Home Bibles 2 ಅರಸುಗಳು 7:2 · ಕನ್ನಡ ಬೈಬಲ್
2 ಅರಸುಗಳು 7:2 · ಕನ್ನಡ ಬೈಬಲ್

ಆಗ ಅರಸನಿಗೆ ಹಸ್ತಕನಾದ ಅಧಿಕಾರಿಯು ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ -- ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಮಾಡಿದರೂ ಸಂಭವಿಸಲಾರದು ಅನ್ನಲು ಎಲೀಷನು ಅವನಿಗೆ ಈ ಕಾರ್ಯವನ್ನು ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನುವದಿಲ್ಲ ಅಂದನು.

Cross references

ಆದಿಕಾಂಡ 7:11

ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಅಂದರೆ ಅದೇ ತಿಂಗಳಿನ ಹದಿನೇಳನೆಯ ದಿವಸದಲ್ಲಿಯೇ ಮಹಾ ಅಗಾಧದ ಬುಗ್ಗೆಗಳೆಲ್ಲಾ ಒಡೆದವು. ಆಕಾಶದ ಕಿಟಕಿ ಗಳು ತೆರೆಯಲ್ಪಟ್ಟವು.

ಆದಿಕಾಂಡ 18:12

ಆದದರಿಂದ ಸಾರಳು ತನ್ನೊಳಗೆ ನಕ್ಕು--ನಾನು ವೃದ್ಧಳಾಗಿದ್ದೇನೆ. ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರು ವಲ್ಲಿ ನನಗೆ ಸಂತೋಷವಾದೀತೇ? ಅಂದಳು.

ಅಂಕೆಗಳ ಪುಸ್ತಕ 11:13

ಈ ಸಮಸ್ತ ಜನರಿಗೆ ಕೊಡಲು ಮಾಂಸವು ನನಗೆ ಎಲ್ಲಿಂದ ದೊರಕುವದು? ಯಾಕಂದರೆ--ತಿನ್ನುವ ಹಾಗೆ ನಮಗೆ ಮಾಂಸವನ್ನು ಕೊಡು ಎಂದು ನನ್ನ ಬಳಿಯಲ್ಲಿ ಅಳುತ್ತಾರೆ.

ಅಂಕೆಗಳ ಪುಸ್ತಕ 11:21

ಅದಕ್ಕೆ ಮೋಶೆಯು ಹೇಳಿದ್ದೇನಂದರೆ--ನನ್ನ ಸಂಗಡ ಇರುವ ಜನರು ಆರು ಲಕ್ಷ ಕಾಲಾಳುಗಳು. ಪೂರ್ತಿ ಒಂದು ತಿಂಗಳು ತಿನ್ನುವ ಹಾಗೆ ಅವರಿಗೆ ನಾನು ಮಾಂಸವನ್ನು ಕೊಡುವೆನೆಂದು ನೀನು ಹೇಳಿದ್ದೀ.

ಅಂಕೆಗಳ ಪುಸ್ತಕ 23:19

ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?

ದ್ವಿತೀಯೋಪದೇಶಕಾಂಡ 3:27

ಪಿಸ್ಗಾದ ತುದಿಗೆ ಏರಿ ಪಶ್ಚಿಮಕ್ಕೂ ಉತ್ತರಕ್ಕೂ ದಕ್ಷಿಣಕ್ಕೂ ಪೂರ್ವಕ್ಕೂ ಕಣ್ಣುಗಳನ್ನೆತ್ತಿ ಅದನ್ನು ಕಣ್ಣಾರೆ ನೋಡು; ಆದರೆ ಈ ಯೊರ್ದನನ್ನು ನೀನು ದಾಟಿಹೋಗುವದಿಲ್ಲ.

2 ಅರಸುಗಳು 5:18

ಈ ಕಾರ್ಯವನ್ನು ಕರ್ತನು ನಿನ್ನ ಸೇವಕನಿಗೆ ಮನ್ನಿಸಲಿ; ಏನಂದರೆ, ನನ್ನ ಯಜಮಾನನು ಆರಾಧನೆಗೋಸ್ಕರ ರಿಮ್ಮೋನನ ಮನೆಯಲ್ಲಿ ಪ್ರವೇಶಿಸಿ ಅವನು ನನ್ನ ಕೈಯ ಮೇಲೆ ಆತುಕೊಳ್ಳುವಾಗ ರಿಮ್ಮೋನನ ಮನೆಯಲ್ಲಿ ನಾನು ಅಡ್ಡಬಿದ್ದರೆ ಕರ್ತನು ನಿನ್ನ ಸೇವಕನಿಗೆ ಈ ಕಾರ್ಯವನ್ನು ಮನ್ನಿಸಲಿ ಅಂದನು.

2 ಅರಸುಗಳು 7:17

ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ ದೇವರ ಮನು ಷ್ಯನು ಹೇಳಿದ್ದ ಪ್ರಕಾರವೇ ಜನರು ಅವನನ್ನು ಪಟ್ಟ ಣದ ಬಾಗಲಲ್ಲಿ ತುಳಿದು ಹಾಕಿದ್ದರಿಂದ ಅವನು ಸತ್ತುಹೋದನು.

2 ಅರಸುಗಳು 7:19

ಆ ಅಧಿಕಾರಿ ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ--ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ ಹಾಗಾ ಗುವದೋ ಅಂದನು; ಅದಕ್ಕವನು--ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನು ವದಿಲ್ಲ ಎಂದು ಹೇಳಿದ್ದನು.ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು.

2 ದಿನವೃತ್ತಾಂತ 20:20

ಅವರು ಉದಯದಲ್ಲಿ ಎದ್ದು ತೆಕೋವದ ಅರ ಣ್ಯಕ್ಕೆ ಹೊರಟರು. ಅವರು ಹೊರಟು ಹೋಗುತ್ತಿ ರುವಾಗ ಯೆಹೋಷಾಫಾಟನು ನಿಂತುಕೊಂಡು--ಓ ಯೆಹೂದದವರೇ, ಯೆರೂಸಲೇಮಿನ ನಿವಾಸಿಗಳೇ, ನನ್ನ ಮಾತನ್ನು ಕೇಳಿರಿ. ನಿಮ್ಮ ದೇವರಾದ ಕರ್ತನನ್ನು ನಂಬಿಕೊಳ್ಳಿರಿ, ಸ್ಥಿರವಾಗಿರ್ರಿ; ಆತನ ಪ್ರವಾದಿಗಳನ್ನು ನಂಬಿಕೊಳ್ಳಿರಿ; ಆಗ ಜಯಹೊಂದುವಿರಿ ಅಂದನು.

ಕೀರ್ತನೆಗಳು 78:19

ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.

ಕೀರ್ತನೆಗಳು 78:41

ಹೌದು, ಅವರು ತಿರುಗಿಬಿದ್ದು ದೇವ ರನ್ನು ಪರೀಕ್ಷಿಸಿ ಇಸ್ರಾಯೇಲಿನ ಪರಿಶುದ್ಧನಿಗೆ ಮಿತಿ ಮಾಡಿದರು.

ಯೆಶಾಯ 7:9

ಎಫ್ರಾ ಯಾಮಿನ ತಲೆ ಸಮಾರ್ಯ ಸಮಾರ್ಯದ ತಲೆ ರೆಮಲ್ಯನ ಮಗನು. ನೀವು ನಂಬದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವದಿಲ್ಲ ಎಂಬದೇ.

ಮಲಾಕಿ 3:10

ನನ್ನ ಆಲಯದಲ್ಲಿ ಆಹಾರವಿರುವ ಹಾಗೆ ಹತ್ತನೇ ಪಾಲು ಗಳನ್ನೆಲ್ಲಾ ಬೊಕ್ಕಸದ ಮನೆಯಲ್ಲಿ ತನ್ನಿರಿ; ಇದರಿಂದ ನನ್ನನ್ನು ಪರೀಕ್ಷಿಸಿರಿ; ನಾನು ನಿಮಗೆ ಆಕಾಶದ ಕಿಟಕಿ ಗಳನ್ನು ತೆರೆದು ಸಾಕಾಗುವಷ್ಟಕ್ಕಿಂತ ಹೆಚ್ಚಾಗುವಷ್ಟು ಆಶೀರ್ವಾದ ನಿಮಗೆ ಸುರಿಸದಿರುವೆನೇ? ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ರೋಮಾಪುರದವರಿಗೆ 3:3

ಕೆಲವರು ನಂಬದಿದ್ದರೆ ಏನು? ಅವರ ಅಪನಂಬಿಕೆಯು ದೇವರ ವಿಷಯವಾದ ನಂಬಿಕೆಯನ್ನು ನಿರರ್ಥಕ ಮಾಡುವದೋ?

2 ತಿಮೋಥೆಯ 2:13

ನಾವು ಅಪನಂಬಿಕೆ ಯುಳ್ಳವರಾಗಿದ್ದರೂ ಆತನು ನಂಬಿಗಸ್ತನಾಗಿಯೇ ಇರುವನು; ಆತನು ತನ್ನನ್ನು ತಾನು ಅಲ್ಲಗಳೆಯಲಾರನು.

ಹೆಬ್ರಿಯರಿಗೆ 3:17

ಆದರೆ ನಾಲ್ವತ್ತು ವರುಷ ಆತನು ಯಾರಮೇಲೆ ಸಂತಾಪಗೊಂಡನು? ಪಾಪ ಮಾಡಿದವರ ಮೇಲೆ ಅಲ್ಲವೇ? ಅವರ ಶವಗಳು ಅರಣ್ಯದಲ್ಲಿ ಬಿದ್ದವಲ್ಲಾ!

Interlinear

Choose Theme