Cross references
ಇದಲ್ಲದೆ ನಾನು ಈಹೊತ್ತು ನಿಮ್ಮ ಮುಂದೆ ಇಡುವ ಈ ಎಲ್ಲಾ ನ್ಯಾಯಪ್ರಮಾಣದ ಪ್ರಕಾರ ನೀತಿಯುಳ್ಳ ನಿಯಮ ನ್ಯಾಯಗಳುಳ್ಳ ದೊಡ್ಡ ಜನಾಂಗ ಯಾವದು?
ಹೇಗಿ ದ್ದರೂ ಈ ಕಾರ್ಯದಿಂದ ನೀನು ಕರ್ತನ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ ನಿನಗೆ ಹುಟ್ಟಿದ ಮಗುವು ಸಹ ನಿಶ್ಚಯ ವಾಗಿ ಸಾಯುವದು ಅಂದನು.
ಕರ್ತನ ಭಯವು ಪವಿತ್ರವಾಗಿದ್ದು ಎಂದೆಂದಿಗೂ ನೆಲೆಯಾಗಿದೆ. ಕರ್ತನ ನ್ಯಾಯಗಳು ಸತ್ಯವಾಗಿದ್ದು ಒಟ್ಟಾಗಿ ನೀತಿಯುಳ್ಳವುಗ ಳಾಗಿವೆ.
ನನ್ನ ಎಲ್ಲಾ ದ್ರೋಹಗಳಿಂದ ನನ್ನನ್ನು ಬಿಡಿಸು; ಬುದ್ಧಿಹೀನನ ನಿಂದೆಗೆ ನನ್ನನ್ನು ಗುರಿಮಾಡಬೇಡ.
ಆತನು ಪರಲೋಕದಿಂದ ಕಳುಹಿಸಿ ನುಂಗಲಿರುವ ವನ ನಿಂದೆಯಿಂದ ನನ್ನನ್ನು ರಕ್ಷಿಸುವನು. ಸೆಲಾ. ದೇವರು ಕೃಪೆಯನ್ನೂ ತನ್ನ ಸತ್ಯವನ್ನೂ ಕಳುಹಿಸುವನು.
ನಿನ್ನ ನ್ಯಾಯ ವಿಧಿಗಳಿಗಾಗಿ ನನ್ನಲ್ಲಿರುವ ಅಭಿಲಾಷೆಯ ನಿಮಿತ್ತ ನನ್ನ ಪ್ರಾಣವು ಜಜ್ಜಿಹೋಗಿದೆ
ನಾನು ನಿನ್ನ ಸಾಕ್ಷಿಗಳನ್ನು ಕೈಕೊಂಡ ಕಾರಣ ನಿಂದೆಯನ್ನೂ ತಿರಸ್ಕಾರವನ್ನೂ ನನಗೆ ದೂರಮಾಡಿಬಿಡು.
ನಿನ್ನ ಸಾಕ್ಷಿಗಳಿಗೆ ಹತ್ತಿಕೊಂಡಿದ್ದೇನೆ; ಓ ಕರ್ತನೇ, ನನ್ನನ್ನು ನಾಚಿಕೆಪಡಿಸಬೇಡ.
ಸತ್ಯದ ವಾಕ್ಯವನ್ನು ನನ್ನ ಬಾಯಿಂದ ಪೂರ್ಣವಾಗಿ ತೆಗೆದುಹಾಕಬೇಡ; ನಿನ್ನ ನ್ಯಾಯವಿಧಿಗಳನ್ನು ನಿರೀಕ್ಷಿಸಿದ್ದೇನೆ,
ಕರ್ತನೇ, ನಿನ್ನ ನ್ಯಾಯ ವಿಧಿಗಳು ನೀತಿಯುಳ್ಳವುಗಳೆಂದೂ ನಂಬಿಕೆಯಿಂದಲೇ ನೀನು ನನ್ನನ್ನು ಶ್ರಮೆಪಡಿಸಿದ್ದೀ ಎಂದು ಬಲ್ಲೆನು.
ನನ್ನ ಕಣ್ಣುಗಳು ನಿನ್ನ ರಕ್ಷಣೆಗೋಸ್ಕರವೂ ನಿನ್ನ ನೀತಿಯ ನುಡಿಗೋಸ್ಕರವೂ ನೆರವೇರುವದನ್ನು ನಿರೀಕ್ಷಿಸುತ್ತಾ ಮೊಬ್ಬಾಗುವವು.
ನನ್ನ ಬಾಯಿಯನ್ನು ತೆರೆದು ಏದುತ್ತಿದ್ದೇನೆ. ನಿನ್ನ ಆಜ್ಞೆಗಳನ್ನು ನಾನು ಬಯಸಿದ್ದೇನೆ.
ಅದನ್ನು ಕೇಳುವವನು ನಿನ್ನನ್ನು ಅವಮಾನಕ್ಕೆ ಗುರಿಪಡಿಸಿಯಾನು, ನಿನ್ನ ಅಪಕೀರ್ತಿಯು ಹೋಗದೆ ಇದ್ದೀತು.
ಹೌದು, ಓ ಕರ್ತನೇ, ನಿನ್ನ ನ್ಯಾಯತೀರ್ಪಿನ ಮಾರ್ಗದಲ್ಲಿ ನಾವು ನಿನಗೋಸ್ಕರ ಕಾದುಕೊಂಡಿದ್ದೇವೆ; ನಿನ್ನ ಹೆಸರಿನ ನೆನಪಿನ ಕಡೆಗೆ ನಮ್ಮ ಆತ್ಮದ ಇಷ್ಟವಾಗಿದೆ.
ಆದರೆ ಅಂಥವುಗಳನ್ನು ಮಾಡುವವರ ಮೇಲೆ ಸತ್ಯಕ್ಕನುಸಾರವಾಗಿ ದೇವರ ನ್ಯಾಯತೀರ್ಪು ಇದೆಯೆಂದು ನಮಗೆ ನಿಶ್ಚಯವುಂಟು.
ಇದಲ್ಲದೆ ಅವನು ನಿಂದೆಗೆ ಗುರಿ ಯಾಗದಂತೆಯೂ ಸೈತಾನನ ಉರ್ಲಿಗೆ ಸಿಕ್ಕಿಬೀಳ ದಂತೆಯೂ ಹೊರಗಿನವರಿಂದ ಒಳ್ಳೇಸಾಕ್ಷಿಯನ್ನು ಹೊಂದಿದವನಾಗಿರತಕ್ಕದ್ದು.
ಆದದರಿಂದ ಯೌವನಸ್ಥ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಕೆಲಸ ನಡಿಸುವದೇ ನನ್ನ ಅಪೇಕ್ಷೆ; ಹಾಗೆ ಮಾಡುವದ ರಿಂದ ವಿರೋಧಿಯ ನಿಂದೆಗೆ ಆಸ್ಪದಕೊಡದೆ ಇರುವರು.
ಇದರಿಂದ ವಿರೋಧಪಕ್ಷ ದವನು ನಿಮ್ಮ ವಿಷಯದಲ್ಲಿ ಕೆಟ್ಟದ್ದು ಹೇಳುವದಕ್ಕೆ ಯಾವದೂ ಇಲ್ಲದೆ ನಾಚಿಕೆಪಡುವನು.