Cross references
ಮರಣದಲ್ಲಿ ನಿನ್ನ ಜ್ಞಾಪಕವಿಲ್ಲ; ಸಮಾಧಿ ಯಲ್ಲಿ ನಿನಗೆ ಉಪಕಾರಸ್ತುತಿ ಮಾಡುವವರು ಯಾರು?
ಓ ನನ್ನ ದೇವರಾದ ಕರ್ತನೇ, ನೀನು ಮಾಡಿದ ನಿನ್ನ ಅದ್ಭುತ ಕಾರ್ಯಗಳೂ ನಮ್ಮ ಕಡೆಗಿರುವ ನಿನ್ನ ಯೋಚನೆಗಳೂ ಬಹಳ; ಅವುಗಳನ್ನು ಕ್ರಮವಾಗಿ ನಿನ್ನ ಮುಂದೆ ಎಣಿಸಲಾರೆನು; ಅವುಗಳನ್ನು ನಾನು ತಿಳಿಸಿ ಹೇಳಬೇಕಾದರೆ ಎಣಿಸುವದಕ್ಕಿಂತ ಹೆಚ್ಚಾಗಿವೆ.
ನಿನ್ನ ನೀತಿಯನ್ನು ನನ್ನ ಹೃದಯದಲ್ಲಿ ಅಡಗಿಸಲಿಲ್ಲ; ನಿನ್ನ ನಂಬಿಕೆಯನ್ನೂ ರಕ್ಷಣೆಯನ್ನೂ ನಾನು ಪ್ರಕಟಿಸಿದ್ದೇನೆ; ನಿನ್ನ ಪ್ರೀತಿ ಕರುಣೆಗಳನ್ನೂ ಸತ್ಯವನ್ನೂ ದೊಡ್ಡ ಸಭೆಯಲ್ಲಿ ನಾನು ಮರೆಮಾಡಲಿಲ್ಲ.
ಓ ದೇವರೇ, ನನ್ನ ಯೌವನದಿಂದ ನನಗೆ ನೀನು ಕಲಿಸಿದ್ದೀ; ಈ ವರೆಗೂ ನಿನ್ನ ಅದ್ಭುತ ಕಾರ್ಯಗಳನ್ನು ತಿಳಿಸುವೆನು.
ನನಗಾದರೋ ದೇವರ ಸವಿಾಪಕ್ಕೆ ಬರುವದೇ ಒಳ್ಳೇದಾಗಿದೆ; ನಿನ್ನ ಕ್ರಿಯೆ ಗಳನ್ನೆಲ್ಲಾ ಸಾರುವದಕ್ಕೆ ಕರ್ತನಾದ ದೇವರಲ್ಲಿ ನನ್ನ ಭರವಸವನ್ನು ಇಟ್ಟಿದ್ದೇನೆ.
ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
ನನ್ನ ತುಟಿಗಳಿಂದ ನಿನ್ನ ನ್ಯಾಯವಿಧಿಗಳನ್ನೆಲ್ಲಾ ಸಾರಿದ್ದೇನೆ.
ತಲಾಂತರಕ್ಕೆ ಇನ್ನೊಂದು ತಲಾಂತರವು ನಿನ್ನ ಕೆಲಸಗಳನ್ನು ಪ್ರಕಟಿಸುತ್ತದೆ; ನಿನ್ನ ಪರಾಕ್ರಮಗಳನ್ನು ತಿಳಿಸುತ್ತಾರೆ.
ಓ ಕರ್ತನೇ, ಇಂಥಾ ಸಂಬಂಧಗಳಿಂದ ಮನುಷ್ಯರು ಬದುಕುತ್ತಾರೆ, ಇವೆಲ್ಲವುಗಳಿಂದಲೇ ನನ್ನ ಆತ್ಮದಲ್ಲಿ ಜೀವವುಂಟು, ಹೀಗೆ ನನ್ನನ್ನು ನೀನು ಸ್ವಸ್ಥಮಾಡಿ ಬದುಕುವಂತೆ ಮಾಡಿದಿ.
ಬಾಬೇಲಿನ ಅರಸನು ಚಿದ್ಕೀಯನ ಮಕ್ಕಳನ್ನು ಅವನ ಕಣ್ಣುಗಳ ಮುಂದೆ ಕೊಂದು ಹಾಕಿಸಿದನು. ಯೆಹೂದದ ಪ್ರಧಾನರೆಲ್ಲ ರನ್ನೂ ಸಹ ರಿಬ್ಲದಲ್ಲಿ ಕೊಂದು ಹಾಕಿಸಿದನು.
ನನ್ನ ದೇವರಾದ ಕರ್ತನೇ, ನನ್ನ ಪರಿಶುದ್ಧನೇ, ನೀನು ಅನಾದಿಯಿಂದ ಇರುತ್ತೀಯಲ್ಲವೋ? ನಾವು ಸಾಯುವದಿಲ್ಲ. ಓ ಕರ್ತನೇ, ನ್ಯಾಯತೀರ್ಪಿಗೆ ಅವ ರನ್ನು ನೇಮಿಸಿದ್ದೀ; ಓ ಪರಾಕ್ರಮಿಯಾದ ದೇವರೇ, ಶಿಕ್ಷೆಗೆ ಅವರನ್ನು ಸ್ಥಾಪಿಸಿದ್ದೀ.
ಯೇಸು ಅದನ್ನು ಕೇಳಿ--ಈ ರೋಗವು ಮರಣಕ್ಕಾಗಿಯಲ್ಲ, ಆದರೆ ದೇವಕುಮಾರನು ಅದರಿಂದ ಮಹಿಮೆ ಹೊಂದುವಂತೆ ದೇವರ ಮಹಿಮೆಗೋಸ್ಕರವೇ ಬಂದದ್ದು ಎಂದು ಹೇಳಿದನು.
ನಮ್ಮಲ್ಲಿ ಒಬ್ಬನಾದರೂ ತನಗಾಗಿ ಬದುಕುವದೂ ಇಲ್ಲ, ತನಗಾಗಿ ಸಾಯುವದೂ ಇಲ್ಲ.