ಆದದರಿಂದ ನೀವು ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ಹೀಗಿದ್ದರೆ ನೀವು ವಾಸಿಸುವದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವದಿಲ್ಲ.
Cross references
ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ.
ನೀವು ನನ್ನ ನಿರ್ಣಯಗಳನ್ನು ಕೈಕೊಂಡು ಅವುಗಳಲ್ಲಿ ನಡೆಯುವ ಹಾಗೆ ನನ್ನ ಕಟ್ಟಳೆಗಳಂತೆ ನಡೆಯಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
ದೇಶವೂ ಹೊಲೆಯಾಗಿದೆ. ಆದದರಿಂದ ಅದರ ಮೇಲಿರುವ ಅಕ್ರಮವನ್ನು ನಾನು ದಂಡಿಸುವೆನು, ಆಗ ದೇಶವು ತಾನೇ ತನ್ನೊಳಗಿನ ನಿವಾಸಿಗಳನ್ನು ಕಾರಿಬಿಡುವದು.
ಆದದರಿಂದ ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯ ಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು ಎಂದು ಹೇಳಿದನು.
ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು.
ಇಸ್ರಾಯೇಲ್ ಮಕ್ಕಳು ಐಗುಪ್ತದೊಳಗಿಂದ ಹೊರಟ ಮೇಲೆ
ಆಗ ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವರಿಗೆ--ಓ ಇಸ್ರಾಯೇಲೇ, ನಾನು ಈಹೊತ್ತು ನಿಮಗೆ ಹೇಳುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿರಿ; ಅವುಗಳನ್ನು ಕಲಿತು ಕೈಕೊಂಡು ನಡೆಯಬೇಕು.
ಕರ್ತನು ನಿನ್ನನ್ನು ನಿನ್ನ ಶತ್ರುಗಳ ಮುಂದೆ ಹೊಡೆದುಬಿಡುವನು; ನೀನು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ಹೊರಟು ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗಿ ಭೂಮಿಯ ಎಲ್ಲಾ ರಾಜ್ಯಗಳಿಗೆ ಚದರಿ ಹೋಗುವಿ.
ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ.
ಆತನ ನಿಯಮಗಳನ್ನು ಕೈಕೊಂಡು ನ್ಯಾಯಪ್ರಮಾಣ ಗಳನ್ನೂ ಕಾಪಾಡುವದಕ್ಕಾಗಿ ಆತನು ಅನ್ಯಜನಾಂಗದ ದೇಶಗಳನ್ನು ಅವರಿಗೆ ಕೊಟ್ಟನು. ಕರ್ತನನ್ನು ಸ್ತುತಿಸಿರಿ.
ನಿನ್ನ ನ್ಯಾಯ ವಿಧಿಗಳಿಗಾಗಿ ನನ್ನಲ್ಲಿರುವ ಅಭಿಲಾಷೆಯ ನಿಮಿತ್ತ ನನ್ನ ಪ್ರಾಣವು ಜಜ್ಜಿಹೋಗಿದೆ
ನಾನು ನಾಚಿಕೆಪಡದ ಹಾಗೆ ನನ್ನ ಹೃದಯವು ನಿನ್ನ ನಿಯಮಗಳಲ್ಲಿ ಸಂಪೂರ್ಣವಾಗಿರಲಿ.
ನಿನ್ನ ನೀತಿ ವಿಧಿಗಳನ್ನು ಅನುಸರಿಸುವೆನೆಂದು ಪ್ರಮಾಣ ಮಾಡಿದ್ದೇನೆ; ಅದನ್ನು ಈಡೇರಿಸುವೆನು.
ಪೂರ್ಣಹೃದಯದಿಂದ ನಾನು ಕೂಗಿದ್ದೇನೆ; ಓ ಕರ್ತನೇ, ನನಗೆ ಉತ್ತರಕೊಡು; ನಾನು ನಿನ್ನ ನಿಯಮಗಳನ್ನು ಕೈಕೊಳ್ಳುವೆನು.
ಆದಿ ಯಿಂದಲೂ ನಿನ್ನ ವಾಕ್ಯವು ಸತ್ಯವೇ; ನಿನ್ನ ನೀತಿಯ ನ್ಯಾಯವಿಧಿಗಳೆಲ್ಲಾ ನಿತ್ಯವಾಗಿವೆ.
ನಿನ್ನ ನೀತಿಯ ವಿಧಿಗಳ ನಿಮಿತ್ತ ದಿವಸಕ್ಕೆ ಏಳು ಸಾರಿ ನಿನ್ನನ್ನು ಸ್ತುತಿಸುತ್ತೇನೆ.
ನೀನು ನಿನ್ನ ನಿಯಮಗಳನ್ನು ನನಗೆ ಕಲಿಸಿದಾಗ ನನ್ನ ತುಟಿಗಳು ನಿನ್ನ ಸ್ತೋತ್ರವನ್ನು ನುಡಿಯುತ್ತವೆ.
ನನ್ನ ಪ್ರಾಣವು ಬದುಕಿ ನಿನ್ನನ್ನು ಸ್ತುತಿಸಲಿ; ನಿನ್ನ ನ್ಯಾಯವಿಧಿಗಳು ನನಗೆ ಸಹಾಯಮಾಡಲಿ.ತಪ್ಪಿಹೋದ ಕುರಿಯ ಹಾಗೆ ತೊಳಲ್ಲಿದ್ದೇನೆ; ನಿನ್ನ ಸೇವಕನನ್ನು ಹುಡುಕು; ನಿನ್ನ ಆಜ್ಞೆಗಳನ್ನು ಮರೆತುಬಿಡೆನು.
ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.
ನನ್ನ ಆತ್ಮ ವನ್ನು ನಿಮ್ಮೊಳಗೆ ಇಡುವೆನು; ನೀವು ನನ್ನ ನಿಯಮ ಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಅನುಸರಿಸಿ ನಡೆಯುವಿರಿ.