Home Bibles ಯೆಹೋಶುವ 3:5 · ಕನ್ನಡ ಬೈಬಲ್
ಯೆಹೋಶುವ 3:5 · ಕನ್ನಡ ಬೈಬಲ್

ಯೆಹೋಶುವನು ಜನರಿಗೆ--ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ನಾಳೆ ಕರ್ತನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವನು ಅಂದನು.

Cross references

ನಿರ್ಗಮಕಾಂಡ 19:10

ಆಗ ಕರ್ತನು ಮೋಶೆಗೆ--ಜನರ ಬಳಿಗೆ ಹೋಗಿ ಈ ಹೊತ್ತೂ ನಾಳೆಯೂ ಅವರನ್ನು ಶುದ್ಧಮಾಡು, ಅವರು ತಮ್ಮ ವಸ್ತ್ರಗಳನ್ನು ತೊಳಕೊಳ್ಳಲಿ.

ಲೇವ್ಯಕಾಂಡ 10:3

ತರುವಾಯ ಮೋಶೆಯು ಆರೋನನಿಗೆ--ಕರ್ತನು ಹೇಳಿದ್ದು ಇದೇ, ಅದೇನಂದರೆ--ನನ್ನನ್ನು ಸವಿಾಪಿಸು ವವರನ್ನು ನಾನು ಪರಿಶುದ್ಧಪಡಿಸುವೆನು, ಜನರೆಲ್ಲರ ಮುಂದೆ ನಾನು ಘನ ಹೊಂದುವೆನು ಅಂದನು. ಆಗ ಆರೋನನು ಸುಮ್ಮನಿದ್ದನು.

ಲೇವ್ಯಕಾಂಡ 20:7

ಆದದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ಪರಿಶುದ್ಧರಾಗಿರಿ; ನಿಮ್ಮ ದೇವರಾಗಿರುವ ಕರ್ತನು ನಾನೇ.

ಅಂಕೆಗಳ ಪುಸ್ತಕ 11:8

ಜನರು ಹೊರಗೆಹೋಗಿ ಅದನ್ನು ಕೂಡಿಸಿ ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ ತವೆಗಳಲ್ಲಿ ಸುಟ್ಟು ಅದರಿಂದ ರೊಟ್ಟಿಗಳನ್ನು ಮಾಡುತ್ತಿದ್ದರು. ಅದು ಶುದ್ಧ ಎಣ್ಣೇ ರೊಟ್ಟಿಯ ರುಚಿಯ ಹಾಗೆ ಇತ್ತು.

ಯೆಹೋಶುವ 3:13

ಆಗ ಆಗುವದೇನಂದರೆ, ಸಮಸ್ತ ಭೂಮಿಗೂ ಕರ್ತನಾಗಿರುವ ಕರ್ತನ ಆ ಮಂಜೂಷ ವನ್ನು ಹೊರುವ ಯಾಜಕರ ಅಂಗಾಲುಗಳು ಯೊರ್ದ ನಿನ ನೀರಲ್ಲಿ ಇಟ್ಟಾಗಲೇ ನದಿಯ ನೀರು ಭೇದಿಸಲ್ಪಟ್ಟು ಮೇಲಿನಿಂದ ಹರಿದು ಬರುವ ನೀರು ಹರಿಯದೆ ರಾಶಿಯಾಗಿ ನಿಲ್ಲುವದು ಎಂದು ಹೇಳಿದನು.

ಯೆಹೋಶುವ 3:15

ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡವಿಾರಿ ಹರಿಯುವ ಯೊರ್ದನ್‌ ಹೊಳೆಯ ನೀರು ನಿಂತು ಹೋಯಿತು.

ಯೆಹೋಶುವ 7:13

ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್‌ ಕರ್ತನಾದ ದೇವರು ಹೇಳುತ್ತಾನೆ.

1 ಸಮುವೇಲ 16:5

ಅದಕ್ಕವನು--ಸಮಾಧಾನವೇ; ಕರ್ತನಿಗೆ ಬಲಿಯನ್ನು ಅರ್ಪಿಸ ಬಂದೆನು. ನೀವು ನಿಮ್ಮನ್ನು ಶುದ್ಧಮಾಡಿ ಕೊಂಡು ನನ್ನ ಸಂಗಡ ಯಜ್ಞಅರ್ಪಿಸುವದಕ್ಕೆ ಬನ್ನಿರಿ ಅಂದನು. ಇಷಯನನ್ನು ಅವನ ಮಕ್ಕಳನ್ನು ಶುದ್ಧಿಮಾಡಿ ಅವರನ್ನು ಯಜ್ಞ ಅರ್ಪಿಸುವದಕ್ಕೆ ಕರೆದನು.

ಯೋಬ 1:5

ಔತಣದ ದಿನಗಳು ಮುಗಿದ ಬಳಿಕ ಯೋಬನು ಅವರನ್ನು ಕರೆಕಳುಹಿಸಿ ಅವರನ್ನು ಶುದ್ಧಿ ಮಾಡಿ ಬೆಳಿಗ್ಗೆ ಎದ್ದು ಅವರೆಲ್ಲರ ಲೆಕ್ಕದ ಪ್ರಕಾರ ದಹನಬಲಿಗಳನ್ನು ಅರ್ಪಿಸುತ್ತಿದ್ದನು; ಯೋಬನುಒಂದುವೇಳೆ ನನ್ನ ಕುಮಾರರು ಪಾಪ ಮಾಡಿ ತಮ್ಮ ಹೃದಯಗಳಲ್ಲಿ ದೇವರನ್ನು ಶಪಿಸಿರಬಹುದು ಅಂದು ಕೊಂಡನು. ಹೀಗೆಯೇ ಯೋಬನು ಕ್ರಮವಾಗಿ ಮಾಡುತ್ತಿದ್ದನು.

ಕೀರ್ತನೆಗಳು 77:15

ಯಾಕೋಬನ ಮತ್ತು ಯೋಸೇಫನ ಮಕ್ಕಳಾದ ನಿನ್ನ ಜನರನ್ನು ತೋಳಿನಿಂದ ವಿಮೋಚನೆ ಮಾಡಿದ್ದೀ ಸೆಲಾ.

ಕೀರ್ತನೆಗಳು 86:10

ನೀನು ದೊಡ್ಡವನೂ ಅದ್ಭುತಗಳನ್ನು ಮಾಡುವಾತನೂ ಆಗಿದ್ದೀ; ನೀನೊಬ್ಬನೇ ದೇವರು.

ಕೀರ್ತನೆಗಳು 114:1

ಇಸ್ರಾಯೇಲನು ಐಗುಪ್ತದೊಳಗಿಂದಲೂ ಯಾಕೋಬನ ಮನೆ ತನವು ಅನ್ಯಭಾಷೆಯುಳ್ಳ ಜನರೊಳಗಿಂದಲೂ ಹೊರಟಾಗ

ಯೋವೇಲ 2:16

ಜನರನ್ನು ಕೂಡಿಸಿರಿ, ಸಭೆಯನ್ನು ಪರಿಶುದ್ಧಮಾಡಿರಿ; ಹಿರಿಯರನ್ನು ಒಟ್ಟುಗೂಡಿಸಿರಿ, ಮಕ್ಕಳನ್ನೂ ಮೊಲೆ ಕೂಸುಗಳನ್ನೂ ಕೂಡಿಸಿರಿ; ಮದುಮಗನು ತನ್ನ ಕೊಠಡಿಯೊಳ ಗಿಂದಲೂ ಮದುಮಗಳು ತನ್ನ ಅರೆಯೊಳಗಿಂದಲೂ ಹೊರಡಲಿ.

ಯೋಹಾನ 17:19

ಅವರು ಸತ್ಯದಲ್ಲಿ ಪ್ರತಿಷ್ಠಿಸಲ್ಪಡುವಂತೆ ನಾನು ನನ್ನನ್ನು ಅವರಿ ಗೋಸ್ಕರ ಪ್ರತಿಷ್ಠಿಸಿಕೊಳ್ಳುತ್ತೇನೆ.

Interlinear

Choose Theme