Home Bibles ಕೀರ್ತನೆಗಳು 119:38 · ಕನ್ನಡ ಬೈಬಲ್
ಕೀರ್ತನೆಗಳು 119:38 · ಕನ್ನಡ ಬೈಬಲ್

ನಿನ್ನಲ್ಲಿ ಭಯಭಕ್ತಿಯುಳ್ಳ ಸೇವಕನಿಗೆ ವಾಕ್ಯವನ್ನು ನೇರವೇರಿಸು,

Cross references

2 ಸಮುವೇಲ 7:25

ಈಗ ಓ ಕರ್ತನಾದ ದೇವರೇ, ನೀನು ನಿನ್ನ ದಾಸನನ್ನು ಕುರಿತೂ ಅವನ ಮನೆಯನ್ನು ಕುರಿತೂ ಹೇಳಿದ ವಾಕ್ಯವನ್ನು ಶಾಶ್ವತಕ್ಕೂ ಸ್ಥಿರಪಡಿಸಿ ನೀನು ಹೇಳಿದ ಹಾಗೆಯೇ ಮಾಡು.

1 ಅರಸುಗಳು 8:26

ಈಗ ಓ ಇಸ್ರಾಯೇಲಿನ ದೇವರೇ, ನನ್ನ ತಂದೆಯಾದ ನಿನ್ನ ಸೇವಕನಾದ ದಾವೀದನಿಗೆ ಹೇಳಿದ ವಾಕ್ಯವು ದೃಢವಾಗಲಿ.

ಕೀರ್ತನೆಗಳು 103:11

ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ಆತನ ಕೃಪೆಯು ಆತನಿಗೆ ಭಯಪಡುವವರ ಮೇಲೆ ಅಷ್ಟು ಅಪಾರವಾಗಿದೆ.

ಕೀರ್ತನೆಗಳು 103:13

ತಂದೆಯು ಮಕ್ಕಳ ಮೇಲೆ ಅಂತಃಕರಣ ಪಡುವ ಪ್ರಕಾರ ಕರ್ತನು ತನಗೆ ಭಯಪಡುವವರ ಮೇಲೆ ಅಂತಃಕರಣಪಡುವವನಾಗಿದ್ದಾನೆ.

ಕೀರ್ತನೆಗಳು 103:17

ಆದರೆ ಕರ್ತನ ಕೃಪೆಯು ಆತನಿಗೆ ಭಯಪಡುವವರ ಮೇಲೆಯೂ ಆತನ ನೀತಿಯು ಮಕ್ಕಳ ಮಕ್ಕಳಿಗೂ

ಕೀರ್ತನೆಗಳು 119:49

ನಾನು ನಿರೀಕ್ಷಿಸುವಂತೆ ಮಾಡಿದ ನಿನ್ನ ವಾಕ್ಯವನ್ನು ನಿನ್ನ ಸೇವಕನಿಗೋಸ್ಕರ ನೀನು ಜ್ಞಾಪಕಮಾಡಿಕೋ,

ಕೀರ್ತನೆಗಳು 119:50

ನನ್ನ ಸಂಕಷ್ಟದಲ್ಲಿ ಇದೇ ನನ್ನ ಆದರಣೆಯು; ಯಾಕಂದರೆ ನಿನ್ನ ವಾಕ್ಯವು ನನ್ನನ್ನು ಬದುಕಿಸಿತು.

ಕೀರ್ತನೆಗಳು 119:76

ನಿನ್ನ ಸೇವಕನಿಗೆ ನೀನು ಹೇಳಿದ ಮಾತಿನ ಪ್ರಕಾರ ನನ್ನನ್ನು ಆದರಿಸುವದಕ್ಕೆ ನಿನ್ನ ದಯಾಪೂರ್ಣ ಕರುಣೆ ಇರಲಿ.

ಕೀರ್ತನೆಗಳು 119:154

ನನ್ನ ವ್ಯಾಜ್ಯವನ್ನು ನಡಿಸಿ ನನ್ನನ್ನು ಬಿಡುಗಡೆ ಮಾಡು; ನಿನ್ನ ವಾಕ್ಯದ ಪ್ರಕಾರ ನನ್ನನ್ನು ಉಜ್ಜೀವಿಸು.

ಕೀರ್ತನೆಗಳು 145:19

ತನಗೆ ಭಯಪಡುವವರ ಇಷ್ಟವನ್ನು ತೀರಿಸುತ್ತಾನೆ. ಅವರ ಮೊರೆಯನ್ನು ಕೇಳಿ ಅವರನ್ನು ರಕ್ಷಿಸುತ್ತಾನೆ.

ಕೀರ್ತನೆಗಳು 147:11

ಕರ್ತನು ತನಗೆ ಭಯಪಡುವವರಲ್ಲಿಯೂ ತನ್ನ ಕರುಣೆಗೆ ಎದುರು ನೋಡುವವರಲ್ಲಿಯೂ ಇಷ್ಟಪಡುತ್ತಾನೆ.

2 ಕೊರಿಂಥದವರಿಗೆ 1:20

ಆದದರಿಂದ ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ದೇವರ ಎಲ್ಲಾ ವಾಗ್ದಾನ ಗಳು ಆತನಲ್ಲಿ ಹೌದಾಗಿವೆ, ಆತನಲ್ಲಿಯೇ ಆಮೆನ್‌ ಆಗಿವೆ.

Interlinear

Choose Theme