ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ.
Cross references
ಈಗ ನನ್ನ ಮಗಳೇ, ನೀನು ಭಯಪಡಬೇಡ; ನಿನಗೆ ಬೇಕಾಗಿರುವದನ್ನು ನಿನಗೆ ಮಾಡುವೆನು; ಯಾಕಂದರೆ ನೀನು ಗುಣವತಿ ಯಾದ ಸ್ತ್ರೀ ಎಂದು ಪಟ್ಟಣದಲ್ಲಿರುವ ನನ್ನ ಜನರೆಲ್ಲರು ಬಲ್ಲರು.
ಹವಳವನ್ನೂ ಮುತ್ತುಗಳನ್ನೂ ನೆನಪು ಮಾಡುವದಿಲ್ಲ; ಜ್ಞಾನದ ಸಂಪತ್ತು ಮಾಣಿಕ್ಯಗಳಿಗಿಂತ ಮೇಲಾದದ್ದು.
ಅದು ಮಾಣಿಕ್ಯಗಳಿಗಿಂತಲೂ ಬಹು ಅಮೂಲ್ಯವುಳ್ಳದ್ದಾಗಿದ್ದು ನಿನ್ನ ಇಷ್ಟ ವಸ್ತುಗಳೆಲ್ಲವೂ ಅದಕ್ಕೆ ಸಮವಾಗುವದಿಲ್ಲ.
ಮಾಣಿಕ್ಯ ಗಳಿಗಿಂತ ಜ್ಞಾನವು ಉತ್ತಮ, ಅಪೇಕ್ಷಿಸಲ್ಪಡತಕ್ಕ ಎಲ್ಲಾ ವಸ್ತುಗಳು ಅದಕ್ಕೆ ಹೋಲಿಸುವದಕ್ಕಾಗದು.
ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ನಾಚಿಕೆಪಡಿಸುವವಳು ಅವನ ಎಲುಬುಗಳಿಗೆ ಕೊಳೆ ಯುವಿಕೆಯಂತೆ ಇರುವಳು.
ಜ್ಞಾನಿಯಾದ ಪ್ರತಿ ಸ್ತ್ರೀಯು ತನ್ನ ಮನೆಯನ್ನು ಕಟ್ಟುತ್ತಾಳೆ; ಬುದ್ಧಿಹೀನಳೋ ತನ್ನ ಕೈಗಳಿಂದಲೇ ಅದನ್ನು ಕಿತ್ತುಹಾಕುತ್ತಾಳೆ.
ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ.
ಮನೆಯೂ ಐಶ್ವರ್ಯವೂ ಪಿತೃಗಳ ಸ್ವಾಸ್ಥ್ಯವು; ವಿವೇಕಿಯಾದ ಹೆಂಡತಿಯು ಕರ್ತ ನಿಂದಲೇ.
ಬಂಗಾರವೂ ಮಾಣಿಕ್ಯಗಳ ರಾಶಿಯೂ ಇವೆ. ತಿಳುವಳಿಕೆಯ ತುಟಿಗಳು ಅಮೂಲ್ಯವಾದ ರತ್ನ ವಾಗಿವೆ.
ಅದನ್ನು ಇನ್ನೂ ನನ್ನ ಪ್ರಾಣವು ಹುಡುಕುತ್ತದೆ; ನನಗೆ ಸಿಕ್ಕಲಿಲ್ಲ; ಸಾವಿರದಲ್ಲಿ ಒಬ್ಬ ಪುರುಷನನ್ನು ನಾನು ಕಂಡುಕೊಂಡಿ ದ್ದೇನೆ; ಅವರೆಲ್ಲರಲ್ಲಿ ನಾನು ಒಬ್ಬ ಹೆಂಗಸನ್ನು ಕಂಡು ಕೊಳ್ಳಲಿಲ್ಲ.ಇಗೋ, ದೇವರು ಮನುಷ್ಯನನ್ನು ಸತ್ಯವಂತನನ್ನಾಗಿ ಮಾಡಿದನು. ಇದನ್ನು ಮಾತ್ರ ನಾನು ಕಂಡುಕೊಂಡಿದ್ದೇನೆ, ಅವರಾದರೋ ಅನೇಕ ಕಲ್ಪನೆ ಗಳನ್ನು ಹುಡುಕಿದ್ದಾರೆ.
ಅರು ವತ್ತು ಮಂದಿ ರಾಣಿಯರೂ ಎಂಭತ್ತು ಮಂದಿ ಉಪಪತ್ನಿಯರೂ ಲೆಕ್ಕವಿಲ್ಲದ ಕನ್ಯೆಯರೂ ಇದ್ದಾರೆ.
ಪುರಷರೇ, ನೀವು ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ, ಯಾಕಂದರೆ ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ತಾನೇ ಒಪ್ಪಿಸಿಕೊಟ್ಟನು.