೆ ಉತ್ತರ ಕಡೆಯಾಗಿ ಹೊರಟು ಯೊರ್ದನಿನ ಮುಖದ್ವಾರಕ್ಕೆ ಉತ್ತರವಾದ ಉಪ್ಪು ಸಮುದ್ರದ ಉತ್ತರ ಮೂಲೆ ಯಲ್ಲಿ ಮುಗಿಯಿತು. ಅದು ದಕ್ಷಿಣ ಭಾಗದ ಮೇರೆ.
ಮೋಶೆಯ ಮಾವನಾದ ಕೇನ್ಯನ ಮಕ್ಕಳು ಖರ್ಜೂರ ಗಿಡಗಳ ಪಟ್ಟಣದಿಂದ ಹೊರಟು ಯೂದನ ಮಕ್ಕಳ ಸಂಗಡ ಅರಾದಿಗೆ ದಕ್ಷಿಣಕ್ಕಿರುವ ಯೂದದ ಅರಣ್ಯಕ್ಕೆ ಬಂದು ಜನರ ಸಂಗಡ ವಾಸವಾಗಿದ್ದರು.
ಆಗ ಯೇಸು ಪ್ರತ್ಯುತ್ತರವಾಗಿ--ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಇಳಿದು ಯೆರಿಕೋವಿಗೆ ಹೋಗುತ್ತಿದ್ದಾಗ ಕಳ್ಳರ ಮಧ್ಯದಲ್ಲಿ ಸಿಕ್ಕಿಬಿದ್ದನು. ಅವರು ಅವನ ಬಟ್ಟೆಯನ್ನು ತೆಗೆದುಹಾಕಿ ಅವನನ್ನು ಗಾಯ ಪಡಿಸಿ ಅರೆಜೀವ ಮಾಡಿ ಬಿಟ್ಟು ಹೊರಟುಹೋದರು.
ಯೇಸು ಯೆರಿಕೋವನ್ನು ಪ್ರವೇಶಿಸಿ ಹಾದು ಹೋದನು.