ಬಿಡದೆ ಹರಿಯುವ ನೀರಿನಂತೆ ಅವರು ಕರಗಿ ಹೋಗಲಿ; ಅವನು ತನ್ನ ಬಾಣಗಳನ್ನು ಗುರಿಯಿಟ್ಟಾಗ ಅವರು ಕಡಿಯಲ್ಪಟ್ಟ ತುಂಡುಗಳಂತಿರಲಿ.
Cross references
ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು.
ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.
ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.
ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು.
ಸಿಂಹದ ಘರ್ಜನೆಯೂ ಕ್ರೂರಸಿಂಹದ ಶಬ್ದವೂ ಸಿಂಹದ ಮರಿ ಗಳ ಹಲ್ಲುಗಳೂ ಮುರಿಯಲ್ಪಟ್ಟಿವೆ.
ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.
ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.
ಅವರು ತಮ್ಮ ನಾಲಿಗೆಯನ್ನು ಕತ್ತಿಯ ಹಾಗೆ ಮಸೆಯುತ್ತಾರೆ. ಕಹಿ ಮಾತುಗಳೆಂಬ ಬಾಣಗಳನ್ನು ಹೂಡುತ್ತಾರೆ.
ದೇವರು ಅವರ ಕಡೆಗೆ ಬಾಣವನ್ನು ಎಸೆಯು ವಾಗ ಫಕ್ಕನೆ ಅವರಿಗೆ ಗಾಯಗಳಾಗುವವು.
ದುಷ್ಟನು ನೋಡಿ ದುಃಖಪಡುವನು; ತನ್ನ ಹಲ್ಲು ಗಳನ್ನು ಕಡಿದು ಕರಗಿಹೋಗುವನು; ದುಷ್ಟರ ಆಶೆಯು ನಾಶವಾಗುವದು.
ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು.