Home Bibles ಕೀರ್ತನೆಗಳು 118:7 · ಕನ್ನಡ ಬೈಬಲ್
ಕೀರ್ತನೆಗಳು 118:7 · ಕನ್ನಡ ಬೈಬಲ್

ನನಗೆ ಸಹಾಯ ಮಾಡುವವರೊಂದಿಗೆ ಕರ್ತನು ನನ್ನ ಪಕ್ಷವನ್ನು ಹಿಡಿಯುತ್ತಾನೆ. ಆದದರಿಂದ ನಾನು ನನ್ನ ಹಗೆಯವರ ಮೇಲೆ ನನ್ನಾಶೆಯನ್ನು ತೀರಿಸು ವದನ್ನು ನಾನು ನೋಡುವೆನು.

Cross references

1 ದಿನವೃತ್ತಾಂತ 12:18

ಆಗ ಆತ್ಮನು ಅದಿಪತಿಗಳ ಮುಖ್ಯಸ್ಥನಾದ ಅಮಸಾಯಿಯ ಮೇಲೆ ಬಂದನು; ಆಗ ಅವನು--ದಾವೀದನೇ, ನಾವು ನಿನ್ನವರು; ಇಷಯನ ಮಗನೇ, ನಾವು ನಿನ್ನ ಕಡೆಯವ ರಾಗಿದ್ದೇವೆ; ಸಮಾಧಾನ, ನಿನಗೆ ಸಮಾಧಾನ; ನಿನ್ನ ಸಹಾಯಕರಿಗೆ ಸಮಾಧಾನ; ನಿನ್ನ ದೇವರು ನಿನಗೆ ಸಹಾಯ ಮಾಡುತ್ತಾನೆ ಅಂದನು. ಆಗ ದಾವೀದನು ಅವರನ್ನು ಅಂಗೀಕರಿಸಿ ಅವರನ್ನು ದಂಡಿನ ಅಧಿಪತಿ ಗಳಾಗಿ ಮಾಡಿದನು.

ಕೀರ್ತನೆಗಳು 54:4

ಇಗೋ, ದೇವರು ನನ್ನ ಸಹಾಯಕನು; ಕರ್ತನು ನನ್ನ ಪ್ರಾಣವನ್ನು ಉದ್ಧಾರ ಮಾಡುವವರ ಸಂಗಡ ಇದ್ದಾನೆ.

ಕೀರ್ತನೆಗಳು 54:6

ನಾನು ನಿನಗೆ ಉಚಿತವಾಗಿ ಬಲಿಯನ್ನು ಅರ್ಪಿಸುವೆನು. ಓ ಕರ್ತನೇ, ನಿನ್ನ ಹೆಸರನ್ನು ಕೊಂಡಾ ಡುವೆನು, ಅದು ಒಳ್ಳೇದು.ಎಲ್ಲಾ ಇಕ್ಕಟ್ಟಿನಿಂದ ಆತನು ನನ್ನನ್ನು ಬಿಡಿಸಿದ್ದಾನೆ; ನನ್ನ ಶತ್ರುವಿನ ಗತಿ ಯನ್ನು ನೋಡಿ ನನ್ನ ಕಣ್ಣು ಸಂತೋಷಿಸುತ್ತದೆ.

ಕೀರ್ತನೆಗಳು 54:7

ಎಲ್ಲಾ ಇಕ್ಕಟ್ಟಿನಿಂದ ಆತನು ನನ್ನನ್ನು ಬಿಡಿಸಿದ್ದಾನೆ; ನನ್ನ ಶತ್ರುವಿನ ಗತಿ ಯನ್ನು ನೋಡಿ ನನ್ನ ಕಣ್ಣು ಸಂತೋಷಿಸುತ್ತದೆ.

ಕೀರ್ತನೆಗಳು 55:18

ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು.

ಕೀರ್ತನೆಗಳು 59:10

ಕರುಣೆಯುಳ್ಳ ನನ್ನ ದೇವರು ನನಗೆ ಪ್ರಸನ್ನನಾಗುವನು; ದೇವರು ನನ್ನ ಇಷ್ಟದಂತೆ ನನ್ನ ವಿರೋಧಿಗಳಿಗೆ ಆಗುವದನ್ನು ನೋಡುವಂತೆ ಮಾಡುವನು.

ಕೀರ್ತನೆಗಳು 59:11

ನನ್ನ ಜನರು ಮರೆತುಬಿಡದ ಹಾಗೆ ಅವರನ್ನು ಕೊಲ್ಲಬೇಡ; ನಿನ್ನ ಪರಾಕ್ರಮದಿಂದ ಅವರನ್ನು ಚದರಿಸಿ, ನಮ್ಮ ಗುರಾಣಿಯಾದ ಓ ಕರ್ತನೇ, ಅವರನ್ನು ಕೆಡವಿಹಾಕು.

ಕೀರ್ತನೆಗಳು 92:11

ನನ್ನ ಕಣ್ಣು ಸಹ ನನ್ನ ವಿರೋಧಿಗಳ ಮೇಲೆ ದೃಷ್ಟಿಸುವದು; ನನಗೆ ವಿರೋಧವಾಗಿ ಏಳುವ ದುರ್ಮಾರ್ಗಿಗಳನ್ನು ಕುರಿತು ನನ್ನ ಇಷ್ಟದಂತೆ ನನ್ನ ಕಿವಿಗಳು ಕೇಳುವವು.

ಕೀರ್ತನೆಗಳು 112:8

ಅವನ ಹೃದಯವು ದೃಢವಾಗಿದೆ; ತನ್ನ ವೈರಿಗಳ ಮೇಲೆ ತನ್ನ ಇಷ್ಟವನ್ನು ನೋಡುವ ಮಟ್ಟಿಗೂ ಭಯಪಡನು.

ಯೆಶಾಯ 41:13

ನಿನಗೆ ಸಹಾಯ ಮಾಡುತ್ತೇನೆಂದು ನಿನಗೆ ಹೇಳುವ ಕರ್ತನೂ ನಿನ್ನ ದೇವರೂ ಆಗಿರುವ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.

Interlinear

Choose Theme