Home Bibles ಯೆಹೋಶುವ 7:5 · ಕನ್ನಡ ಬೈಬಲ್
ಯೆಹೋಶುವ 7:5 · ಕನ್ನಡ ಬೈಬಲ್

ಆಯಿ ಮನುಷ್ಯರು ಇವರಲ್ಲಿ ಹೆಚ್ಚು ಕಡಿಮೆ ಮೂವತ್ತಾರು ಮಂದಿಯನ್ನು ಹೊಡೆದು ಹಾಕಿದರು. ಬಾಗಲಿನಿಂದ ಪ್ರಾರಂಭಿಸಿ ಷೆಬಾರಿಮಿನ ವರೆಗೂ ಅವರನ್ನು ಹಿಂದಟ್ಟಿ ಇಳಿದು ಹೋಗುವ ವರೆಗೂ ಅವರನ್ನು ಹೊಡೆದರು. ಆದದ ರಿಂದ ಜನರ ಹೃದಯವು ಕರಗಿ ನೀರಿನಂತಾಯಿತು.

Cross references

ಲೇವ್ಯಕಾಂಡ 26:36

ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು.

ದ್ವಿತೀಯೋಪದೇಶಕಾಂಡ 1:44

ಆಗ ಆ ಬೆಟ್ಟ ದಲ್ಲಿ ವಾಸಮಾಡುವ ಅಮೋರಿಯರು ನಿಮ್ಮೆದುರಿಗೆ ಹೊರಟು ಜೇನು ಹುಳಗಳು ಮುತ್ತಿಕೊಂಡಂತೆ ನಿಮ್ಮ ಬೆನ್ನುಹತ್ತಿ ಸೇಯಾರಿನಲ್ಲಿ ಹೊರ್ಮದ ಪರ್ಯಂತರ ನಿಮ್ಮನ್ನು ಸಂಹಾರಮಾಡಿದರು.

ಯೆಹೋಶುವ 2:9

ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.

ಯೆಹೋಶುವ 2:11

ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ.

ಯೆಹೋಶುವ 5:1

ಇದಾದ ಮೇಲೆ ಇಸ್ರಾಯೇಲ್‌ ಮಕ್ಕಳು ದಾಟಿಹೋಗುವ ಪರಿಯಂತರ ಕರ್ತನು ಅವರ ಮುಂದೆ ಯೊರ್ದನನ್ನು ಒಣಗಿಹೋಗ ಮಾಡಿ ದ್ದನ್ನು ಆಚೇ ದಡದ ಪಶ್ಚಿಮದಲ್ಲಿ ವಾಸಿಸಿದ್ದ ಅಮೋರಿ ಯರ ಸಕಲ ಅರಸುಗಳೂ ಸಮುದ್ರದ ಆಚೆಯಲ್ಲಿ ವಾಸಿಸಿದ ಕಾನಾನ್ಯರ ಸಕಲ ಅರಸುಗಳೂ ಕೇಳಿದಾಗ ಅವರ ಹೃದಯವು ಕರಗಿಹೋಯಿತು. ಇಸ್ರಾಯೇಲ್‌ ಮಕ್ಕಳ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.

ಕೀರ್ತನೆಗಳು 22:14

ನಾನು ನೀರಿನ ಹಾಗೆ ಹೊಯ್ಯಲ್ಪಟ್ಟಿದ್ದೇನೆ; ನನ್ನ ಎಲುಬುಗಳೆಲ್ಲಾ ಕೀಲು ತಪ್ಪಿವೆ; ನನ್ನ ಹೃದ ಯವು ಮೇಣದ ಹಾಗೆ ನನ್ನ ಕರುಳುಗಳ ಮಧ್ಯದಲ್ಲಿ ಕರಗಿಹೋಗಿದೆ.

ಯೆಶಾಯ 13:7

ಆದ ಕಾರಣ ಎಲ್ಲಾ ಕೈಗಳು ಜೋಲು ಬೀಳುವವು ಪ್ರತಿ ಯೊಬ್ಬನ ಹೃದಯವು ಕರಗುವದು.

ಯೆಹೆಜ್ಕೇಲ 21:7

ನೀನು ಯಾಕೆ ನಿಟ್ಟುಸಿರಿಡುತ್ತೀ ಎಂದು ಅವರು ನಿನಗೆ ಕೇಳಿದಾಗ ನೀನು ಹೇಳಬೇಕಾದದ್ದೇನಂದರೆ -- ಆ ಸುದ್ದಿಯ ನಿಮಿತ್ತವೇ ಅದು ಬರುವದು; ಯಾಕಂದರೆ ಆಗ ಹೃದಯಗಳೆಲ್ಲಾ ಕರಗುವವು; ಕೈಗಳೆಲ್ಲಾ ನಿತ್ರಾಣ ವಾಗುವವು, ಪ್ರತಿಯೊಂದು ಆತ್ಮವು ಕುಂದಿ ಹೋಗು ವದು, ಮತ್ತು ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣಗೊಳ್ಳುವವು; ಇಗೋ, ಅದು ಬರುತ್ತದೆ, ತರಲ್ಪಡುತ್ತದೆ ಎಂದು ದೇವರಾದ ಕರ್ತನು ಹೇಳುತ್ತಾನೆ.

ನಹೂಮ 2:10

ಅದು ಬರಿದಾಗಿಯೂ, ಬೈಲಾಗಿಯೂ, ಹಾಳಾ ಗಿಯೂ ಇತ್ತು; ಹೃದಯ ಕರಗುತ್ತದೆ; ಮೊಣಕಾಲುಗಳು ಒಟ್ಟಾಗಿ ಬಡಿದುಕೊಳ್ಳುತ್ತವೆ. ಎಲ್ಲಾ ನಡುವುಗಳಲ್ಲಿ ಹೆಚ್ಚು ಸಂಕಟ ಉಂಟು; ಎಲ್ಲಾ ಮುಖಗಳು ಕಳೆ ಗುಂದುತ್ತವೆ.

Interlinear

Choose Theme