Home Bibles ದ್ವಿತೀಯೋಪದೇಶಕಾಂಡ 18:9 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 18:9 · ಕನ್ನಡ ಬೈಬಲ್

ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು.

Cross references

ಲೇವ್ಯಕಾಂಡ 18:26

ಆದದರಿಂದ ನೀವು ನನ್ನ ನಿಯಮಗಳನ್ನು ನಿರ್ಣಯಗಳನ್ನು ಕೈಕೊಳ್ಳಬೇಕು. ನಿಮ್ಮ ದೇಶದವರಲ್ಲಿ ಯಾವನೇ ಆಗಲಿ ಇಲ್ಲವೆ ನಿಮ್ಮೊಳಗೆ ಪ್ರವಾಸಿಯಾಗಿದ್ದ ಪರಕೀಯನಾಗಲಿ ಈ ಅಸಹ್ಯವಾದವುಗಳಲ್ಲಿ ಒಂದನ್ನಾದರೂ ಮಾಡ ಬಾರದು.

ಲೇವ್ಯಕಾಂಡ 18:30

ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.

ದ್ವಿತೀಯೋಪದೇಶಕಾಂಡ 12:29

ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಹೋಗುವ ಆ ಜನಾಂಗಗಳನ್ನು ನಿನ್ನ ದೇವರಾದ ಕರ್ತನು ನಿನ್ನ ಮುಂದೆ ಕಡಿದು ಬಿಡುವಾಗ, ನೀನು ಅವುಗಳನ್ನು ಜಯಿಸಿ ಅವುಗಳ ದೇಶದಲ್ಲಿ ವಾಸಮಾಡುವಾಗ

ದ್ವಿತೀಯೋಪದೇಶಕಾಂಡ 12:30

ಅವು ನಿನ್ನ ಮುಂದೆ ನಾಶವಾದ ಮೇಲೆ ನೀನು ಅವುಗಳನ್ನು ಅನುಸರಿಸಿ ಬಲೆಯಲ್ಲಿ ಸಿಕ್ಕಿಬೀಳದ ಹಾಗೆಯೂ--ಈ ಜನಾಂಗಗಳು ತಮ್ಮ ದೇವರುಗಳನ್ನು ಹೇಗೆ ಸೇವಿಸಿದವೋ ನಾನೂ ಹಾಗೆ ಮಾಡುತ್ತೇನೆಂದು ಹೇಳಿ ಅವರ ದೇವರುಗಳನ್ನು ಕುರಿತು ವಿಚಾರಿಸದ ಹಾಗೆಯೂ ನೋಡಿಕೋ.

ದ್ವಿತೀಯೋಪದೇಶಕಾಂಡ 12:31

ನಿನ್ನ ದೇವರಾದ ಕರ್ತ ನಿಗೆ ಹಾಗೆ ಮಾಡಬೇಡ. ಯಾಕಂದರೆ ಕರ್ತನು ಅಸಹ್ಯಿಸಿ ಹಗೆಮಾಡುವದನ್ನೆಲ್ಲಾ ಅವರು ತಮ್ಮ ದೇವರುಗಳಿಗೆ ಮಾಡಿದ್ದಾರೆ; ತಮ್ಮ ಕುಮಾರ ಕುಮಾರ್ತೆ ಯರನ್ನು ಸಹ ತಮ್ಮ ದೇವರುಗಳಿಗೆ ಬೆಂಕಿಯಲ್ಲಿ ಸುಟ್ಟುಬಿಟ್ಟಿದ್ದಾರೆ.ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.

ದ್ವಿತೀಯೋಪದೇಶಕಾಂಡ 20:18

ಅವರು ತಮ್ಮ ದೇವರುಗಳಿಗೆ ಮಾಡಿದ ಎಲ್ಲಾ ಅಸಹ್ಯಗಳನ್ನು ಮಾಡುವದಕ್ಕೆ ನಿಮಗೆ ಕಲಿಸದ ಹಾಗೆಯೂ ನೀವು ನಿಮ್ಮ ದೇವರಾದ ಕರ್ತನಿಗೆ ಪಾಪ ಮಾಡದ ಹಾಗೆಯೂ ನಿನ್ನ ದೇವರಾದ ಕರ್ತನು ನಿನಗೆ ಆಜ್ಞಾಪಿಸಿದ ಹಾಗೆ ನಿರ್ಮೂಲ ಮಾಡಬೇಕು.

2 ಅರಸುಗಳು 17:8

ಇಸ್ರಾಯೇಲ್ಯರ ಮುಂದೆ ಕರ್ತನು ಹೊರ ಡಿಸಿಬಿಟ್ಟ ಅನ್ಯ ಜನಾಂಗಗಳ ಕಟ್ಟಳೆಗಳಲ್ಲಿಯೂ ಇಸ್ರಾ ಯೇಲಿನ ಅರಸುಗಳು ಮಾಡಿದ ಕಟ್ಟಳೆಗಳಲ್ಲಿಯೂ ನಡೆದರು.

2 ಅರಸುಗಳು 17:11

ಅಲ್ಲಿ ಕರ್ತನು ತಮ್ಮ ಮುಂದೆ ಓಡಿಸಿಬಿಟ್ಟ ಅನ್ಯ ಜನಾಂಗಗಳ ಹಾಗೆ ಅವರು ಎಲ್ಲಾ ಉನ್ನತ ಸ್ಥಳಗಳಲ್ಲಿ ಧೂಪವನ್ನು ಸುಟ್ಟು ಕರ್ತನನ್ನು ಸಿಟ್ಟುಗೊಳಿಸುವ ಹಾಗೆ ಕೆಟ್ಟ ಕಾರ್ಯಗಳನ್ನು ಮಾಡಿದರು--

2 ದಿನವೃತ್ತಾಂತ 28:3

ಇದಲ್ಲದೆ ಅವನು ಬೆನ್‌ಹಿನ್ನೋಮ ಮಗನ ತಗ್ಗಿನಲ್ಲಿ ಧೂಪವನ್ನರ್ಪಿಸಿ ಕರ್ತನು ಇಸ್ರಾ ಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯರ ಅಸಹ್ಯಗಳ ಪ್ರಕಾರ ಬೆಂಕಿಯಲ್ಲಿ ತನ್ನ ಮಕ್ಕಳನ್ನು ಸುಟ್ಟನು.

2 ದಿನವೃತ್ತಾಂತ 36:14

ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.

ಯೆರೆಮಿಯ 10:2

ಯೆಹೂದದ ಮನುಷ್ಯರ ಸಂಗಡಲೂ ಯೆರೂಸಲೇಮಿನ ನಿವಾಸಿಗಳ ಸಂಗ ಡಲೂ ಮಾತನಾಡಿ ಅವರಿಗೆ ನೀನು ಹೇಳಬೇಕಾದ ದ್ದೇನಂದರೆ--

Interlinear

Choose Theme