Home Bibles ಯೋಬ 4:10 · ಕನ್ನಡ ಬೈಬಲ್
ಯೋಬ 4:10 · ಕನ್ನಡ ಬೈಬಲ್

ಸಿಂಹದ ಘರ್ಜನೆಯೂ ಕ್ರೂರಸಿಂಹದ ಶಬ್ದವೂ ಸಿಂಹದ ಮರಿ ಗಳ ಹಲ್ಲುಗಳೂ ಮುರಿಯಲ್ಪಟ್ಟಿವೆ.

Cross references

ಯೋಬ 5:15

ಆತನು ಕತ್ತಿಯಿಂದಲೂ ಅದರ ಬಾಯಿಂದಲೂ ಬಲಿಷ್ಠನ ಕೈಯೊಳಗಿಂದಲೂ ಬಡವ ನನ್ನು ರಕ್ಷಿಸುತ್ತಾನೆ.

ಯೋಬ 29:17

ದುಷ್ಟರ ದವಡೆಗಳನ್ನು ಮುರಿ ದೆನು; ಅವನ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ತೆಗೆದೆನು.

ಕೀರ್ತನೆಗಳು 3:7

ಓ ಕರ್ತನೇ, ಏಳು; ಓ ನನ್ನ ದೇವರೇ, ನನ್ನನ್ನು ರಕ್ಷಿಸು. ನೀನು ನನ್ನ ಶತ್ರುಗಳೆಲ್ಲರ ದವಡೆಯ ಮೇಲೆ ಹೊಡೆದು ಭಕ್ತಿಹೀನರ ಹಲ್ಲುಗಳನ್ನು ಮುರಿದಿದ್ದೀ.ರಕ್ಷಣೆಯು ಕರ್ತನದೇ; ನಿನ್ನ ಜನರ ಮೇಲೆ ನಿನ್ನ ಆಶೀರ್ವಾದ ಉಂಟು. ಸೆಲಾ.

ಕೀರ್ತನೆಗಳು 57:4

ನನ್ನ ಪ್ರಾಣವು ಸಿಂಹಗಳ ಮಧ್ಯದಲ್ಲಿದೆ; ಬೆಂಕಿಯಂತೆ ಉರಿಯುವ ಮನುಷ್ಯರ ಮಧ್ಯದಲ್ಲಿ ಬಿದ್ದಿದ್ದೇನೆ. ಅವರ ಹಲ್ಲುಗಳು ಭಲ್ಲೆಬಾಣಗಳೂ; ಅವರ ನಾಲಿಗೆ ಹದವಾದ ಕತ್ತಿ.

ಕೀರ್ತನೆಗಳು 58:6

ಓ ದೇವರೇ, ಅವರ ಬಾಯಿ ಯಲ್ಲಿರುವ ಹಲ್ಲುಗಳನ್ನು ಮುರಿದುಬಿಡು; ಓ ಕರ್ತನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಒಡೆದು ಬಿಡು;

ಕೀರ್ತನೆಗಳು 58:7

ಬಿಡದೆ ಹರಿಯುವ ನೀರಿನಂತೆ ಅವರು ಕರಗಿ ಹೋಗಲಿ; ಅವನು ತನ್ನ ಬಾಣಗಳನ್ನು ಗುರಿಯಿಟ್ಟಾಗ ಅವರು ಕಡಿಯಲ್ಪಟ್ಟ ತುಂಡುಗಳಂತಿರಲಿ.

ಸಾಮೇತಿಗಳು 30:14

ಭೂಮಿಯೊಳಗಿಂದ ಬಡವರನ್ನೂ ಮನುಷ್ಯ ರೊಳಗಿಂದ ದಿಕ್ಕಿಲ್ಲದವರನ್ನೂ ನುಂಗುವಂತೆ ತಮ್ಮ ಹಲ್ಲುಗಳು ಖಡ್ಗಗಳಂತೆಯೂ ತಮ್ಮ ದವಡೆಯ ಹಲ್ಲು ಗಳು ಕತ್ತಿಗಳಂತೆಯೂ ಇರುವ ಒಂದು ವಂಶಾವಳಿಯು ಇದೆ.

Interlinear

Choose Theme