Home Bibles 2 ಅರಸುಗಳು 7:1 · ಕನ್ನಡ ಬೈಬಲ್
2 ಅರಸುಗಳು 7:1 · ಕನ್ನಡ ಬೈಬಲ್

ಆಗ ಎಲೀಷನು--ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೀಗೆ ಹೇಳು ತ್ತಾನೆ -- ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಮಾರಲ್ಪಡುವವು ಅಂದನು.

Cross references

ನಿರ್ಗಮಕಾಂಡ 8:23

ನನ್ನ ಜನರನ್ನೂ ನಿನ್ನ ಜನರನ್ನೂ ವಿಂಗಡಿಸುವೆನು. ನಾಳೆ ಈ ಗುರುತು ಇರುವದು ಎಂದು ಹೇಳು ಅಂದನು.

ನಿರ್ಗಮಕಾಂಡ 9:5

ಇದಲ್ಲದೆ ಕರ್ತನು ಒಂದು ನಿರ್ದಿಷ್ಟವಾದ ಸಮಯವನ್ನು ನೇಮಿಸಿ--ಕರ್ತನು ಈ ಕಾರ್ಯವನ್ನು ನಾಳೆ ದೇಶದಲ್ಲಿ ಮಾಡು ವನು ಎಂದು ಹೇಳು ಅಂದನು.

ನಿರ್ಗಮಕಾಂಡ 14:13

ಅದಕ್ಕೆ ಮೋಶೆಯು ಜನರಿಗೆ--ನೀವು ಭಯಪಡ ಬೇಡಿರಿ; ಕದಲದೆ ನಿಲ್ಲಿರಿ; ಕರ್ತನು ನಿಮಗೆ ಈ ಹೊತ್ತು ತೋರಿಸುವ ರಕ್ಷಣೆಯನ್ನು ನೋಡಿರಿ. ನೀವು ಈ ಹೊತ್ತು ನೋಡುವ ಐಗುಪ್ತ್ಯರನ್ನು ಇನ್ನು ಮುಂದೆ ಎಂದೆಂದಿಗೂ ನೋಡುವದಿಲ್ಲ.

ನಿರ್ಗಮಕಾಂಡ 16:12

ಇಸ್ರಾಯೇಲ್‌ ಮಕ್ಕಳ ಗುಣುಗುಟ್ಟು ವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತ ನಾಡಿ--ನೀವು ಸಾಯಂಕಾಲದಲ್ಲಿ ಮಾಂಸವನ್ನು ಉಣ್ಣು ವಿರಿ, ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಕರ್ತನೆಂದು ತಿಳಿದುಕೊಳ್ಳುವಿರಿ ಎಂದು ಅವರಿಗೆ ಹೇಳು ಅಂದನು.

ಯೆಹೋಶುವ 3:5

ಯೆಹೋಶುವನು ಜನರಿಗೆ--ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ನಾಳೆ ಕರ್ತನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವನು ಅಂದನು.

1 ಸಮುವೇಲ 11:9

ಆಗ ಅವರು ಬಂದ ದೂತರಿಗೆ--ನೀವು ಗಿಲ್ಯಾದಿನ ಲ್ಲಿರುವ ಯಾಬೇಷಿನ ಜನರಿಗೆ--ನಾಳೆ ಬಿಸಿಲೇರಿದಾಗ ನಿಮಗೆ ಸಹಾಯ ಉಂಟಾಗುವದು ಅಂದರು. ಹಾಗೆಯೇ ದೂತರು ಬಂದು ಯಾಬೇಷಿನ ಜನರಿಗೆ ಅದನ್ನು ತಿಳಿಸಿದಾಗ ಅವರು ಸಂತೋಷಪಟ್ಟರು.

1 ಸಮುವೇಲ 15:1

ಸಮುವೇಲನು ಸೌಲನಿಗೆ--ಕರ್ತನು ತನ್ನ ಜನರಾದ ಇಸ್ರಾಯೇಲ್ಯರ ಮೇಲೆ ನಿನ್ನನ್ನು ಅರಸನನ್ನಾಗಿ ಅಭಿಷೇಕಿಸಲು ನನ್ನನ್ನು ಕಳುಹಿಸಿದನು. ಈಗ ನೀನು ಕರ್ತನ ಮಾತುಗಳನ್ನು ಕೇಳು.

1 ಅರಸುಗಳು 22:19

ವಿಾಕಾಯೆಹುವು--ಆದದರಿಂದ ಕರ್ತನ ವಾಕ್ಯವನ್ನು ಕೇಳು--ಕರ್ತನು ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡಿರುವದನ್ನೂ ಆಕಾಶದ ಸಮಸ್ತ ಸೈನ್ಯವು ಆತನ ಬಲಪಾರ್ಶ್ವದಲ್ಲಿಯೂ ಎಡಪಾರ್ಶ್ವದಲ್ಲಿಯೂ ನಿಂತಿರುವದನ್ನೂ ನೋಡಿದೆನು ಅಂದನು.

2 ಅರಸುಗಳು 4:42

ಇದಲ್ಲದೆ ಬಾಳ್‌ಷಾಲಿಷಾದಿಂದ ಒಬ್ಬ ಮನು ಷ್ಯನು ದೇವರ ಮನುಷ್ಯನಿಗೆ ಮೊದಲ ಫಲವಾದ ಜವೆಗೋದಿಯ ಇಪ್ಪತ್ತು ರೊಟ್ಟಿಗಳನ್ನೂ ಕಾಳಿ ನಿಂದ ತುಂಬಿದ ತೆನೆಗಳನ್ನೂ ತಕ್ಕೊಂಡು ಬಂದನು.

2 ಅರಸುಗಳು 6:25

ಆಗ ಸಮಾರ್ಯದಲ್ಲಿ ದೊಡ್ಡ ಬರ ಉಂಟಾಯಿತು. ಇಗೋ, ಒಂದು ಕತ್ತೆಯ ತಲೆಯು ಎಂಭತ್ತು ರೂಪಾಯಿಗಳಿಗೂ ಒಂದು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಡುವ ವರೆಗೂ ಅದನ್ನು ಮುತ್ತಿಗೆ ಹಾಕಿದನು.

2 ಅರಸುಗಳು 6:33

ಅವನು ಅವರ ಸಂಗಡ ಇನ್ನೂ ಮಾತನಾಡುತ್ತಿರುವಾಗ ಇಗೋ, ಆ ಸೇವಕನು ತನ್ನ ಬಳಿಗೆ ಬಂದು--ಇಗೋ, ಈ ಕೇಡು ಕರ್ತನಿಂದ ಉಂಟಾಯಿತು; ನಾನು ಇನ್ನೂ ಕರ್ತನನ್ನು ನಿರೀಕ್ಷಿಸುವದೇನು ಅಂದನು.

2 ಅರಸುಗಳು 7:16

ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲುಕೊಂಡರು. ಆದದ ರಿಂದ ಕರ್ತನ ವಾಕ್ಯದ ಪ್ರಕಾರವೇ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆಗೋದಿಯು ಒಂದು ಶೇಕೆಲಿಗೂ ಮಾರಲ್ಪಟ್ಟಿತು.

2 ಅರಸುಗಳು 7:18

ಹಾಗೆಯೇ--ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ನಾಳೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಮಾರಲ್ಪಡುವ ವೆಂದು ದೇವರ ಮನುಷ್ಯನು ಅರಸನಿಗೆ ಹೇಳಿದ ಪ್ರಕಾರವೇ ಸಂಭವಿಸಿತು.

2 ಅರಸುಗಳು 20:16

ಆಗ ಯೆಶಾಯನು ಹಿಜ್ಕೀಯನಿಗೆ--ಕರ್ತನ ವಾಕ್ಯವನ್ನು ಕೇಳು.

ಕೀರ್ತನೆಗಳು 46:5

ದೇವರು ಅದರ ಮಧ್ಯದಲ್ಲಿ ಇದ್ದಾನೆ; ಅದು ಕದಲದು; ದೇವರು ಹೊತ್ತಾರೆಯಲ್ಲಿ ಅದಕ್ಕೆ ಸಹಾಯ ಮಾಡುವನು.

ಯೆಶಾಯ 1:10

ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.

ಯೆಹೆಜ್ಕೇಲ 37:4

ಆತನು ನನಗೆ ಹೇಳಿದ್ದೇನಂದರೆ--ಈ ಎಲುಬುಗಳ ಮೇಲೆ ಪ್ರವಾದಿಸು ಮತ್ತು ಅವುಗಳಿಗೆ ಹೇಳು--ಓ ಒಣಗಿದ ಎಲುಬುಗಳೇ, ನೀವು ಕರ್ತನ ವಾಕ್ಯವನ್ನು ಕೇಳಿರಿ.

ಯೋಹಾನ 6:9

ಇಲ್ಲಿ ಒಬ್ಬ ಹುಡುಗನಿ ದ್ದಾನೆ; ಅವನಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಸಣ್ಣ ವಿಾನುಗಳೂ ಅವೆ; ಆದರೆ ಇಷ್ಟೊಂದು ಜನರಿಗೆ ಅವು ಯಾತಕ್ಕಾದಾವು ಅಂದನು.

ಪ್ರಕಟನೆ 6:6

ಆಮೇಲೆ ನಾಲ್ಕು ಜೀವಿಗಳ ಮಧ್ಯದಿಂದ--ರೂಪಾಯಿಗೆ ಒಂದು ಸೇರು ಗೋಧಿ; ರೂಪಾಯಿಗೆ ಮೂರು ಸೇರು ಜವೆಗೋಧಿ; ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ನೀನು ಕೆಡಿಸಬೇಡ ಎಂದು ಹೇಳುವ ಧ್ವನಿಯನ್ನು ನಾನು ಕೇಳಿದೆನು.

Interlinear

Choose Theme