ಆಗ ಸಮಾರ್ಯದಲ್ಲಿ ದೊಡ್ಡ ಬರ ಉಂಟಾಯಿತು. ಇಗೋ, ಒಂದು ಕತ್ತೆಯ ತಲೆಯು ಎಂಭತ್ತು ರೂಪಾಯಿಗಳಿಗೂ ಒಂದು ಪಾರಿವಾಳದ ಮಲವು ಐದು ರೂಪಾಯಿಗಳಿಗೂ ಮಾರಲ್ಪಡುವ ವರೆಗೂ ಅದನ್ನು ಮುತ್ತಿಗೆ ಹಾಕಿದನು.
Cross references
ಐಗುಪ್ತದವರೆಲ್ಲಾ ಹಸಿದು ಜನರು ಆಹಾರ ಕ್ಕಾಗಿ ಫರೋಹನ ಬಳಿಗೆ ಹೋಗಿ ಕೂಗಿಕೊಂಡಾಗ ಫರೋಹನು ಎಲ್ಲಾ ಐಗುಪ್ತದವರಿಗೆ--ಯೋಸೇಫನ ಬಳಿಗೆ ಹೋಗಿರಿ; ಅವನು ನಿಮಗೆ ಹೇಳುವದನ್ನು ಮಾಡಿರಿ ಅಂದನು.
ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ.
ಆಗ ಎಲೀಯನು ಅಹಾಬನಿಗೆ ತನ್ನನ್ನು ತೋರಿಸಲು ಹೋದನು. ಆದರೆ ಸಮಾರ್ಯದಲ್ಲಿ ಬರ ಘೋರವಾಗಿತ್ತು.
ಅರಸನು ಅವಳಿಗೆ--ನಿನ್ನ ದುಃಖ ವೇನು ಅಂದನು. ಅದಕ್ಕವಳು--ಈ ಸ್ತ್ರೀಯು ನನಗೆ ಹೇಳಿದ್ದೇನಂದರೆ--ಈ ಹೊತ್ತು ನಾವು ನಿನ್ನ ಮಗನನ್ನು ತಿನ್ನುವ ಹಾಗೆ ಅವನನ್ನು ಕೊಡು; ನಾಳೆ ನನ್ನ ಮಗನನ್ನು ತಿನ್ನೋಣ ಅಂದಳು.
ನಾವು ಪಟ್ಟಣದಲ್ಲಿ ಪ್ರವೇಶಿಸುವೆವು ಅಂದರೆ ಪಟ್ಟಣದಲ್ಲಿ ಬರವಿರುವದರಿಂದ ಅಲ್ಲಿ ಸಾಯುತ್ತೇವೆ; ಇಲ್ಲಿ ನಾವು ಕುಳಿತಿದ್ದರೂ ಹಾಗೆಯೇ ಸಾಯು ತ್ತೇವೆ. ಆದದರಿಂದ ನಾವು ಅರಾಮ್ಯರ ಪಾಳೆಯಕ್ಕೆ ಹೋಗೋಣ ಬನ್ನಿರಿ; ಅವರು ನಮ್ಮನ್ನು ಬದುಕಿಸಿದರೆ ಬದುಕುವೆವು, ಸಾಯಿಸಿದರೆ ಸಾಯುವೆವು ಅಂದು ಕೊಂಡರು.
ಆಗ ಅರಸನು ರಾತ್ರಿಯಲ್ಲಿ ಎದ್ದು ತನ್ನ ಸೇವಕರಿಗೆ--ಅರಾಮ್ಯರು ನಮಗೆ ಮಾಡಿದ್ದನ್ನು ನಿಮಗೆ ತಿಳಿಸುತ್ತೇನೆ. ನಾವು ಹಸಿದವರಾಗಿದ್ದೇವೆಂದು ಅವರು ತಿಳಿದು ಹೊಲದಲ್ಲಿ ಅಡಗಿಕೊಳ್ಳಲು ಪಾಳೆಯ ದಿಂದ ಹೊರಟು--ಅವರು ಪಟ್ಟಣದಿಂದ ಹೊರಟು ಬಂದಾಗ ನಾವು ಅವರನ್ನು ಸಜೀವಿಗಳನ್ನಾಗಿಯೇ ಹಿಡಿದು ಪಟ್ಟಣದಲ್ಲಿ ಪ್ರವೇಶಿಸುವೆವು ಅಂದುಕೊಂಡಿ ದ್ದಾರೆ ಅಂದನು.
ನಾಲ್ಕನೇ ತಿಂಗಳಿನ ಒಂಭತ್ತನೇ ದಿವಸದಲ್ಲಿ ಪಟ್ಟಣದಲ್ಲಿ ಬರವು ಬಲವಾದದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು.
ನಿನ್ನ ಆಸ್ತಿಯನ್ನೂ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ನಿನ್ನ ಎಲ್ಲಾ ಪಾಪಗಳ ನಿಮಿತ್ತ ಕ್ರಯವಿಲ್ಲದೆ ಕೊಳ್ಳೆಯಾಗಿ ಕೊಟ್ಟುಬಿಡುವೆನು.
ಏಕೆ ನನ್ನ ನೋವು ನಿತ್ಯವಾಗಿಯೂ ನನ್ನ ಗಾಯವು ವಾಸಿಯಾಗಲೊ ಲ್ಲದೆಯೂ ಸ್ವಸ್ಥವಾಗದೆಯೂ ಇದೆ? ನೀನು ನನಗೆ ಒಟ್ಟಾರೆ ನೀರು ಬತ್ತುವ ಕಳ್ಳ ತೊರೆಯಂತೆಯೂ ಸ್ಥಿರ ವಿಲ್ಲದ ನೀರಿನಂತೆಯೂ ಇರಬೇಕೋ.
ಈ ಜನರು ಮಾತನಾಡುವದನ್ನು ನೀನು ನೋಡಲಿಲ್ಲವೊ? ಕರ್ತನು ಆದುಕೊಂಡ ಎರಡು ಗೋತ್ರಗಳನ್ನು ಬೇಡವೆಂದಿದ್ದಾನೆಂದು ಹೇಳಿ ನನ್ನ ಜನರನ್ನು ಇನ್ನು ಅವರ ಮುಂದೆ ಜನಾಂಗವಲ್ಲದ ಹಾಗೆ ಅಸಡ್ಡೆ ಮಾಡಿದ್ದಾರೆ.
ಕರ್ತನು ಹೇಳಿದ್ದೇನಂದರೆ -- ಹೀಗೆಯೇ ಇಸ್ರಾಯೇಲ್ಯರ ಮಕ್ಕಳು ತಮ್ಮ ಅಶುದ್ಧವಾದ ರೊಟ್ಟಿಯನ್ನು ಅನ್ಯ ಜನಾಂಗಗಳೊಳಗೆ ತಿನ್ನುವರು. ಆಗ ನಾನು ಅವರನ್ನು ಓಡಿಸಿ ಬಿಡುತ್ತೇನೆ.
ಇದಾದ ಮೇಲೆ ಆತನು ನನಗೆ ಮನುಷ್ಯ ಪುತ್ರನೇ, ಇಗೋ, ನಾನು ಯೆರೂಸಲೇಮಿನಲ್ಲಿ ಅನ್ನದಾನವನ್ನು ಮುರಿಯುವೆನು. ಅವರು ತೂಕದ ಪ್ರಕಾರ ಜಾಗರೂಕತೆಯಿಂದ ರೊಟ್ಟಿಯನ್ನು ತಿನ್ನುವರು. ನೀರನ್ನು ಅಳತೆಯ ಪ್ರಕಾರ ಆಶ್ಚರ್ಯದಿಂದ ಕುಡಿಯುವರು.ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.
ಅವರಿಗೆ ರೊಟ್ಟಿ ಮತ್ತು ನೀರಿನ ಕೊರತೆಯಿಂದ ಆಶ್ಚರ್ಯಪಟ್ಟು ಒಬ್ಬರ ಸಂಗಡ ಒಬ್ಬರು ತಮ್ಮ ಅಕ್ರಮಗಳಿಗಾಗಿ ಕ್ಷಯಿಸಿ ಹೋಗುವರು.