ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
Cross references
ನನ್ನ ಕೋಪದಲ್ಲಿ ಬೆಂಕಿಹತ್ತಿತು; ಅದು ಕೆಳಗಿನ ಪಾತಾಳದ ಮಟ್ಟಿಗೂ ಉರಿದು ಭೂಮಿಯನ್ನೂ ಅದರ ಫಲವನ್ನೂ ತಿಂದುಬಿಟ್ಟು ಬೆಟ್ಟಗಳ ಅಸ್ತಿವಾರವನ್ನು ದಹಿಸುವದು.
ಆಗ ಆತನು--ನೀನು ಹೊರಗೆ ಬಂದು ಬೆಟ್ಟದ ಮೇಲೆ ಕರ್ತನ ಮುಂದೆ ನಿಲ್ಲು ಅಂದನು. ಇಗೋ, ಕರ್ತನು ಹಾದುಹೋದನು; ಕರ್ತನ ಮುಂದೆ ಬೆಟ್ಟಗಳನ್ನು ಭೇದಿಸುವಂಥ, ಗುಡ್ಡ ಗಳನ್ನು ಒಡೆಯುವಂಥ ಮಹಾ ಬಲವಾದ ಗಾಳಿ; ಆ ಗಾಳಿಯಲ್ಲಿ ಕರ್ತನು ಇರಲಿಲ್ಲ. ಗಾಳಿಯ ತರು ವಾಯ ಭೂಕಂಪವು; ಆ ಭೂಕಂಪದಲ್ಲಿ ಕರ್ತನು ಇರಲಿಲ್ಲ.
ಪರ್ವತಗಳನ್ನು ಅವು ಗಳಿಗೆ ತಿಳಿಯದ ಹಾಗೆ ನೂಕುತ್ತಾನೆ; ತನ್ನ ಸಿಟ್ಟಿನಲ್ಲಿ ಅವುಗಳನ್ನು ತಿರುಗಿಸುತ್ತಾನೆ.
ಆಕಾಶದ ಸ್ತಂಭಗಳು ಅಲ್ಲಾಡು ತ್ತವೆ; ಆತನ ಗದರಿಕೆಗೆ ಆಶ್ಚರ್ಯಪಡುತ್ತವೆ.
ಆತನ ಕೋಪವು ಉರಿ ಯುವದಕ್ಕೆ ಮುಂಚೆಯೇ ಮಗನಿಗೆ ಮುದ್ದಿಡಿರಿ; ಇಲ್ಲ ವಾದರೆ ಆತನ ಕೋಪದಿಂದ ನೀವು ದಾರಿಯಲ್ಲೇ ನಾಶವಾದೀರಿ. ಆತನಲ್ಲಿ ಭರವಸವಿಟ್ಟವರೆಲ್ಲರೂ ಧನ್ಯರು.
ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು?
ಆಕಾಶದಿಂದ ನ್ಯಾಯತೀರ್ವಿಕೆಯನ್ನು ಕೇಳಮಾಡಿದಿ.
ನಿನ್ನ ಕೋಪದ ಬಲವನ್ನು ತಿಳಿದ ವನಾರು? ನಿನ್ನ ಭಯದ ಪ್ರಕಾರವೇ ನಿನ್ನ ಉಗ್ರತೆ ಇದೆ.
ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು.
ಆದದರಿಂದ ಸೈನ್ಯಗಳ ಕರ್ತನ ಉಗ್ರದಲ್ಲಿಯೂ ಆತನ ಕೋಪೋದ್ರೇಕದ ದಿನ ದಲ್ಲಿಯೂ ನಾನು ಆಕಾಶಗಳನ್ನು ನಡುಗಿಸುವೆನು, ಭೂಮಿಯನ್ನು ಅದರ ಸ್ಥಳದಿಂದ ತೆಗೆದುಬಿಡುವೆನು.
ರೌದ್ರವು ನನ್ನಲ್ಲಿ ಇಲ್ಲ; ಯಾವನಾದರೂ ಮುಳ್ಳು ದತ್ತೂರಿಗಳನ್ನು ನನಗೆ ವಿರೋಧವಾಗಿ ಯುದ್ಧಕ್ಕೆ ಇಟ್ಟರೆ ನಾನು ಅವುಗಳನ್ನು ಹಾದು ಹೋಗಿ ಅವುಗಳನ್ನು ಒಟ್ಟಿಗೆ ಸುಡುವೆನು.
ಚೀಯೋನಿನಲ್ಲಿರುವ ಪಾಪಿಗಳು ಹೆದರುತ್ತಾರೆ. ಭಯವು ಕಪಟಿಗಳನ್ನು ಆಶ್ಚರ್ಯಕ್ಕೊಳಗಾಗಿ--ನಮ್ಮಲ್ಲಿ ಯಾರು ನುಂಗುವ ಅಗ್ನಿಯ ಸಂಗಡ ವಾಸಿಸಬಲ್ಲರು? ನಮ್ಮಲ್ಲಿ ಯಾರು ಸದಾ ಉರಿಯುವ ಜ್ವಾಲೆಗಳೊಡನೆ ತಂಗಿಯಾರು ಅಂದುಕೊಳ್ಳುವರು.
ನನ್ನ ಮಾತುಗಳನ್ನು ಕೇಳಲೊಲ್ಲದಿದ್ದ ತಮ್ಮ ಪಿತೃಗಳ ಅಕ್ರಮ ಗಳಿಗೆ ತಿರುಗಿಕೊಂಡಿದ್ದಾರೆ; ಬೇರೆ ದೇವರುಗಳನ್ನು ಸೇವಿಸುವದಕ್ಕೆ ಅವುಗಳ ಹಿಂದೆ ಹೋಗಿದ್ದಾರೆ; ನಾನು ಅವರ ತಂದೆಗಳ ಸಂಗಡ ಮಾಡಿದ ಒಡಂಬಡಿಕೆಯನ್ನು ಇಸ್ರಾಯೇಲಿನ ಮನೆತನದವರೂ ಯೆಹೂದದ ಮನೆ ತನದವರೂ ವಿಾರಿದ್ದಾರೆ.
ಆತನು ತನ್ನ ತೀಕ್ಷ್ಣ ಕೋಪದಲ್ಲಿ ಇಸ್ರಾಯೇಲಿನ ಕೊಂಬುಗಳನ್ನೆಲ್ಲಾ ಕಡಿದು ಹಾಕಿದ್ದಾನೆ. ಆತನು ಶತ್ರುವಿನ ಎದುರಿನಿಂದ ತನ್ನ ಬಲಗೈಯನ್ನು ಹಿಂತೆಗೆದುಕೊಂಡಿದ್ದಾನೆ. ಆತನು ಸುತ್ತಲೂ ಪ್ರಜ್ವಲಿಸಿ ದಹಿಸುವ ಬೆಂಕಿಯ ಹಾಗೆ ಯಾಕೋಬನಿಗೆ ವಿರುದ್ಧ ವಾಗಿ ದಹಿಸಿಬಿಟ್ಟಿದ್ದಾನೆ.
ಆತನು ಶತ್ರುವಿನ ಹಾಗೆ ತನ್ನ ಬಿಲ್ಲನ್ನು ಬೊಗ್ಗಿಸಿದ್ದಾನೆ, ವೈರಿಯ ಹಾಗೆ ತನ್ನ ಬಲಗೈ ಎತ್ತಿ ನಿಂತುಕೊಂಡು ಕಣ್ಣಿಗೆ ರಮ್ಯವಾಗಿ ಕಾಣುವ ಎಲ್ಲವುಗಳನ್ನು ಕೊಂದುಹಾಕಿದ್ದಾನೆ. ಆತನು ತನ್ನ ರೋಷವೆಂಬ ಅಗ್ನಿಯನ್ನು ಚೀಯೋನ್ ಮಗಳ ಗುಡಾರದಲ್ಲಿ ಸುರಿದಿದ್ದಾನೆ.
ಕರ್ತನು ತನ್ನ ರೋಷವನ್ನು ತೀರಿಸಿ ದ್ದಾನೆ; ಆತನು ತನ್ನ ಉಗ್ರವಾದ ಕೋಪವನ್ನು ಸುರಿದಿದ್ದಾನೆ; ಚೀಯೋನಿನಲ್ಲಿ ಹೊತ್ತಿಸಿದ ಬೆಂಕಿಯು ಅದರ ಅಸ್ತಿವಾರಗಳನ್ನು ತಿಂದುಬಿಟ್ಟಿತು.
ನಾನು ಐಗುಪ್ತಕ್ಕೆ ಕಿಚ್ಚನ್ನು ಹೆಚ್ಚಿಸಲು ಸೀನ್ ಪ್ರಾಣಸಂಕಟಪಡುವದು, ನೋಪುರವು ಭಾಗಭಾಗ ವಾಗಿ ಸೀಳಲ್ಪಡುವದು, ನೋಫಿನ ಮೇಲೆ ಪ್ರತಿ ದಿನವೂ ಇಕ್ಕಟ್ಟು ಇರುವದು.
ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
ಆದರೆ ಆತನ ಬರುವಿಕೆಯ ದಿವಸದಲ್ಲಿ ಯಾರು ಉಳಿದಾರು? ಆತನು ಪ್ರತ್ಯಕ್ಷವಾಗುವಾಗ ಯಾರು ನಿಲ್ಲುವರು? ಆತನು ಅಕ್ಕಸಾಲಿಗನ ಬೆಂಕಿಯ ಹಾಗೆಯೂ ಅಗಸನ ಚೌಳಿನ ಹಾಗೆಯೂ ಇದ್ದಾನೆ.
ಆತನ ಕೋಪದ ಮಹಾದಿನ ಬಂದದೆ; ಅದರ ಮುಂದೆ ನಿಲ್ಲುವದಕ್ಕೆ ಯಾರು ಶಕ್ತರು ಎಂದು ಹೇಳಿದರು.
ಆಗ ಆಲಯದಿಂದ ಬಂದ ಮಹಾಶಬ್ದ ವನ್ನು ಕೇಳಿದೆನು. ಅದು ಆ ಏಳು ಮಂದಿ ದೂತರಿಗೆ--ನೀವು ಹೋಗಿ ಆ ಪಾತ್ರೆಗಳ ಲ್ಲಿರುವ ದೇವರ ರೌದ್ರವನ್ನು ಭೂಮಿಯ ಮೇಲೆ ಹೊಯ್ಯಿರಿ ಎಂದು ಹೇಳಿತು.
ನಾಲ್ಕನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ಸೂರ್ಯನ ಮೇಲೆ ಹೊಯಿದನು. ಆಗ ಸೂರ್ಯ ನಿಗೆ ಬೆಂಕಿಯಿಂದ ಮನುಷ್ಯರನ್ನು ಕಂದಿಸುವ ಶಕ್ತಿಯು ಕೊಡಲ್ಪಟ್ಟಿತು.