Home Bibles ಕೀರ್ತನೆಗಳು 21:9 · ಕನ್ನಡ ಬೈಬಲ್
ಕೀರ್ತನೆಗಳು 21:9 · ಕನ್ನಡ ಬೈಬಲ್

ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.

Cross references

ಆದಿಕಾಂಡ 19:28

ಸೊದೋಮ್‌ ಗೊಮೋರಗಳ ಕಡೆಗೂ ಮೈದಾನದ ಎಲ್ಲಾ ಪ್ರದೇಶ ಗಳ ಕಡೆಗೂ ನೋಡಿದನು. ಆಗ ಇಗೋ, ಆ ದೇಶದ ಹೊಗೆಯು ಆವಿಗೆಯ ಹೊಗೆಯ ಹಾಗೆ ಏರಿತು.

ದ್ವಿತೀಯೋಪದೇಶಕಾಂಡ 32:22

ನನ್ನ ಕೋಪದಲ್ಲಿ ಬೆಂಕಿಹತ್ತಿತು; ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ ಅದರ ಫಲವನ್ನೂ ತಿಂದುಬಿಟ್ಟು ಬೆಟ್ಟಗಳ ಅಸ್ತಿವಾರವನ್ನು ದಹಿಸುವದು.

ಎಜ್ರಾ 6:12

ಇದಲ್ಲದೆ ತನ್ನ ನಾಮವನ್ನು ಇರಿಸಲು ಮಾಡಿದ ದೇವರು ಯೆರೂಸಲೇಮಿನಲ್ಲಿರುವ ದೇವರ ಈ ಆಲಯವನ್ನು ಬದಲು ಮಾಡುವದಕ್ಕೂ ಕೆಡಿಸು ವದಕ್ಕೂ ತಮ್ಮ ಕೈಯನ್ನು ಚಾಚುವ ಎಲ್ಲಾ ಅರಸುಗ ಳನ್ನೂ ಜನರನ್ನೂ ಆತನು ಕೆಡಿಸಲಿ. ದಾರ್ಯಾ ವೆಷನಾದ ನಾನು ಅಪ್ಪಣೆಕೊಟ್ಟಿದ್ದೇನೆ; ಅದು ತ್ವರೆ ಯಾಗಿ ಮಾಡಲ್ಪಡಲಿ ಎಂಬದು.

ಯೋಬ 6:3

ಈಗಲೇ ಸಮುದ್ರದ ಮರಳಿಗಿಂತ ಅದು ಭಾರವಾಗಿದೆ; ಆದ ದರಿಂದ ನನ್ನ ಮಾತುಗಳು ನುಂಗಲ್ಪಟ್ಟವು.

ಕೀರ್ತನೆಗಳು 2:5

ಆಗ ಆತನು ತನ್ನ ಕೋಪದಿಂದ ಅವರ ಸಂಗಡ ಮಾತನಾಡುವನು; ತನ್ನ ಕೋಪಾವೇಶದಿಂದ ಅವ ರನ್ನು ಕಳವಳಪಡಿಸುವನು.

ಕೀರ್ತನೆಗಳು 2:12

ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು.

ಕೀರ್ತನೆಗಳು 18:8

ಆತನ ಮೂಗಿನಿಂದ ಹೊಗೆ ಎದ್ದು ಆತನ ಬಾಯಿಯೊಳಗಿಂದ ಬೆಂಕಿ ದಹಿಸಿತು; ಕೆಂಡಗಳು ಅದರಿಂದ ಉರಿದವು.

ಕೀರ್ತನೆಗಳು 18:38

ಅವರು ಏಳಲಾರದ ಹಾಗೆ ಅವ ರಿಗೆ ಗಾಯ ಮಾಡಿದೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದಿದ್ದಾರೆ.

ಕೀರ್ತನೆಗಳು 50:3

ನಮ್ಮ ದೇವರು ಬರುತ್ತಾನೆ, ಮೌನವಾಗಿರನು; ಬೆಂಕಿಯು ಆತನ ಮುಂದೆ ದಹಿಸುವದು; ಅದು ಆತನ ಸುತ್ತಲು ದೊಡ್ಡ ಬಿರುಗಾಳಿಯಂತಿರುವದು.

ಕೀರ್ತನೆಗಳು 56:1

ಓ ದೇವರೇ, ನನ್ನನ್ನು ಕರುಣಿಸು; ಮನುಷ್ಯನು ನನ್ನನ್ನು ನುಂಗಬೇಕೆಂದಿದ್ದಾನೆ; ದಿನವೆಲ್ಲಾ ಯುದ್ಧಮಾಡುತ್ತಾ ನನ್ನನ್ನು ಬಾಧಿಸುತ್ತಾನೆ.

ಕೀರ್ತನೆಗಳು 106:17

ಭೂಮಿಯು ಬಾಯಿತೆರೆದು ದಾತಾನನನ್ನು ನುಂಗಿ ಅಬಿರಾಮನ ಗುಂಪನ್ನು ಮುಚ್ಚಿ ಬಿಟ್ಟಿತು.

ಯೆಶಾಯ 26:11

ಕರ್ತನೇ, ನಿನ್ನ ಕೈ ಎತ್ತಿರಲು ಅವರು ನೋಡುವದಿಲ್ಲ, ಆದರೆ ಅವರು ನೋಡಿ ನಿನ್ನ ಜನರಿಗೋಸ್ಕರ ಹೊಟ್ಟೆಕಿಚ್ಚು ಪಟ್ಟದ್ದಕ್ಕೆ ನಾಚಿಕೆ ಪಡುವರು. ಹೌದು, ನಿನ್ನ ವಿರೋಧಿಗಳನ್ನು ಅಗ್ನಿಯು ದಹಿಸಿಬಿಡುವದು.

ವಿಲಾಪಗಳು 2:2

ಕರ್ತನು ಯಾಕೋಬಿನ ಎಲ್ಲಾ ನಿವಾಸಿಗಳನ್ನು ಕನಿಕರಿಸದೆ ನುಂಗಿದ್ದಾನೆ; ಯೆಹೂದದ ಮಗಳ ಭದ್ರವಾದ ಸ್ಥಾನಗಳನ್ನು ತನ್ನ ರೋಷದಲ್ಲಿ ಕೆಡವಿಹಾಕಿ ದ್ದಾನೆ; ಆತನು ಅವುಗಳನ್ನು ನೆಲ ಸಮ ಮಾಡಿದ್ದಾನೆ; ಆತನು ರಾಜ್ಯವನ್ನೂ ಪ್ರಭುಗಳನ್ನೂ ಅಪವಿತ್ರ ಮಾಡಿದ್ದಾನೆ.

ದಾನಿಯೇಲ 3:20

ತನ್ನ ಸೈನ್ಯದಲ್ಲಿರುವ ಅತ್ಯಂತ ಬಲಿಷ್ಠರಾ ದವರು ಶದ್ರಕ್‌, ಮೇಷಕ್‌, ಅಬೇದ್ನೆಗೋ ಎಂಬವರನ್ನು ಕಟ್ಟಿ, ಉರಿಯುವ ಬೆಂಕಿಯ ಆವಿಗೆಯಲ್ಲಿ ಹಾಕಬೇಕೆಂದು ಆಜ್ಞಾಪಿಸಿದನು.

ನಹೂಮ 1:6

ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.

ಮಲಾಕಿ 4:1

ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಮತ್ತಾಯ 3:10

ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು.

ಮತ್ತಾಯ 3:12

ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು.

ಮತ್ತಾಯ 13:42

ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು.

ಮತ್ತಾಯ 13:50

ಮತ್ತು ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು; ಅಲ್ಲಿ ಗೋಳಾಟವೂ ಹಲ್ಲುಕಡಿಯೋಣವೂ ಇರುವವು ಎಂದು ಹೇಳಿದನು.

ಮತ್ತಾಯ 22:7

ಆದರೆ ಅರಸನು ಅದನ್ನು ಕೇಳಿ ಕೋಪೋದ್ರೇಕವುಳ್ಳವನಾಗಿ ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹ ರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

ಮತ್ತಾಯ 25:41

ಆತನು ಎಡಗಡೆ ಯಲ್ಲಿರುವವರಿಗೆ--ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧ ಮಾಡಲ್ಪಟ್ಟ ನಿತ್ಯ ಬೆಂಕಿಯೊಳಗೆ ಹೋಗಿರಿ.

ಮತ್ತಾಯ 25:46

ಇವರು ನಿತ್ಯವಾದ ಶಿಕ್ಷೆಗೆ ಹೋಗುವರು; ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು.

1 ತೆಸಲೋನಿಕದವರಿಗೆ 2:16

ಅನ್ಯ ಜನರಿಗೆ ರಕ್ಷಣೆಯಾಗುವಂತೆ ಸುವಾರ್ತೆಯನ್ನು ಹೇಳುವ ನಮಗೆ ಅವರು ಅಡ್ಡಿ ಮಾಡುತ್ತಾರೆ; ಹೀಗೆ ತಮ್ಮ ಪಾಪಗಳನ್ನು ಯಾವಾಗಲೂ ಪರಿಪೂರ್ಣ ಮಾಡುವದಕ್ಕೆ ಹೋಗುತ್ತಾರೆ; ಆದರೆ ದೇವರ ಕೋಪವು ಅವರ ಮೇಲೆ ಸಂಪೂರ್ಣವಾಗುತ್ತಾ ಬಂತು.

2 ತೆಸಲೋನಿಕದವರಿಗೆ 1:8

ಆತನು (ಕರ್ತನಾದ ಯೇಸು) ದೇವರನ್ನರಿಯ ದವರಿಗೆ ಮತ್ತು ಕರ್ತನಾದ ಯೇಸು ಕ್ರಿಸ್ತನ ಸುವಾರ್ತೆಗೆ ವಿಧೇಯರಾಗದವರಿಗೆ ಉರಿಯುವ ಬೆಂಕಿಯ ಮೂಲಕ ಪ್ರತೀಕಾರ ಮಾಡುವದೂ ದೇವರಿಗೆ ನ್ಯಾಯವಾಗಿದೆ;

ಪ್ರಕಟನೆ 6:16

ಪರ್ವತಗಳಿಗೂ ಬಂಡೆಗಳಿಗೂ--ನಮ್ಮ ಮೇಲೆ ಬೀಳಿರಿ, ಸಿಂಹಾಸನದ ಮೇಲೆ ಕೂತಿದ್ದಾತನ ಮುಖಕ್ಕೂ ಕುರಿಮರಿಯಾದಾತನ ಕೋಪಕ್ಕೂ ನಮ್ಮನ್ನು ಮರೆಮಾಡಿರಿ;ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.

ಪ್ರಕಟನೆ 19:15

ಜನಾಂಗಗಳನ್ನು ಹೊಡೆಯುವದಕ್ಕಾಗಿ ಹದವಾದ ಕತ್ತಿಯು ಆತನ ಬಾಯಿಂದ ಹೊರಡುತ್ತದೆ. ಆತನು ಅವರನ್ನು ಕಬ್ಬಿಣದ ಕೋಲಿನಿಂದ ಆಳುವನು. ಆತನು ಸರ್ವಶಕ್ತನಾದ ದೇವರ ಉಗ್ರಕೋಪವೆಂಬ ದ್ರಾಕ್ಷೆಯ ತೊಟ್ಟಿಯಲ್ಲಿರುವದನ್ನು ತುಳಿಯುತ್ತಾನೆ.

ಪ್ರಕಟನೆ 20:14

ಆಮೇಲೆ ಮೃತ್ಯುವೂ ನರಕವೂ ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟವು; ಇದೇ ಎರಡನೆಯ ಮರಣವು.ಯಾವನ ಹೆಸರು ಜೀವಗ್ರಂಥದಲ್ಲಿ ಬರೆದದ್ದಾಗಿ ಕಾಣಲಿಲ್ಲವೋ ಅವನು ಬೆಂಕಿಯ ಕೆರೆಗೆ ದೊಬ್ಬಲ್ಪಟ್ಟನು.

Interlinear

Choose Theme