ಇದಲ್ಲದೆ ಕರ್ತನು ಒಂದು ನಿರ್ದಿಷ್ಟವಾದ ಸಮಯವನ್ನು ನೇಮಿಸಿ--ಕರ್ತನು ಈ ಕಾರ್ಯವನ್ನು ನಾಳೆ ದೇಶದಲ್ಲಿ ಮಾಡು ವನು ಎಂದು ಹೇಳು ಅಂದನು.
Cross references
ನನ್ನ ಜನರನ್ನೂ ನಿನ್ನ ಜನರನ್ನೂ ವಿಂಗಡಿಸುವೆನು. ನಾಳೆ ಈ ಗುರುತು ಇರುವದು ಎಂದು ಹೇಳು ಅಂದನು.
ಇಗೋ, ನಾಳೆ ಇಷ್ಟು ಹೊತ್ತಿಗೆ ಮಹಾಕಠಿಣವಾದ ಆನೆಕಲ್ಲಿನ ಮಳೆಯನ್ನು ಬೀಳಮಾಡುತ್ತೇನೆ. ಇಂಥದ್ದು ಐಗುಪ್ತದಲ್ಲಿ ಅದಕ್ಕೆ ಅಸ್ತಿವಾರ ಹಾಕಿದಂದಿನಿಂದ ಇಲ್ಲಿಯವರೆಗೂ ಆಗಿರಲಿಲ್ಲ.
ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ ಇಗೋ, ನಾಳೆಯೇನಾನು ನಿನ್ನ ಮೇರೆಯಲ್ಲಿ ಮಿಡತೆಗಳನ್ನು ಬರಮಾಡು ವೆನು.
ಕೋರಹನಿಗೂ ಅವನ ಸಮಸ್ತ ಸಮೂಹಕ್ಕೂ--ಕರ್ತನು ತನ್ನ ಹತ್ತಿರ ಬರ ಮಾಡಿಕೊಳ್ಳುವ ಹಾಗೆ ತಾನು ಆದುಕೊಂಡವನೂ ಪರಿಶುದ್ಧನೂ ಯಾರು ಎಂದು ನಾಳೆ ತೋರಿಸುವನು. ಆತನು ಯಾರನ್ನು ಆದುಕೊಳ್ಳುವನೋ ಅವರನ್ನು ಹತ್ತಿರ ಬರಮಾಡಿಕೊಳ್ಳುವನು. ನೀವು ಇದನ್ನು ಮಾಡಿರಿ:
ಸರ್ವಶಕ್ತನಿಗೆ ಕಾಲಗಳು ಮರೆಯಾಗದೆ ಇರಲಾಗಿ, ಆತನನ್ನು ತಿಳಿದವರು ಆತನ ದಿವಸಗಳನ್ನು ನೋಡದೆ ಇರುವದು ಯಾಕೆ?
ಆಕಾಶದ ಕೆಳಗೆ ಪ್ರತಿಯೊಂದು ಕಾರ್ಯಕ್ಕೂ ಒಂದು ಕಾಲವಿದೆ; ಪ್ರತಿಯೊಂದು ಉದ್ದೇಶಕ್ಕೂ ಒಂದು ಸಮಯವಿದೆ.
ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವ ಅರಸ ನನ್ನು ಕುರಿತು, ನಿಮ್ಮ ಸಂಗಡ ಸೆರೆಗೆ ಹೊರಡದೆ ಈ ಪಟ್ಟಣದಲ್ಲಿ ವಾಸವಾಗಿರುವ ನಿಮ್ಮ ಸಹೋದರರಾದ ಜನರೆಲ್ಲರನ್ನೂ ಕುರಿತು, ಕರ್ತನು ಹೀಗೆ ಹೇಳುತ್ತಾನೆ--
ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ.