ಆದರೆ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಜನಾಂಗಗಳ ಅಸಹ್ಯಗಳ ಪ್ರಕಾರವೇ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು.
Cross references
ನೀವು ಈ ಯಾವ ವಿಷಯಗಳಲ್ಲಿಯೂ ನಿಮ್ಮನ್ನು ಹೊಲೆ ಮಾಡಿಕೊಳ್ಳಬಾರದು. ನಿಮ್ಮ ಮುಂದೆ ನಾನು ಹೊರಡಿಸಿಬಿಟ್ಟ ಜನಾಂಗಗಳು ಇವೆಲ್ಲವುಗಳಲ್ಲಿ ಹೊಲೆಯಾಗಿವೆ.
ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ.
ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ಆ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ನಿನ್ನ ಮುಂದೆ ಕಡಿದು ಬಿಡುವಾಗ, ನೀನು ಅವುಗಳನ್ನು ಜಯಿಸಿ ಅವುಗಳ ದೇಶದಲ್ಲಿ ವಾಸಮಾಡುವಾಗ
ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು.
ನೀನು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಮೇಘ ಮಂತ್ರದವರ ಕಣಿಹೇಳುವವರ ಮಾತು ಕೇಳುತ್ತಿದ್ದರು; ನಿನ್ನನ್ನಾದರೋ ನಿನ್ನ ದೇವರಾದ ಕರ್ತನು ಹಾಗೆ ಮಾಡಗೊಡಿಸಲಿಲ್ಲ.
ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು--
ಕಠಿಣಪಡಿಸಿ ಆತನ ಕಟ್ಟಳೆಗಳನ್ನೂ ಆತನು ತಮ್ಮ ಪಿತೃಗಳ ಸಂಗಡ ಮಾಡಿದ ಆತನ ಒಡಂಬಡಿಕೆಯನ್ನೂ ಆತನು ಅವರಿಗೆ ಹೇಳಿದ ಸಾಕ್ಷಿ ಗಳನ್ನೂ ಅಲಕ್ಷ್ಯಮಾಡಿ ವ್ಯರ್ಥವಾದದ್ದನ್ನು ಹಿಂಬಾ ಲಿಸಿ ವ್ಯರ್ಥವಾದವರಾಗಿ -- ನೀವು ಅವರ ಹಾಗೆ ಮಾಡಬೇಡಿರೆಂದು ಕರ್ತನು ಅವರಿಗೆ ಆಜ್ಞಾಪಿಸಿದರೂ ಅವರ ಸುತ್ತಲಿರುವ ಅನ್ಯಜನಾಂಗಗಳ ಹಿಂದೆ ಹೋದರು.
ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯ ಜನಾಂಗಗಳ ಅಸಹ್ಯವಾದವುಗಳ ಹಾಗೆಯೇ ಅವನು ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು.
ಆದರೆ ಅವರು ಕೇಳದೆ ಹೋದರು; ಕರ್ತನು ಇಸ್ರಾಯೇಲ್ ಮಕ್ಕಳ ಮುಂದೆ ನಾಶಮಾಡಿದ ಜನಾಂಗಗಳ ಕೆಟ್ಟತನಕ್ಕಿಂತ ಅಧಿಕ ವಾಗಿ ಮಾಡಲು ಮನಸ್ಸೆಯು ಅವರನ್ನು ಮಾರ್ಗ ತಪ್ಪಿಸಿದನು.
ಇದಲ್ಲದೆ ಅವನು ಬೆನ್‌ಹಿನ್ನೋಮ ಮಗನ ತಗ್ಗಿನಲ್ಲಿ ಧೂಪವನ್ನರ್ಪಿಸಿ ಕರ್ತನು ಇಸ್ರಾ ಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯರ ಅಸಹ್ಯಗಳ ಪ್ರಕಾರ ಬೆಂಕಿಯಲ್ಲಿ ತನ್ನ ಮಕ್ಕಳನ್ನು ಸುಟ್ಟನು.
ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.
ನಾವು ತಿರಿಗಿ ನಿನ್ನ ಆಜ್ಞೆಗಳನ್ನು ವಿಾರಿ ಈ ಅಸಹ್ಯವಾದವುಗಳನ್ನು ಮಾಡುವ ಜನರ ಸಂಗಡ ಬಂಧುತ್ವ ಮಾಡಬಹುದೋ? ಹಾಗಾದರೆ ಉಳಿದವರೂ ತಪ್ಪಿಸಿಕೊಂಡವರೂ ಇಲ್ಲದೆ ಇರುವ ಹಾಗೆ ಹಾಳಾಗುವ ವರೆಗೂ ನೀನು ನಮ್ಮ ಮೇಲೆ ಕೋಪಮಾಡುವದಿಲ್ಲವೋ?ಇಸ್ರಾಯೇಲ್ ದೇವ ರಾಗಿರುವ ಕರ್ತನೇ, ನೀನು ನೀತಿವಂತನಾಗಿದ್ದೀ; ಇಂದಿನ ಪ್ರಕಾರ ನಾವು ತಪ್ಪಿಸಿಕೊಂಡವರಾಗಿ ಉಳಿ ದಿದ್ದೇವೆ. ಇಗೋ, ನಾವು ನಿನ್ನ ಮುಂದೆ ನಮ್ಮ ಅಪರಾಧಗಳಲ್ಲಿದ್ದೇವೆ. ಇದರ ನಿಮಿತ್ತವಾಗಿ ನಿನ್ನ ಮುಂದೆ ನಿಲ್ಲಲಾರದವರಾಗಿದ್ದೇವೆ.
ಆದರೆ ಅನ್ಯಜನಾಂಗ ಗಳ ಸಂಗಡ ಕೂಡಿಕೊಂಡು; ಅವರ ಕೆಲಸಗಳನ್ನು ಕಲಿತುಕೊಂಡರು.
ಅವರು ಬಹು ಕ್ರೂರವಾದ ಮರಣಗಳಿಂದ ಸಾಯುವರು; ಅವರಿಗೋಸ್ಕರ ಗೋಳಾಟ ಆಗುವದಿಲ್ಲ; ಅವರು ಹೂಣಿಡಲ್ಪಡುವದಿಲ್ಲ; ಭೂಮಿಯ ಮೇಲೆ ಅವರು ಗೊಬ್ಬರವಾಗುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರ ವಾಗುವವು.
ನಾನೇ ಕರ್ತನೆಂದು ನೀವು ತಿಳಿದುಕೊಳ್ಳು ವಿರಿ; ನೀವು ನನ್ನ ನಿಯಮಗಳಲ್ಲಿ ನಡೆಯಲಿಲ್ಲ; ನನ್ನ ನ್ಯಾಯಗಳನ್ನು ಪಾಲಿಸಲಿಲ್ಲ; ಆದರೂ ನಿಮ್ಮ ಸುತ್ತಲಿರುವ ಅನ್ಯ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದೀರಿ.