Home Bibles ಕೀರ್ತನೆಗಳು 89:32 · ಕನ್ನಡ ಬೈಬಲ್
ಕೀರ್ತನೆಗಳು 89:32 · ಕನ್ನಡ ಬೈಬಲ್

ಕೋಲಿ ನಿಂದ ಅವರ ದ್ರೋಹವನ್ನೂ ಪೆಟ್ಟುಗಳಿಂದ ಅವರ ಅಕ್ರಮವನ್ನೂ ದಂಡಿಸುವೆನು.

Cross references

ನಿರ್ಗಮಕಾಂಡ 32:34

ಆದರೆ ಈಗ ನೀನು ಹೋರಟು ನಾನು ನಿನಗೆ ಹೇಳಿದ ಸ್ಥಳಕ್ಕೆ ಜನರನ್ನು ಕರೆದುಕೊಂಡು ಹೋಗು; ಇಗೋ, ನನ್ನ ದೂತನು ನಿನ್ನ ಮುಂದೆ ಹೋಗುವನು. ಆದಾಗ್ಯೂ ನಾನು ಶಿಕ್ಷಿಸುವ ದಿನದಲ್ಲಿ ಅವರ ಪಾಪಕ್ಕೆ ತಕ್ಕಂತೆ ಶಿಕ್ಷಿಸುವೆನು.ಹೀಗೆ ಜನರ ಪ್ರೇರಣೆಯಿಂದ ಆರೋನನು ಕರುವನ್ನು ಮಾಡಿದ್ದರಿಂದ ಕರ್ತನು ಜನರನ್ನು ಬಾಧಿಸಿದನು.

2 ಸಮುವೇಲ 7:14

ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು.

1 ಅರಸುಗಳು 9:6

ನೀವಾದರೂ ನಿಮ್ಮ ಮಕ್ಕಳಾದರೂ ನಾನು ನಿಮ್ಮ ಮುಂದೆ ಇಟ್ಟ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ಕೈಕೊಳ್ಳದೆ ನನ್ನ ಕಡೆಯಿಂದ ಹೊರಟುಹೋಗಿ

1 ಅರಸುಗಳು 11:6

ಹೀಗೆಯೇ ಸೊಲೊಮೋನನು ತನ್ನ ತಂದೆಯಾದ ದಾವೀದನ ಹಾಗೆ ಕರ್ತನನ್ನು ಪೂರ್ಣವಾಗಿ ಹಿಂಬಾಲಿಸದೆ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು.

1 ಅರಸುಗಳು 11:14

ಆಗ ಕರ್ತನು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಶತ್ರುವಾಗಿರಲು ಎಬ್ಬಿಸಿದನು.

1 ಅರಸುಗಳು 11:31

ಇದಕ್ಕೆ ಇಸ್ರಾಯೇಲಿನ ದೇವರಾದ ಕರ್ತನು--ಇಗೋ, ನಾನು ಸೊಲೊಮೋನನ ಕೈ ಯಿಂದ ರಾಜ್ಯವನ್ನು ಕಿತ್ತುಕೊಂಡು ಹತ್ತು ಗೋತ್ರ ಗಳನ್ನು ನಿನಗೆ ಕೊಡುವೆನು.

1 ಅರಸುಗಳು 11:39

ಇದಕ್ಕೋಸ್ಕರ ದಾವೀದನ ಸಂತತಿಯನ್ನು ಬಾಧಿಸುವೆನು; ಆದರೆ ನಿರಂತರವಾಗಿ ಅಲ್ಲ ಎಂದು ಹೇಳಿದನು.

ನೆಹೆಮ್ಯ 1:7

ನಾನೂ ನನ್ನ ತಂದೆಯ ಮನೆಯವರೂ ಪಾಪಮಾಡಿದ್ದೇವೆ. ನಿನಗೆ ವಿರೋಧವಾಗಿ ಬಹು ಕೆಟ್ಟತನ ಮಾಡಿದ್ದೇವೆ; ನೀನು ನಿನ್ನ ಸೇವಕನಾದ ಮೋಶೆಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಗಳನ್ನೂ ನಾವು ಕೈಕೊಳ್ಳಲಿಲ್ಲ.

ಯೋಬ 9:34

ಆತನು ತನ್ನ ಕೋಲನ್ನು ನನ್ನ ಮೇಲಿನಿಂದ ತೊಲ ಗಿಸಲಿ, ಆತನ ಭೀತಿ ನನ್ನನ್ನು ಹೆದರಿಸದಿರಲಿ.ಆಗ ಆತನಿಗೆ ಭಯಪಡದೆ ಮಾತನಾಡುವೆನು; ಆದರೆ ಭಯಕ್ಕೆ ನನ್ನಲ್ಲೇನೂ ಆಸ್ಪದವಿಲ್ಲ.

ಸಾಮೇತಿಗಳು 3:11

ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ;

ಆಮೋಸ 3:2

ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ತಿಳಿದಿದ್ದೇನೆ; ಆದದರಿಂದ ನಾನು ನಿಮ್ಮ ಎಲ್ಲಾ ಅಕ್ರಮಗಳಿಗಾಗಿ ಶಿಕ್ಷಿಸುತ್ತೇನೆ.

1 ಕೊರಿಂಥದವರಿಗೆ 11:31

ನಮ್ಮನ್ನು ನಾವೇ ವಿಚಾರಿಸಿ ಕೊಂಡರೆ ನ್ಯಾಯವಿಚಾರಣೆಗೊಳಗಾಗುವದಿಲ್ಲ.

ಹೆಬ್ರಿಯರಿಗೆ 12:6

ಕರ್ತನು ತಾನು ಪ್ರೀತಿಸುವವನನ್ನೇ ಶಿಕ್ಷಿಸು ತ್ತಾನೆ; ತಾನು ಸೇರಿಸಿಕೊಳ್ಳುವ ಪ್ರತಿಯೊಬ್ಬ ಮಗನನ್ನು ಹೊಡೆಯುತ್ತಾನೆ ಎಂಬದು.

Interlinear

Choose Theme