Home Bibles 2 ದಿನವೃತ್ತಾಂತ 36:14 · ಕನ್ನಡ ಬೈಬಲ್
2 ದಿನವೃತ್ತಾಂತ 36:14 · ಕನ್ನಡ ಬೈಬಲ್

ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು.

Cross references

ಲೇವ್ಯಕಾಂಡ 19:30

ನನ್ನ ಸಬ್ಬತ್ತುಗಳನ್ನು ನೀನು ಕೈಕೊಳ್ಳಬೇಕು; ನನ್ನ ಪವಿತ್ರ ಸ್ಥಳವನ್ನು ಭಯಭಕ್ತಿಯಿಂದ ಕಾಣಬೇಕು; ನಾನೇ ಕರ್ತನು.

ದ್ವಿತೀಯೋಪದೇಶಕಾಂಡ 18:9

ನಿನ್ನ ದೇವರಾದ ಕರ್ತನು ನಿನಗೆ ಕೊಡುವ ದೇಶಕ್ಕೆ ನೀನು ಬಂದಾಗ ಆ ಜನಾಂಗಗಳು ಮಾಡುವ ಅಸಹ್ಯಗಳ ಪ್ರಕಾರ ಮಾಡುವದಕ್ಕೆ ನೀನು ಕಲಿಯ ಬಾರದು.

2 ಅರಸುಗಳು 16:10

ಅರಸನಾದ ಆಹಾಜನು ಅಶ್ಶೂರಿನ ಅರಸನಾದ ತಿಗ್ಲತ್ಪಿಲೇಸೆರನನ್ನು ಎದುರುಗೊಳ್ಳಲು ದಮಸ್ಕಕ್ಕೆ ಹೋಗಿ ಅಲ್ಲಿ ಒಂದು ಬಲಿಪೀಠವನ್ನು ಕಂಡನು. ಆಗ ಅರಸ ನಾದ ಆಹಾಜನು ಆ ಬಲಿಪೀಠದ ರೂಪವನ್ನೂ ಅದರ ಎಲ್ಲಾ ಕೈ ಕೆಲಸದ ಪ್ರಕಾರ ಮಾದರಿಯನ್ನೂ ಯಾಜಕನಾದ ಊರೀಯನಿಗೆ ಕಳುಹಿಸಿದನು.

2 ದಿನವೃತ್ತಾಂತ 28:3

ಇದಲ್ಲದೆ ಅವನು ಬೆನ್‌ಹಿನ್ನೋಮ ಮಗನ ತಗ್ಗಿನಲ್ಲಿ ಧೂಪವನ್ನರ್ಪಿಸಿ ಕರ್ತನು ಇಸ್ರಾ ಯೇಲಿನ ಮಕ್ಕಳ ಮುಂದೆ ಹೊರಡಿಸಿದ ಅನ್ಯರ ಅಸಹ್ಯಗಳ ಪ್ರಕಾರ ಬೆಂಕಿಯಲ್ಲಿ ತನ್ನ ಮಕ್ಕಳನ್ನು ಸುಟ್ಟನು.

2 ದಿನವೃತ್ತಾಂತ 33:4

ಇದ ಲ್ಲದೆ--ಯೆರೂಸಲೇಮಿನಲ್ಲಿ ನನ್ನ ಹೆಸರು ಯುಗ ಯುಗಕ್ಕೂ ಇರುವದೆಂದು ಕರ್ತನು ಹೇಳಿದ ಕರ್ತನ ಆಲಯದಲ್ಲಿ ಬಲಿಪೀಠಗಳನ್ನು ಕಟ್ಟಿಸಿದನು.

2 ದಿನವೃತ್ತಾಂತ 33:9

ಹೀಗೆಯೇ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ನಾಶ ಮಾಡಿದ ಜನಾಂಗಗಳಿಗಿಂತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಕೆಟ್ಟದ್ದನ್ನು ಮಾಡು ವದಕ್ಕೆ ತಪ್ಪಿಹೋಗುವಂತೆ ಮನಸ್ಸೆಯು ಮಾಡಿದನು.

ಎಜ್ರಾ 9:7

ನಮ್ಮ ತಂದೆಗಳ ದಿವಸಗಳು ಮೊದಲುಗೊ ಂಡು ಈ ದಿವಸದ ವರೆಗೆ ದೊಡ್ಡ ಅಪರಾಧಕ್ಕೊಳಗಾಗಿದ್ದೇವೆ. ಇಂದಿನ ಪ್ರಕಾರವೇ ನಾವು ಈ ದೇಶಗಳ ಅರಸುಗಳ ಕೈಗೆ ಒಪ್ಪಿಸಲ್ಪಟ್ಟು ನಮ್ಮ ಅಕ್ರಮಗಳಿಗೋಸ್ಕರ ನಾವೂ ನಮ್ಮ ಅರಸುಗಳೂ ನಮ್ಮ ಯಾಜಕರೂ ಕತ್ತಿಗೂ ಸೆರೆಗೂ ಕೊಳ್ಳೆಗೂ ನಾಚಿಕೆಗೂ ಗುರಿಯಾಗಿದ್ದೇವೆ

ಯೆರೆಮಿಯ 5:5

ಏಳಿರಿ, ರಾತ್ರಿಯಲ್ಲಿ ಏರಿಹೋಗಿ ಅವಳ ಅರಮನೆಗಳನ್ನು ನಾಶಮಾಡೋಣ;

ಯೆರೆಮಿಯ 5:6

ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಮರಗಳನ್ನು ಕಡಿಯಿರಿ; ಯೆರೂಸಲೇಮಿಗೆ ವಿರೋಧವಾಗಿ ದಿಬ್ಬ ಹಾಕಿರಿ; ವಿಚಾರಿಸಲ್ಪಡತಕ್ಕ ಪಟ್ಟಣವು ಇದೇ; ಅವಳಲ್ಲಿ ತುಂಬ ಬಲಾತ್ಕಾರ ಅದೆ.

ಯೆರೆಮಿಯ 37:13

ಹೀಗೆ ಹಗ್ಗಗಳಿಂದ ಯೆರೆವಿಾಯನನ್ನು ಎಳೆದು ಅವನನ್ನು ಕುಣಿಯೊಳಗಿಂದ ಎತ್ತಿದರು; ಆಮೇಲೆ ಯೆರೆವಿಾಯನು ಸೆರೆಮನೆಯ ಅಂಗಳದಲ್ಲಿ ಉಳಿದನು.

ಯೆರೆಮಿಯ 38:4

ಆಗ ಆದದ್ದೇನಂದರೆ--ಯೆಹೂ ದದ ಅರಸನಾದ ಚಿದ್ಕೀಯನೂ ಯುದ್ಧಸ್ಥರೆಲ್ಲರೂ ಅವರನ್ನು ನೋಡಿದಾಗ ಓಡಿಹೋಗಿ ರಾತ್ರಿಯಲ್ಲಿ ಪಟ್ಟಣವನ್ನು ಅರಸನ ತೋಟದ ಮಾರ್ಗದಿಂದ ಬಿಟ್ಟು ಎರಡು ಗೋಡೆಗಳ ಮಧ್ಯದಲ್ಲಿರುವ ಬಾಗಲಿನಿಂದ ಹೊರಟರು;

ಯೆಹೆಜ್ಕೇಲ 8:5

ಆಮೇಲೆ ಆತನು ನನಗೆ --ಮನುಷ್ಯಪುತ್ರನೇ, ಈಗ ಉತ್ತರದ ಕಡೆಗೆ ನಿನ್ನ ಕಣ್ಣುಗಳನ್ನು ಎತ್ತು ಅಂದಾಗ ನಾನು ಉತ್ತರದ ಕಡೆಗೆ ಕಣ್ಣುಗಳನ್ನೆತ್ತಿದೆನು; ಇಗೋ, ಉತ್ತರದಲ್ಲಿ ಯಜ್ಞ ವೇದಿಯ ಬಾಗಿಲಲ್ಲಿ ಅಸೂಯೆ ವಿಗ್ರಹವು ಪ್ರವೇಶ ದಲ್ಲಿತ್ತು.

ಯೆಹೆಜ್ಕೇಲ 11:12

ನಾನೇ ಕರ್ತನೆಂದು ನೀವು ತಿಳಿದುಕೊಳ್ಳು ವಿರಿ; ನೀವು ನನ್ನ ನಿಯಮಗಳಲ್ಲಿ ನಡೆಯಲಿಲ್ಲ; ನನ್ನ ನ್ಯಾಯಗಳನ್ನು ಪಾಲಿಸಲಿಲ್ಲ; ಆದರೂ ನಿಮ್ಮ ಸುತ್ತಲಿರುವ ಅನ್ಯ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದೀರಿ.

ಯೆಹೆಜ್ಕೇಲ 22:6

ಇಗೋ ಇಸ್ರಾ ಯೇಲಿನ ಪ್ರಭುಗಳಲ್ಲಿ ಪ್ರತಿಯೊಬ್ಬನು ತನ್ನ ತನ್ನ ಶಕ್ತ್ಯಾನುಸಾರವಾಗಿ ರಕ್ತವನ್ನು ನಿನ್ನ ಮೇಲೆ ಚೆಲ್ಲುತ್ತಲೇ ಇದ್ದಾನೆ.

ಯೆಹೆಜ್ಕೇಲ 22:26

ಅದರ ಯಾಜಕರು ನನ್ನ ವಿಧಿಗಳನ್ನು ಭಂಗಪಡಿಸಿದ್ದಾರೆ; ನನ್ನ ಪರಿಶುದ್ಧ ವಸ್ತುಗಳನ್ನು ಅಪವಿತ್ರಪಡಿಸಿದ್ದಾರೆ; ಪರಿಶುದ್ಧ ವಾದದ್ದಕ್ಕೂ ಅಪವಿತ್ರವಾದದ್ದಕ್ಕೂ ಭೇದವೆಣಿಸಲಿಲ್ಲ; ಶುದ್ಧಾಶುದ್ಧ ವಿವೇಚನೆಯನ್ನು ಬೋಧಿಸಲಿಲ್ಲ, ನನ್ನ ಸಬ್ಬತ್ತುಗಳಿಗೆ ತಮ್ಮ ಕಣ್ಣುಗಳನ್ನು ಮರೆಮಾಡಿದ್ದಾರೆ. ಆದದರಿಂದ ನಾನು ಅವರಲ್ಲಿ ಅಪವಿತ್ರನಾದೆನು.

ಯೆಹೆಜ್ಕೇಲ 22:27

ಅಲ್ಲಿನ ಪ್ರಧಾನರು ಸುಲಿಗೆಗಾಗಿ ರಕ್ತ ಸುರಿಸಿ ಪ್ರಾಣ ಗಳನ್ನು ನುಂಗುವ ಹಾಗೆ ಬೇಟೆಯ ತೋಳಗಳಂತಿ ದ್ದಾರೆ.

ದಾನಿಯೇಲ 9:6

ಇಲ್ಲವೆ ನಿನ್ನ ಹೆಸರಿನಲ್ಲಿ ನಮ್ಮ ಅರಸರಿಗೂ ಪ್ರಧಾನ ರಿಗೂ ತಂದೆಗಳಿಗೂ ದೇಶದ ಎಲ್ಲಾ ಜನರಿಗೂ ಮಾತ ನಾಡಿದ ನಿನ್ನ ಸೇವಕರಾದ ಪ್ರವಾದಿಗಳಿಗೆ ಕಿವಿಗೊಡ ಲಿಲ್ಲ.

ದಾನಿಯೇಲ 9:8

ಓ ಕರ್ತನೇ, ನಿನಗೆ ವಿರುದ್ಧವಾಗಿ ನಾವು ಪಾಪಮಾಡಿದ್ದರಿಂದ ನಮ್ಮ ಅರಸರಿಗೂ ಪ್ರಧಾ ನರಿಗೂ ಮತ್ತು ನಮ್ಮ ತಂದೆಗಳಿಗೂ ನಮಗೂ ನಾಚಿಕೆಯ ಮುಖಗಳಿವೆ.

ಮೀಕ 3:1

ಆಗ ನಾನು ಹೇಳಿದ್ದೇನಂದರೆ--ಯಾಕೋಬಿನ ಮುಖ್ಯಸ್ಥರೇ, ಇಸ್ರಾಯೇ ಲಿನ ಮನೆತನದ ಪ್ರಧಾನರೇ, ಈಗ ಕೇಳಿರಿ; ನ್ಯಾಯ ವನ್ನು ತಿಳಿಯುವದು ನಿಮ್ಮದಲ್ಲವೋ?

ಮೀಕ 3:9

ಯಾಕೋಬನ ಮನೆತನದವರ ಪ್ರಧಾನರೇ, ಇಸ್ರಾಯೇಲಿನ ಮನೆತನದವರ ನ್ಯಾಯಾ ಧಿಪತಿಗಳೇ, ನ್ಯಾಯವನ್ನು ಅಸಹ್ಯಿಸಿ ಎಲ್ಲಾ ಯಥಾರ್ಥ ತ್ವವನ್ನು ಡೊಂಕು ಮಾಡುವವರೇ,

ಮೀಕ 7:2

ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.

ಸೆಫನ್ಯ 3:3

ಅದರ ಮಧ್ಯದಲ್ಲಿರುವ ಪ್ರಧಾನರುಗಳು ಗರ್ಜಿಸುವ ಸಿಂಹಗಳಾಗಿದ್ದಾರೆ; ಅದರ ನ್ಯಾಯಾಧಿಪತಿಗಳು ಸಂಜೆಯ ತೋಳಗಳಾಗಿದ್ದಾರೆ; ಮರುದಿನದ ವರೆಗೂ ಕಡಿಯುವದಕ್ಕೆ ಎಲುಬುಗಳಿಲ್ಲ.

Interlinear

Choose Theme