ನಾನು ಅವನನ್ನು ನನ್ನ ಚೊಚ್ಚಲ ಮಗನ ನ್ನಾಗಿಯೂ ಭೂಮಿಯ ಅರಸರಿಗಿಂತ ಉನ್ನತನನ್ನಾ ಗಿಯೂ ಮಾಡುವೆನು.
Cross references
ಆಗ ನೀನು ಫರೋಹನಿಗೆ--ಕರ್ತನು ಹೀಗೆ ಹೇಳುತ್ತಾನೆ; ಇಸ್ರಾಯೇಲು ನನ್ನ ಮಗನು. ಅವನು ನನ್ನ ಚೊಚ್ಚಲ ಮಗನೇ ಎಂದು ಹೇಳಬೇಕು.
ತನ್ನ ತೊಟ್ಟಿಗಳಿಂದ ನೀರು ಹರಿಯಮಾಡುವನು; ಅವನ ಸಂತತಿಯೂ ಅನೇಕ ಜಲಗಳಲ್ಲಿ ಇರುವದು; ಅವನ ಅರಸನು ಅಗಾಗನಿಗಿಂತ ಉನ್ನತವಾಗಿರುವನು; ಅವನ ರಾಜ್ಯವು ಘನತೆಗೇರಿರುವದು.
ಆದರೆ ಯೆಶುರೂನು ಕೊಬ್ಬಿ ಒದ್ದನು, ನೀನು ಕೊಬ್ಬಿದವನಾಗಿ ಉಬ್ಬಿದಿ, ನೀನು ಕೊಬ್ಬಿನಿಂದ ಮುಚ್ಚ ಲ್ಪಟ್ಟಿ. ಅವನು ತನ್ನನ್ನು ಉಂಟುಮಾಡಿದ ದೇವರನ್ನು ತೊರೆದು ತನ್ನ ರಕ್ಷಣೆಯ ಬಂಡೆಯನ್ನು ಅಲಕ್ಷ್ಯ ಮಾಡಿದನು.
ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು.
ಕರ್ತನು ಜೀವಿತ ನಾಗಿದ್ದಾನೆ; ನನ್ನ ಬಂಡೆಗೆ ಸ್ತುತಿಯಾಗಲಿ; ನನ್ನ ರಕ್ಷಣೆಯ ಬಂಡೆಯಾದ ದೇವರು ಉನ್ನತನಾಗಲಿ.
ಇದಲ್ಲದೆ ನಿನಗಿಂತ ಮುಂಚೆ ಇದ್ದ ಅರಸುಗಳಲ್ಲಿ ಯಾರಿಗೂ ಇಲ್ಲದಂಥ ನಿನ್ನ ತರುವಾಯ ಯಾರಿಗೂ ಇರದಂಥ ಐಶ್ವರ್ಯವನ್ನೂ ಸ್ಥಿತಿಯನ್ನೂ ಘನವನ್ನೂ ಕೊಡುವೆನು ಅಂದನು.
ದೇವರು ಸೊಲೊಮೋನನ ಹೃದಯದಲ್ಲಿ ಉಂಟುಮಾಡಿದ ಅವನ ಜ್ಞಾನವನ್ನು ಕೇಳುವದಕ್ಕಾಗಿ ಭೂಮಿಯ ಸಮಸ್ತ ಅರಸುಗಳು ಸೊಲೊಮೋನನ ಮುಖದರ್ಶನವನ್ನು ಹುಡುಕಿದರು.
ಕಟ್ಟಳೆಯನ್ನು ಸಾರುತ್ತೇನೆ; ಕರ್ತನು ನನಗೆ ಹೇಳಿದ್ದು--ನೀನು ನನ್ನ ಮಗನು, ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೇನೆ.
ಆದದರಿಂದ ಓ ಅರಸುಗಳೇ, ಈಗ ಜ್ಞಾನವಂತ ರಾಗಿರಿ; ಭೂ ನ್ಯಾಯಾಧಿಪತಿಗಳೇ, ಶಿಕ್ಷಣ ಪಡೆಯಿರಿ.
ನೀನು ಯಾವಾಗಲೂ ನಾನು ಆಶ್ರಯಿಸಿಕೊಳ್ಳುವ ಬಲಸ್ಥಾನವಾಗಿರು. ನನ್ನನ್ನು ರಕ್ಷಿಸುವದಕ್ಕೆ ಆಜ್ಞಾಪಿಸಿದ್ದೀ, ನನ್ನ ಬಂಡೆಯೂ ಕೋಟೆಯೂ ನೀನೇ.
ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
ಮನುಷ್ಯನಿಂದ ತಿರಸ್ಕರಿಸಲ್ಪಟ್ಟವನು ಜನಾಂಗಕ್ಕೆ ಅಸ ಹ್ಯನೂ ಅಧಿಕಾರಿಗಳ ಸೇವಕನಿಗೆ ಇಸ್ರಾಯೇಲಿನ ವಿಮೋಚಕನೂ ಮತ್ತು ಅವನ ಪರಿಶುದ್ಧನಾದ ಕರ್ತನೂ ಹೀಗೆ ಹೇಳುತ್ತಾನೆ, ಕರ್ತನ ನಂಬಿಗಸ್ತಿ ಕೆಯನ್ನೂ ನಿನ್ನನ್ನು ಆದುಕೊಂಡ ಇಸ್ರಾಯೇಲಿನ ಪರಿಶುದ್ಧನನ್ನೂ ನೋಡಿ ಅರಸರು ಏಳುತ್ತಾರೆ; ಅಧಿ ಪತಿಗಳು ಸಹ ಆರಾಧಿಸುವರು.
ಆತನು ಅನೇಕ ಸಹೋದರರಲ್ಲಿ ತನ್ನ ಮಗನು ಜ್ಯೇಷ್ಠಪುತ್ರನಾಗಿರಬೇಕೆಂದು ತಾನು ಯಾರನ್ನು ಮೊದಲು ತಿಳುಕೊಂಡನೋ ಅವರನ್ನು ತನ್ನ ಮಗನ ಸಾರೂಪ್ಯವುಳ್ಳವರಾಗುವಂತೆ ಮೊದಲೇ ನೇಮಿಸಿ ದನು.
ಆತನು ಅದೃಶ್ಯನಾದ ದೇವರ ಪ್ರತಿರೂಪನೂ ಪ್ರತಿಯೊಂದು ಸೃಷ್ಟಿಗೆ ಜ್ಯೇಷ್ಠನೂ ಆಗಿದ್ದಾನೆ.
ಸಭೆಯೆಂಬ ದೇಹಕ್ಕೆ ಆತನು ಶಿರಸ್ಸಾಗಿದ್ದಾನೆ. ಆತನೇ ಆದಿಯಾಗಿದ್ದು ಎಲ್ಲಾದರಲ್ಲಿ ಪ್ರಮುಖನಾಗಿರುವಂತೆ ಆತನು ಸತ್ತವರೊಳಗಿಂದ ಬಂದ ಜ್ಯೇಷ್ಠನೂ ಆಗಿದ್ದಾನೆ.
ಆತನ ತೊಡೆಯ ಮೇಲೆಯೂ ವಸ್ತ್ರದ ಮೇಲೆಯೂ--ರಾಜಾ ಧಿರಾಜನೂ ಕರ್ತರ ಕರ್ತನೂ ಎಂಬ ಹೆಸರು ಬರೆದದೆ.
ರಕ್ಷಿಸಲ್ಪಟ್ಟ ಜನಾಂಗದವರು ಅದರ ಬೆಳಕಿನಲಿ ನಡೆಯುವರು; ಭೂರಾಜರು ತಮ್ಮ ವೈಭವವನ್ನೂ ಘನವನ್ನೂ ಅಲ್ಲಿಗೆ ತರುವರು.