Home Bibles ☰ Books 2 ಸಮುವೇಲ 12:14 · ಕನ್ನಡ ಬೈಬಲ್
2 ಸಮುವೇಲ 12:14 · ಕನ್ನಡ ಬೈಬಲ್

ಹೇಗಿ ದ್ದರೂ ಈ ಕಾರ್ಯದಿಂದ ನೀನು ಕರ್ತನ ಶತ್ರುಗಳಿಗೆ ಬಹಳವಾಗಿ ದೇವದೂಷಣೆ ಮಾಡುವಂತೆ ಆಸ್ಪದ ಕೊಟ್ಟ ಕಾರಣ ನಿನಗೆ ಹುಟ್ಟಿದ ಮಗುವು ಸಹ ನಿಶ್ಚಯ ವಾಗಿ ಸಾಯುವದು ಅಂದನು.

Cross references

ನೆಹೆಮ್ಯ 5:9

ನಾನು ಅವರಿಗೆನೀವು ಮಾಡುವುದು ಒಳ್ಳೇದಲ್ಲ; ನಮ್ಮ ಶತ್ರುಗಳಾದ ಅನ್ಯರ ನಿಂದೆಯ ನಿಮಿತ್ತ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲಾ.

ಕೀರ್ತನೆಗಳು 74:10

ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?

ಕೀರ್ತನೆಗಳು 89:31

ಅವರು ನನ್ನ ನೇಮಕಗಳನ್ನು ಮುರಿದು ನನ್ನ ಆಜ್ಞೆಗಳನ್ನು ಕೈಕೊಳ್ಳದೇ ಹೋದರೆ,

ಕೀರ್ತನೆಗಳು 94:12

ಓ ಕರ್ತನೇ, ನೀನು ಶಿಕ್ಷಿಸುವವನೂ ನಿನ್ನ ನ್ಯಾಯ ಪ್ರಮಾಣದಿಂದ ಯಾರಿಗೆ ಕಲಿಸುವಿಯೋ ಅವನು ಧನ್ಯನು.

ಕೀರ್ತನೆಗಳು 99:8

ನಮ್ಮ ದೇವರಾದ ಓ ಕರ್ತನೇ, ನೀನು ಅವರಿಗೆ ಉತ್ತರಕೊಟ್ಟೆ; ಅವರ ಕೃತ್ಯಗಳಿಗೋಸ್ಕರ ನೀನು ಅವ ರಿಗೆ ಮುಯ್ಯಿಗೆ ಮುಯ್ಯಿ ಕೊಡುವಾತನಾಗಿದ್ದರೂ ಅವರನ್ನು ಕ್ಷಮಿಸುವ ದೇವರು ನೀನಾಗಿದ್ದೀ.ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.

ಸಾಮೇತಿಗಳು 3:11

ನನ್ನ ಮಗನೇ, ಕರ್ತನ ಶಿಕ್ಷೆಯನ್ನು ತಾತ್ಸಾರ ಮಾಡಬೇಡ. ಮಾತ್ರವಲ್ಲದೆ ಆತನ ತಿದ್ದುವಿಕೆಗೆ ಬೇಸರ ಗೊಳ್ಳಬೇಡ;

ಯೆಶಾಯ 52:5

ಹಾಗಾದರೆ ಈಗ ಕರ್ತನು ಹೇಳುವದೇನಂದರೆ ನನಗೆ ಇಲ್ಲಿ ಏನಿದೆ? ನನ್ನ ಜನರು ಏನೂ ಇಲ್ಲದೆ ಒಯ್ಯಲ್ಪಟ್ಟಿದ್ದಾರಲ್ಲಾ; ಆಳುವವರು ಅವರನ್ನು ಗೋಳಾಡಿಸುತ್ತಾರಲ್ಲಾ ಮತ್ತು ನನ್ನ ಹೆಸರು ಪ್ರತಿದಿನವೂ ಎಡೆಬಿಡದೇ ದೂಷಣೆಗೆ ಗುರಿಯಾಗಿದೆ ಎಂದು ಕರ್ತನು ಹೇಳುತ್ತಾನೆ.

ಯೆಹೆಜ್ಕೇಲ 36:20

ಅವರು ಆ ಅನ್ಯಜನಾಂಗಗಳೊಳಗೆ ಸೇರಿಕೊಂಡ ಮೇಲೆ--ಇವರೇ ಕರ್ತನ ಜನರು ಮತ್ತು ಇವರು ಆತನ ದೇಶದಿಂದ ಹೊರಟುಹೋದರು ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಮಾಡುವರು.

ಆಮೋಸ 3:2

ಭೂಮಿಯ ಎಲ್ಲಾ ಕುಟುಂಬಗಳಲ್ಲಿ ನಿಮ್ಮನ್ನು ಮಾತ್ರವೇ ತಿಳಿದಿದ್ದೇನೆ; ಆದದರಿಂದ ನಾನು ನಿಮ್ಮ ಎಲ್ಲಾ ಅಕ್ರಮಗಳಿಗಾಗಿ ಶಿಕ್ಷಿಸುತ್ತೇನೆ.

ಮತ್ತಾಯ 18:7

ತೊಡಕುಗಳ ನಿಮಿತ್ತವಾಗಿ ಲೋಕಕ್ಕೆ ಅಯ್ಯೋ! ಯಾಕಂದರೆ ತೊಡಕುಗಳು ಬಂದೇ ಬರುವವು; ಆದರೆ ಯಾವ ಮನುಷ್ಯನಿಂದ ತೊಡಕು ಬರುವದೋ ಅವನಿಗೆ ಅಯ್ಯೋ!

ರೋಮಾಪುರದವರಿಗೆ 2:24

ಬರೆಯಲ್ಪಟ್ಟ ಪ್ರಕಾರ--ನಿಮ್ಮ ಮೂಲಕ ದೇವರ ಹೆಸರು ಅನ್ಯ ಜನಾಂಗಗಳಲ್ಲಿ ದೂಷಿಸಲ್ಪಡುತ್ತದೆ.

1 ಕೊರಿಂಥದವರಿಗೆ 11:32

ಆದರೆ ನಾವು ನಮ್ಮನ್ನು ವಿಚಾರಿಸಿ ಕೊಂಡಾಗ ಲೋಕದವರ ಸಂಗಡ ನಮಗೆ ಅಪರಾಧಿಗಳೆಂಬ ನಿರ್ಣಯವಾಗಬಾರದೆಂದು ಕರ್ತನು ನಮ್ಮನ್ನು ಶಿಕ್ಷಿಸುತ್ತಾನೆ.

Interlinear

Choose Theme