Home Bibles ಸಾಮೇತಿಗಳು 18:22 · ಕನ್ನಡ ಬೈಬಲ್
ಸಾಮೇತಿಗಳು 18:22 · ಕನ್ನಡ ಬೈಬಲ್

ಪತ್ನಿ ಯನ್ನು ದೊರಕಿಸಿಕೊಂಡವನು ಒಳ್ಳೇದನ್ನು ಸಂಪಾದಿಸಿ ದವನಾಗಿ ಕರ್ತನ ದಯೆಯನ್ನು ಹೊಂದುತ್ತಾನೆ.

Cross references

ಆದಿಕಾಂಡ 2:18

ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು.

ಆದಿಕಾಂಡ 24:67

ಇಸಾಕನು ಆಕೆಯನ್ನು ತನ್ನ ತಾಯಿ ಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಅಂಗೀಕರಿಸಿದನು. ಆಕೆಯು ಅವನ ಹೆಂಡತಿಯಾದಳು; ಅವನು ಆಕೆಯನ್ನು ಪ್ರೀತಿಮಾಡಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ವಿಷಯದಲ್ಲಿ ಆದರಣೆ ಹೊಂದಿದನು.

ಆದಿಕಾಂಡ 29:20

ಈ ಪ್ರಕಾರ ಯಾಕೋ ಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರುಷಗಳು ಅವನಿಗೆ ಸ್ವಲ್ಪ ದಿನಗಳಾಗಿ ತೋರಿದವು.

ಆದಿಕಾಂಡ 29:28

ಯಾಕೋಬನು ಅದರಂತೆ ಮಾಡಿ ಅವಳ ವಾರವನ್ನು ಪೂರೈಸಿದನು. ಆಗ ಅವನು ತನ್ನ ಮಗಳಾದ ರಾಹೇಳಲನ್ನು ಅವನಿಗೆ ಹೆಂಡತಿ ಯಾಗಿ ಕೊಟ್ಟನು.

ರೂತ 4:10

ಇದಲ್ಲದೆ ಸತ್ತವನ ಸಹೋದರರಿಂದಲೂ ಅವನ ಸ್ಥಳದ ಬಾಗಲದಿಂದಲೂ ಅವನ ಹೆಸರು ಕಡಿದು ಹಾಕಲ್ಪಡದ ಹಾಗೆ ಸತ್ತವನ ಬಾಧ್ಯತೆಯಲ್ಲಿ ಅವನ ಹೆಸರನ್ನು ಸ್ಥಿರಮಾಡಲು ನಾನು ಮಹ್ಲೋನನ ಹೆಂಡತಿಯಾಗಿದ್ದ ಮೋವಾಬ್ಯಳಾದ ರೂತಳನ್ನು ನನಗೆ ಹೆಂಡತಿಯಾಗಿ ಕೊಂಡುಕೊಂಡೆನು.

ಸಾಮೇತಿಗಳು 3:4

ಹೀಗೆ ನೀನು ದೇವರ ಮುಂದೆಯೂ ಮನುಷ್ಯನ ಮುಂದೆಯೂ ದಯೆಯನ್ನೂ ಒಳ್ಳೆಯ ವಿವೇಕವನ್ನೂ ಪಡೆದುಕೊಳ್ಳುವಿ.

ಸಾಮೇತಿಗಳು 5:15

ನಿನ್ನ ಸ್ವಂತ ಕೊಳದ ನೀರನ್ನು, ನಿನ್ನ ಸ್ವಂತ ಬಾವಿ ಯೊಳಗಿಂದ ಉಕ್ಕಿಬರುವ ಜಲವನ್ನು ಕುಡಿ.

ಸಾಮೇತಿಗಳು 8:35

ನನ್ನನ್ನು ಕಂಡುಕೊಳ್ಳುವವನು ಜೀವವನ್ನು ಕಂಡುಕೊಂಡು ಕರ್ತನ ದಯವನ್ನು ಹೊಂದುವನು.ಆದರೆ ನನಗೆ ವಿರೋಧವಾಗಿ ಪಾಪಮಾಡುವವನು ತನ್ನ ಸ್ವಂತ ಪ್ರಾಣಕ್ಕೆ ಕೇಡುಮಾಡಿಕೊಳ್ಳುತ್ತಾನೆ. ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.

ಸಾಮೇತಿಗಳು 12:4

ಗುಣವತಿಯಾದ ಸ್ತ್ರೀಯು ತನ್ನ ಪತಿಗೆ ಕಿರೀಟ; ನಾಚಿಕೆಪಡಿಸುವವಳು ಅವನ ಎಲುಬುಗಳಿಗೆ ಕೊಳೆ ಯುವಿಕೆಯಂತೆ ಇರುವಳು.

ಸಾಮೇತಿಗಳು 19:14

ಮನೆಯೂ ಐಶ್ವರ್ಯವೂ ಪಿತೃಗಳ ಸ್ವಾಸ್ಥ್ಯವು; ವಿವೇಕಿಯಾದ ಹೆಂಡತಿಯು ಕರ್ತ ನಿಂದಲೇ.

ಸಾಮೇತಿಗಳು 31:10

ಗುಣವತಿಯಾದ ಸ್ತ್ರೀಯನ್ನು ಯಾವನು ಕಂಡು ಕೊಂಡಾನು? ಅವಳ ಕ್ರಯ ಹವಳಕ್ಕಿಂತಲೂ ಅಮೂ ಲ್ಯವೇ.

ಸಭಾಪ್ರಸಂಗಿ 9:9

ನಿನ್ನ ನಿರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ಆತನು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ ನೀನು ಪ್ರೀತಿಸುವ ನಿನ್ನ ಹೆಂಡತಿ ಯೊಡನೆ ಆನಂದದಿಂದ ವಾಸಿಸು; ಸೂರ್ಯನ ಕೆಳಗೆ ನೀನು ಪಡುವ ಕಷ್ಟದಲ್ಲಿಯೂ ಇದೇ ನಿನ್ನ ಪಾಲಾಗಿದೆ.

ಹೊಶೇಯ 12:12

ಯಾಕೋಬನು ಸಿರಿಯಾ ದೇಶಕ್ಕೆ ಓಡಿಹೋದನು; ಇಸ್ರಾಯೇಲನು ಹೆಂಡತಿಯ ನಿಮಿತ್ತ ಸೇವೆಮಾಡಿ ಹೆಂಡತಿಯ ನಿಮಿತ್ತ ಕುರಿಗಳನ್ನು ಕಾದನು.

1 ಕೊರಿಂಥದವರಿಗೆ 7:2

ಆದಾಗ್ಯೂ ಜಾರತ್ವಕ್ಕೆ ದೂರವಿರುವಂತೆ ಪ್ರತಿ ಮನುಷ್ಯನಿಗೆ ಅವನ ಸ್ವಂತ ಹೆಂಡತಿಯೂ ಪ್ರತಿ ಸ್ತ್ರೀಗೆ ಅವಳ ಸ್ವಂತ ಗಂಡನೂ ಇರಲಿ.

Interlinear

Choose Theme