ಆಗ ದರ್ಶನದಲ್ಲಿ ನಿನ್ನ ಪರಿಶುದ್ಧನ ಸಂಗಡ ಮಾತಾಡಿ ಹೇಳಿದ್ದೇನಂದರೆ --ಪರಾಕ್ರಮಶಾಲಿಯ ಮೇಲೆ ಸಹಾಯವನ್ನು ಇಟ್ಟಿ ದ್ದೇನೆ. ಆಯಲ್ಪಟ್ಟವನನ್ನು ಜನರೊಳಗಿಂದ ಉನ್ನತಕ್ಕೇರಿ ಸಿದ್ದೇನೆ.
Cross references
ಕರ್ತನು ಸಮುವೇಲನಿಗೆ--ಇಸ್ರಾಯೇ ಲಿನ ಅರಸನಾಗಿರದ ಹಾಗೆ ನಾನು ತಿರಸ್ಕರಿಸಿದ ಸೌಲನಿಗೋಸ್ಕರ ನೀನು ಎಷ್ಟರ ವರೆಗೆ ದುಃಖವುಳ್ಳವನಾಗಿರುವಿ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ, ಬೇತ್ಲೆಹೇಮಿನ ವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು; ಯಾಕಂದರೆ ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಆದುಕೊಂಡೆನು ಅಂದನು.
ಆಗ ಸೇವಕರಲ್ಲಿ ಒಬ್ಬನು ಅವನಿಗೆ ಪ್ರತ್ಯುತ್ತರವಾಗಿ--ಇಗೋ, ಬಾರಿಸಲು ನಿಪುಣನಾ ದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದೆನು. ಅವನು ಧೈರ್ಯಸ್ಥನೂ ಪರಾಕ್ರಮ ಶಾಲಿಯೂ ರಣಶೂರನಾಗಿಯೂ ಕಾರ್ಯಗಳಲ್ಲಿ ಬುದ್ಧಿವಂತನಾಗಿಯೂ ಚೆಲುವಿಕೆಯುಳ್ಳವನಾಗಿಯೂ ಇದ್ದಾನೆ. ಇದಲ್ಲದೆ ಕರ್ತನು ಅವನ ಸಂಗಡ ಇದ್ದಾನೆ ಅಂದನು.
ಈಗ ನೀನು ನನ್ನ ಸೇವಕನಾದ ದಾವೀದನಿಗೆ--ನೀನು ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗಿರುವಂತೆ ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ನಾನು ಕುರಿಯ ಹಟ್ಟಿಯಿಂದ ತೆಗೆದುಕೊಂಡೆನು;
ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು.
ಆದರೂ ನನ್ನ ಆಜ್ಞೆಗಳನ್ನೂ ಕಟ್ಟಳೆ ಗಳನ್ನೂ ಕೈಕೊಂಡದ್ದರಿಂದ ನಾನು ಆದು ತೆಗೆದು ಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದು ಕೊಳ್ಳದೆ ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು.
ನನ್ನ ಧ್ವನಿಯೆತ್ತಿ ಕರ್ತನಿಗೆ ಮೊರೆಯಿಟ್ಟೆನು; ಆತನು ತನ್ನ ಪರಿಶುದ್ಧ ಪರ್ವತದಿಂದ ನನ್ನ ಮೊರೆಯನ್ನು ಕೇಳಿದನು. ಸೆಲಾ.
ನಿನ್ನ ದೇವರು ಎಲ್ಲಿ ಎಂದು ಅವರು ದಿನವೆಲ್ಲಾ ನನಗೆ ಹೇಳುವ ದರಿಂದ ನನ್ನ ಕಣ್ಣೀರು ನನಗೆ ಹಗಲಿರುಳು ಆಹಾರ ವಾಗಿದೆ.
ನಾನು ಆದು ಕೊಂಡವನೊಂದಿಗೆ ಒಡಂಬಡಿಕೆ ಮಾಡಿದ್ದೇನೆ; ನನ್ನ ಸೇವಕನಾದ ದಾವೀದನಿಗೆ ಆಣೆ ಇಟ್ಟು ಹೇಳಿದ್ದೇ ನಂದರೆ--
ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ಆ ಮಗನು ನಮಗೆ ಕೊಡಲ್ಪಟ್ಟಿದ್ದಾನೆ; ಆಡಳಿತವು ಆತನ ಬಾಹುವಿನ ಮೇಲಿರುವದು; ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂದು ಆತನ ಹೆಸರು ಕರೆಯಲ್ಪಡುವದು.
ನಿನಗೋಸ್ಕರ ದಾರಿಗುರುತುಗಳನ್ನು ನಿಲ್ಲಿಸು; ಎತ್ತರವಾದ ಗುಡ್ಡಗಳನ್ನು ಇರಿಸು; ಹೆದ್ದಾರಿಯ ಕಡೆಗೆ ನೀನು ಹೋದದಾರಿಗೆ ನಿನ್ನ ಹೃದಯವನ್ನು ಇಟ್ಟುಕೋ; ಇಸ್ರಾಯೇಲಿನ ಕನ್ಯಾಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.
ಅವನು--ನಮ್ಮನ್ನು ಬಿಟ್ಟುಬಿಡು; ನಜರೇತಿನ ಯೇಸುವೇ, ನಮ್ಮಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡುವದಕ್ಕಾಗಿ ನೀನು ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು; ನೀನು ದೇವರ ಪರಿಶುದ್ಧನೇ ಎಂದು ಕೂಗಿ ಹೇಳಿದನು.
ಲೋಕಾದಿಯಿಂದ ಆತನು ತನ್ನ ಪರಿಶುದ್ಧ ಪ್ರವಾದಿಗಳ ಬಾಯಿಂದ ಮಾತನಾಡಿದ ಪ್ರಕಾರ
ಆತನು ದೇವಸ್ವರೂಪ ನಾಗಿದ್ದರೂ ದೇವರಿಗೆ ಸರಿಸಮಾನನಾಗಿರುವೆನೆಂದಿಣಿ ಸದೆ
ಆದರೂ ದೂತರಿಗಿಂತ ಸ್ವಲ್ಪ ಕಡಿಮೆಯಾಗಿ ಮಾಡಲ್ಪಟ್ಟ ಒಬ್ಬಾತನು ಅಂದರೆ ಯೇಸುವು, ಪ್ರಭಾವವನ್ನೂ ಮಾನವನ್ನೂ ಕಿರೀಟವಾಗಿ ಹೊಂದಿರುವದನ್ನು ನಾವು ನೋಡುತ್ತೇವೆ; ಆತನು ಮೃತಪಟ್ಟದ್ದರಿಂದಲೇ ಮಾನ ಪ್ರಭಾವಗಳನ್ನು ಹೊಂದಿದನು; ಆತನು ದೇವರ ಕೃಪೆ ಯಿಂದ ಎಲ್ಲರಿಗೋಸ್ಕರ ಮರ
ಯಾಕಂದರೆ ಹಿಂದಿನ ಕಾಲದಲ್ಲಿ ಯಾವ ಪ್ರವಾದನೆಯೂ ಮನುಷ್ಯನ ಚಿತ್ತದಿಂದ ಬರಲಿಲ್ಲ; ಪರಿಶುದ್ಧರಾದ ದೇವಜನರು ಪವಿತ್ರಾತ್ಮ ಪ್ರೇರಿತರಾಗಿ ಮಾತನಾಡಿದರು.
ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ಅಪೊಸ್ತಲರಾದ ನಮ್ಮ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕ ಮಾಡಿಕೊಳ್ಳಬೇಕು.
ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ: ಪರಿಶುದ್ಧನೂ ಸತ್ಯವಂತನೂ ದಾವೀದನ ಬೀಗದ ಕೈಯುಳ್ಳವನೂ ಯಾರೂ ಮುಚ್ಚಕೂಡದಂತೆ ತೆರೆಯು ವಾತನೂ ಯಾರು ತೆರೆಯದಂತೆ ಮುಚ್ಚುವಾತನೂ ಆಗಿರುವವನು ಹೇಳುವಂಥವುಗಳೇನಂದರೆ,