Home Bibles ಮತ್ತಾಯ 3:10 · ಕನ್ನಡ ಬೈಬಲ್
ಮತ್ತಾಯ 3:10 · ಕನ್ನಡ ಬೈಬಲ್

ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು.

Cross references

2 ಸಮುವೇಲ 23:7

ಅವರು ಕೈಯಿಂದ ತೆಗೆಯಲ್ಪಡುವ ವರಲ್ಲ; ಅವರನ್ನು ಮುಟ್ಟುವ ಮನುಷ್ಯನು ಕಬ್ಬಿಣ ವನ್ನೂ ಈಟಿಯ ಕಟ್ಟಿಗೆಯನ್ನೂ ಧರಿಸಿಕೊಂಡಿರ ಬೇಕು. ಅದೇ ಸ್ಥಳದಲ್ಲಿ ಬೆಂಕಿಯಿಂದ ಸುಟ್ಟು ಬಿಡಲ್ಪಡುವರು.

ಕೀರ್ತನೆಗಳು 1:3

ಅವನು ತನ್ನ ಕಾಲದಲ್ಲಿ ತನ್ನ ಫಲಕೊಡುವಂಥ, ಎಲೆ ಬಾಡದಂಥ, ನೀರಿನ ಹೊಳೆಗಳ ಬಳಿಯಲ್ಲಿ ನೆಡಲ್ಪಟ್ಟಂಥ ಮರದ ಹಾಗಿರುವನು; ಅವನು ಮಾಡು ವದೆಲ್ಲಾ ಸಫಲವಾಗುವದು.

ಕೀರ್ತನೆಗಳು 80:15

ನಿನ್ನ ಬಲಗೈ ನೆಟ್ಟ ಸಸಿಯನ್ನೂ ನೀನು ನಿನಗೆ ಬಲಪಡಿಸಿ ಕೊಂಡ ಕೊಂಬೆಯನ್ನೂ ಪರಾಮರಿಸು.

ಕೀರ್ತನೆಗಳು 92:13

ಅವರು ಕರ್ತನ ಆಲಯದಲ್ಲಿ ನೆಡಲ್ಪಟ್ಟು ನಮ್ಮ ದೇವರ ಅಂಗಳಗಳಲ್ಲಿ ವೃದ್ಧಿಯಾಗುವರು.

ಯೆಶಾಯ 5:2

ಅವನು ಅದಕ್ಕೆ ಬೇಲಿ ಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದು ಹಾಕಿ ಒಳ್ಳೇ ದ್ರಾಕ್ಷೆಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷೇ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆ ದ್ರಾಕ್ಷೇ ಹಣ್ಣನ್ನು ಕೊಡುವದೆಂದು ಎದುರು ನೋಡು ತ್ತಿರಲು, ಅದು ಕಾಡುಹಣ್ಣನ್ನು ಬಿಟ್ಟಿತು.

ಯೆಶಾಯ 27:11

ಅಲ್ಲಿನ ರೆಂಬೆಗಳು ಒಣಗಿಹೋಗಿ ಮುರಿ ಯಲ್ಪಡುವವು, ಹೆಂಗಸರು ಬಂದು ಅವುಗಳಿಂದ ಬೆಂಕಿ ಹಚ್ಚಿ ಉರಿಸುವರು; ಅದು ವಿವೇಕವುಳ್ಳ ಜನ ವಲ್ಲ. ಆದದರಿಂದ ಅವರನ್ನು ಮಾಡಿದವನು ಅವರಿಗೆ ಕನಿಕರ ತೋರಿಸುವದಿಲ್ಲ. ಅವರನ್ನು ರೂಪಿಸಿದಾತನು ಅವರನ್ನು ಕರುಣಿಸುವದಿಲ್ಲ.

ಯೆಶಾಯ 61:3

ಚೀಯೋ ನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯವನ್ನೂ ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರದ ವಸ್ತ್ರವನ್ನೂ ಕೊಡುವದಕ್ಕೆ ನನ್ನನ್ನು ನೇಮಿಸಿದ್ದಾನೆ. ಆಗ ಅವರಿಗೆ ನೀತಿವೃಕ್ಷಗಳೆಂದೂ ಕರ್ತನು ತಾನು ಮಹಿಮೆ ಹೊಂದುವದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವದು.

ಯೆರೆಮಿಯ 17:8

ಆ ಜನಾಂಗಕ್ಕೆ ವಿರೋಧವಾಗಿ ನಾನು ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಪಶ್ಚಾ ತ್ತಾಪ ಪಡುವೆನು.

ಯೆಹೆಜ್ಕೇಲ 15:2

ಮನುಷ್ಯಪುತ್ರನೇ, ದ್ರಾಕ್ಷೇಗಿಡವು ಬೇರೆ ಗಿಡಗಳಿಗಿಂತಲೂ ಇಲ್ಲವೆ ಅಡವಿ ಯಲ್ಲಿರುವ ಮರಗಳ ಕೊಂಬೆಗಳಿಗಿಂತಲೂ ಹೆಚ್ಚೇನು?

ಮಲಾಕಿ 3:1

ಇಗೋ, ನನ್ನ ದೂತನನ್ನು ನಾನು ಕಳುಹಿಸುತ್ತೇನೆ; ಅವನು ನನ್ನ ಮುಂದೆ ಮಾರ್ಗವನ್ನು ಸಿದ್ಧಮಾಡುವನು; ನೀವು ಹುಡುಕುವ ಕರ್ತನು ಫಕ್ಕನೆ ತನ್ನ ಆಲಯಕ್ಕೆ ಬರುವನು; ನೀವು ಸಂತೋಷಪಡುವ ಒಡಂಬಡಿಕೆಯ ದೂತನೇ, ಇಗೋ, ಬರುತ್ತಾನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ.

ಮಲಾಕಿ 4:1

ಇಗೋ, ಆ ದಿನವು ಬರುತ್ತದೆ; ಅದು ಒಲೆಯ ಹಾಗೆ ಉರಿಯುವದು; ಆಗ ಗರ್ವಿಷ್ಠರೆಲ್ಲರೂ ಹೌದು, ಕೆಟ್ಟದ್ದನ್ನು ಮಾಡುವವ ರೆಲ್ಲರೂ ಹುಲ್ಲಿನಂತಿರುವರು; ಬರುವ ಆ ದಿನವು ಅವರನ್ನು ಸುಟ್ಟುಬಿಡುವದು; ಬೇರನ್ನಾದರೂ ಕೊಂಬೆ ಯನ್ನಾದರೂ ಅವರಿಗೆ ಬಿಡದು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಮತ್ತಾಯ 7:19

ಒಳ್ಳೇ ಫಲವನ್ನು ಕೊಡದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುತ್ತದೆ.

ಮತ್ತಾಯ 21:19

ಆಗ ಆತನು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು ಅದರ ಬಳಿಗೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಅದರಲ್ಲಿ ಕಾಣಲಿಲ್ಲ. ಆಗ ಆತನು ಅದಕ್ಕೆ--ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ ಅಂದನು. ತಕ್ಷಣವೇ ಆ ಅಂಜೂರದ ಮರವು ಒಣಗಿ ಹೋಯಿತು.

ಲೂಕ 3:9

ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು.

ಲೂಕ 13:6

ಆತನು ಈ ಸಾಮ್ಯವನ್ನು ಕೂಡ ಹೇಳಿದನು: ಒಬ್ಬಾನೊಬ್ಬ ಮನುಷ್ಯನಿಗೆ ತನ್ನ ದ್ರಾಕ್ಷೇತೋಟದಲ್ಲಿ ನೆಡಲ್ಪಟ್ಟಿದ್ದ ಒಂದು ಅಂಜೂರದ ಮರವಿತ್ತು; ಅವನು ಬಂದು ಅದರಲ್ಲಿ ಫಲವನ್ನು ಹುಡುಕಿದಾಗ ಒಂದೂ ಸಿಕ್ಕಲಿಲ್ಲ.

ಲೂಕ 23:31

ಅವರು ಹಸಿರಾಗಿರುವ ಮರಕ್ಕೆ ಇವುಗಳನ್ನು ಮಾಡಿದರೆ ಒಣಗಿದ ಮರಕ್ಕೆ ಏನು ಮಾಡಿಯಾರು ಅಂದನು.

ಯೋಹಾನ 15:2

ನನ್ನಲ್ಲಿ ಫಲಫಲಿಸದ ಪ್ರತಿಯೊಂದು ಕೊಂಬೆಯನ್ನು ಆತನು ತೆಗೆದುಹಾಕುತ್ತಾನೆ; ಫಲಕೊಡುವ ಪ್ರತಿಯೊಂದು ಕೊಂಬೆಯು ಹೆಚ್ಚಾಗಿ ಫಲಕೊಡುವ ಹಾಗೆ ಅದನ್ನು ಶುದ್ಧಿ ಮಾಡುತ್ತಾನೆ.

ಯೋಹಾನ 15:6

ಒಬ್ಬನು ನನ್ನಲ್ಲಿ ನೆಲೆಗೊಂಡಿರದಿದ್ದರೆ ಅವನು ಕೊಂಬೆಯಂತೆ ಬಿಸಾಡಲ್ಪಟ್ಟು ಒಣಗಿ ಹೋಗುವದರಿಂದ ಜನರು ಅವುಗಳನ್ನು ಕೂಡಿಸಿ ಬೆಂಕಿಯೊಳಗೆ ಹಾಕುವರು; ಅವು ಸುಡಲ್ಪಡುವವು.

ಹೆಬ್ರಿಯರಿಗೆ 3:1

ಆದದರಿಂದ ಪರಿಶುದ್ಧರಾದ ಸಹೋ ದರರೇ, ಪರಲೋಕದ ಕರೆಯುವಿಕೆಯಲ್ಲಿ ಪಾಲುಗಾರರೇ, ನಾವು ಒಪ್ಪಿಕೊಂಡಿರುವ ಅಪೊ ಸ್ತಲನೂ ಮಹಾಯಾಜಕನೂ ಆಗಿರುವ ಕ್ರಿಸ್ತ ಯೇಸುವನ್ನು ಆಲೋಚಿಸಿರಿ.

ಹೆಬ್ರಿಯರಿಗೆ 6:8

ಆದರೆ ಅದು ಮುಳ್ಳುಗಿಡಗಳನ್ನೂ ಕಳೆಗಳನ್ನೂ ಬೆಳೆಸಿದರೆ ತಿರಸ್ಕರಿಸಲ್ಪಟ್ಟು ಶಾಪಕ್ಕೆ ಗುರಿಯಾಗುತ್ತದೆ. ಅದರ ಅಂತ್ಯವು ಸುಡಲ್ಪಡುವದೇ.

ಹೆಬ್ರಿಯರಿಗೆ 10:28

ಮೋಶೆಯ ನ್ಯಾಯಪ್ರಮಾಣವನ್ನು ಅಸಡ್ಡೆ ಮಾಡಿ ದವನನ್ನು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕನಿಕರವಿಲ್ಲದೆ ಕೊಲ್ಲುತ್ತಿದ್ದರು.

ಹೆಬ್ರಿಯರಿಗೆ 12:25

ನೀವು ಮಾತನಾಡು ತ್ತಿರುವಾತನನ್ನು ಅಸಡ್ಡೆ ಮಾಡದಂತೆ ನೋಡಿಕೊಳ್ಳಿರಿ. ಯಾಕಂದರೆ ಭೂಮಿಯ ಮೇಲೆ ಮಾತನಾಡಿದವನನ್ನು ಅಸಡ್ಡೆ ಮಾಡಿದ್ದಕ್ಕೆ ಅವರು ತಪ್ಪಿಸಿಕೊಳ್ಳದಿದ್ದರೆ ಪರ ಲೋಕದಿಂದ ಮಾತನಾಡುವಾತನಿಂದ ನಾವು ತೊಲಗಿ ದರೆ ಎಷ್ಟೋ ಹೆಚ್ಚಾಗಿ ನಾವು ತಪ್ಪಿಸಿಕೊಳ್ಳಲಾರೆವು.

1 ಪೇತ್ರ 4:17

ದೇವರ ಮನೆಯಲ್ಲಿ ಪ್ರಾರಂಭವಾಗತಕ್ಕ ನ್ಯಾಯ ತೀರ್ಪಿನ ಸಮಯವು ಬಂದದೆ; ಅದು ಮೊದಲು ನಮ್ಮಲ್ಲಿ ಪ್ರಾರಂಭವಾದರೆ ದೇವರ ಸುವಾರ್ತೆಗೆ ಅವಿಧೇಯರಾದವರ ಅಂತ್ಯವು ಏನಾಗಿರುವದು?

Interlinear

Choose Theme