Home Bibles ದ್ವಿತೀಯೋಪದೇಶಕಾಂಡ 18:14 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 18:14 · ಕನ್ನಡ ಬೈಬಲ್

ನೀನು ಸ್ವಾಧೀನಪಡಿಸಿಕೊಳ್ಳುವ ಆ ಜನಾಂಗಗಳು ಮೇಘ ಮಂತ್ರದವರ ಕಣಿಹೇಳುವವರ ಮಾತು ಕೇಳುತ್ತಿದ್ದರು; ನಿನ್ನನ್ನಾದರೋ ನಿನ್ನ ದೇವರಾದ ಕರ್ತನು ಹಾಗೆ ಮಾಡಗೊಡಿಸಲಿಲ್ಲ.

Cross references

ಆದಿಕಾಂಡ 20:6

ದೇವರು ಕನಸಿನಲ್ಲಿ ಅವನಿಗೆ--ಹೌದು, ನೀನು ಯಥಾರ್ಥವಾದ ಹೃದಯ ದಿಂದ ಇದನ್ನು ಮಾಡಿದ್ದೀ ಎಂದು ನನಗೂ ತಿಳಿದದೆ. ಆದದರಿಂದ ನೀನು ನನಗೆ ವಿರೋಧವಾಗಿ ಪಾಪಮಾಡದ ಹಾಗೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟುವದಕ್ಕೆ ಬಿಡಲಿಲ್ಲ.

ದ್ವಿತೀಯೋಪದೇಶಕಾಂಡ 18:10

ತನ್ನ ಮಗನನ್ನು ಇಲ್ಲವೆ ಮಗಳನ್ನು ಬೆಂಕಿದಾಟಿಸುವವನೂ ಕಣಿಹೇಳುವವನೂ ಮೇಘಮಂತ್ರದವನೂ ಸರ್ಪಮಂತ್ರದವನೂ ಮಾಟಗಾರನೂ

ಕೀರ್ತನೆಗಳು 147:19

ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.

ಯೆಶಾಯ 2:6

ಆದದರಿಂದ ಯಾಕೋಬಿನ ಮನೆತನದವರು ಮೂಡಣ ದೇಶ ಗಳಲ್ಲಿ ಮಗ್ನರಾಗಿ ಫಿಲಿಷ್ಟಿಯರಂತೆ ಕಣಿ ಹೇಳುವವ ರಾಗಿಯೂ ಅನ್ಯ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆ ಯುಳ್ಳವರಾಗಿಯೂ ಇರುವದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀ.

ಅಪೋಸ್ತಲರ ಕೃತ್ಯಗಳು 14:16

ಗತಿಸಿಹೋದ ಕಾಲಗಳಲ್ಲಿ ಆತನು ಎಲ್ಲಾ ಜನಾಂಗಗಳವರನ್ನು ತಮ್ಮ ಸ್ವಂತ ಮಾರ್ಗಗಳಲ್ಲಿ ನಡೆಯುವದಕ್ಕೆ ಬಿಟ್ಟುಬಿಟ್ಟನು;

Interlinear

Choose Theme